ಏರ್ಟೆಲ್ ಗ್ರಾಹಕರಿಗೆ ಹೊಸ ಸುದ್ದಿ; ಅನ್ಲಿಮಿಟೆಡ್ 5ಜಿ ಡಾಟಾ ಜೊತೆಗೆ ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್ಸ್ಟಾರ್ ಉಚಿತ

New Delhi : ಟೆಲಿಕಾಂ ಸಂಸ್ಥೆಯಾದ (telecom company) ಏರ್ಟೆಲ್ (Airtel) ಈಗಾಗಲೇ ದೇಶದ ಬಹುತೇಕ ಕಡೆ 5ಜಿ ನೆಟ್ವರ್ಕ್ (5G network) ಅಳವಡಿಸಿದೆ. ಇದೀಗ ತನ್ನ ಗ್ರಾಹಕರಿಗೆ ಉಚಿತವಾಗಿ 5ಜಿ ಡಾಟಾ ನೀಡುವ ಮೂಲಕ (Airtel 5G plans) 5ಜಿ ಸೌಲಭ್ಯದ ರುಚಿ ತೋರಿಸುವ ತವಕದಲ್ಲಿದೆ. ಏರ್‍ಟೆಲ್‌ ಸದ್ಯ ತನ್ನ 5ಜಿ ಸೇವೆಗಳನ್ನು ಏರ್ಟೆಲ್ ಉಚಿತವಾಗಿ ನೀಡುತ್ತಿದೆ.

ಅಲ್ಲದೆ ಅನ್ಲಿಮಿಟೆಡ್ 5ಜಿ ಜೊತೆಗೆ ಅಮೇಜಾನ್ ಪ್ರೈಮ್ (Amazon Prime) ಮತ್ತು ಡಿಸ್ನಿ ಹಾಟ್ಸ್ಟಾರ್ ಸಬ್ಸ್ಕ್ರಿಪ್ಷನ್ ಕೂಡ ಉಚಿತವಾಗಿ ಸಿಗುತ್ತಿದೆ.


ನಿಮಗೆ ಯಾವಾಗಲೂ ಅದೇ ಫೇಸ್ಬುಕ್ (Facebook), ಯೂಟ್ಯೂಬ್, ಇನ್‌ಸ್ಟಾಗ್ರಾಮ್‌, ವಾಟ್ಸಾಪ್‌ (WhatsApp) ನೋಡಿ ಬೋರ್ ಆಗುತ್ತಿದ್ದರೆ

ಏರ್ಟೆಲ್ನ ಕೆಲವು ಪ್ಲಾನ್ಗಳಲ್ಲಿ ಅನ್ಲಿಮಿಟೆಡ್ 5ಜಿ ಜೊತೆಗೆ ಅಮೇಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್ಸ್ಟಾರ್ ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಕ್ಕುತ್ತದೆ. ಅಲ್ಲಿ ಸಿನಿಮಾ, ಸ್ಪೋರ್ಟ್ಸ್ ಇತ್ಯಾದಿಯನ್ನು 5ಜಿ ಸ್ಪೀಡ್ನಲ್ಲಿ ನೋಡಿ ಆನಂದಿಸಬಹುದು.

ಏರ್ಟೆಲ್ 5ಜಿ ಡಾಟಾ ಜೊತೆಗೆ ವಿವಿಧ ಒಟಿಟಿ ಸಬ್ಸ್ಕ್ರಿಪ್ಷನ್ ಒದಗಿಸುವ ಪ್ರೀಪೇಯ್ಡ್ ಪ್ಲಾನ್ಗಳು ಇಲ್ಲಿವೆ:

ಏರ್ಟೆಲ್ನ 499 ರೂ ಪ್ರೀಪೇಯ್ಡ್ ಪ್ಲಾನ್ :

ಈ ಪ್ಲಾನ್‌ಗೆ 28 ದಿನಗಳ ವ್ಯಾಲಿಟಿಡಿಟಿ ಇದೆ. ಇದರಲ್ಲಿ ಅನ್ಲಿಮಿಟೆಡ್ ಕಾಲ್ ಮತ್ತು ದಿನಕ್ಕೆ 100 ಎಸ್ಸೆಮ್ಮೆಸ್ ಜೊತೆಗೆ ವಿಶೇಷವಾಗಿ ಅನ್ಲಿಮಿಟೆಡ್ 5ಜಿ ಡಾಟಾ ಕೂಡ ಸಿಗುತ್ತದೆ.

ಇಷ್ಟೇ ಅಲ್ಲದೆ ಡಿಸ್ನಿ ಹಾಟ್ಸ್ಟಾರ್, ಎಕ್ಸ್ಟ್ರೀಮ್, ವಿಂಕ್ ಮೇಲಿನ ಸಬ್ಸ್ಕ್ರಿಪ್ಷನ್ಗಳು 3 ತಿಂಗಳು ಉಚಿತವಾಗಿ ಸಿಗುತ್ತವೆ.

ಯಾರಿಗೆ 5ಜಿ ನೆಟ್ವರ್ಕ್ ಇಲ್ಲ ಅವರಿಗೆ ಅನ್ಲಿಮಿಟೆಡ್ 4ಜಿ ಡಾಟಾ ಅಂದರೆ ದಿನಕ್ಕೆ 3ಜಿಬಿಯವರೆಗೆ ಬಳಸಬಹುದು.

ಇದನ್ನೂ ಓದಿ : https://vijayatimes.com/protection-of-chetan-from-deportation/


ಏರ್ಟೆಲ್ನ 699 ರೂ ಪ್ರೀಪೇಯ್ಡ್ ಪ್ಲಾನ್ :

ಈ ಪ್ಲಾನ್‌ನಲ್ಲಿ ನೀವು 56 ದಿನಗಳ ವ್ಯಾಲಿಟಿಡಿ ಪಡೆಯಬಹುದು ಜೊತೆಗೆ ಎಷ್ಟು ಬೇಕಾದರೂ 5ಜಿ ಡಾಟಾ ಬಳಸಬಹುದು.

4ಜಿ ನೆಟ್‌ವರ್ಕ್‌ ಇರುವವರು ದಿನಕ್ಕೆ 3ಜಿಬಿಯಂತೆ ಡಾಟಾ ಬಳಸಬಹುದು. ಜೊತೆಗೆ ಅಮೇಜಾನ್ ಪ್ರೈಮ್,

ಎಕ್ಸ್ಸ್ಟ್ರೀಮ್ (Extreme), ವಿಂಕ್ ಇತ್ಯಾದಿ ಸಬ್ಸ್ಕ್ರಿಪ್ಚನ್ಗಳನ್ನುಕೂಡ ಉಚಿತವಾಗಿ ಪಡೆಯಬಹುದು.


ಏರ್ಟೆಲ್ನ 839 ರೂ ಪ್ಲಾನ್ :

ಈ ಪ್ಲಾನ್‌ಗೆ 84 ದಿನಗಳ ವ್ಯಾಲಿಡಿಟಿ ಇದೆ, ಇದರಲ್ಲಿ ದಿನಕ್ಕೆ 100 ಎಸ್ಸೆಮ್ಮೆಸ್, ಅನ್ಲಿಮಿಟೆಡ್ ಕಾಲ್, ಅನ್ಲಿಮಿಟೆಡ್ 5ಜಿ ಇಂಟರ್ನೆಟ್ ಡಾಟಾ ಸಿಗುತ್ತವೆ.

ಡಿಸ್ನಿ ಹಾಟ್ಸ್ಟಾರ್ನ 3 ತಿಂಗಳ ಸಬ್ಸ್ಕ್ರಿಪ್ಷನ್ ಸಿಗುತ್ತದೆ ಮತ್ತು ವಿಂಕ್ ಆ್ಯಪ್ನ ಸೌಲಭ್ಯಕೂಡ ಪಡೆಯಬಹುದು.

ಜೊತೆಗೆ ಎಕ್ಸ್ಟ್ರೀಮ್ ಆ್ಯಪ್ ಇತ್ಯಾದಿ ವಿವಿಧ ಸಬ್ಸ್ಕ್ರಿಪ್ಷನ್ಗಳು ಕೂಡ ಈ ಪ್ಲಾನ್ನಲ್ಲಿ ಸಿಗುತ್ತವೆ. 4ಜಿ ನೆಟ್‌ವರ್ಕ್‌ ಇರುವವರು ದಿನಕ್ಕೆ 2ಜಿಬಿಯವರೆಗೆ ಬಳಸಬಹುದು.

ಏರ್ಟೆಲ್ 999 ರೂ ಪ್ರೀಪೇಯ್ಡ್ ಪ್ಲಾನ್ (Prepaid plan):


ಈ ಪ್ರೀಪೇಯ್ಡ್ ಪ್ಲಾನ್‌ನಲ್ಲಿ 84 ದಿನಗಳ ವ್ಯಾಲಿಟಿಡಿ ಪಡೆಯಬಹುದು 84 ದಿನಗಳು ಅಂದರೆ ಈ ಪ್ಲಾನ್ ಅವಧಿಯವರೆಗೂ ಅಮೇಜಾನ್ ಪ್ರೈಮ್ ಸಬ್ಸ್ಕ್ರಿಪ್ಷನ್ ಪಡೆಯಬಹುದು.

ಎಕ್ಸ್ಸ್ಟ್ರೀಮ್ ಆ್ಯಪ್, ವಿಂಕ್, ರಿವಾರ್ಡ್ಸ್ ಮಿನಿ ಮುಂತಾದ ಹಲವು ಆ್ಯಪ್‌ಗಳು ಮತ್ತು ಒಟಿಟಿಗಳ ಮೆಂಬರ್ಶಿಪ್ (Membership of OTT) ಕೂಡ ಪಡೆಯಬಹುದು.

ಈ ಪ್ಲಾನ್ನಲ್ಲೂ ನೀವು ಎಷ್ಟು ಬೇಕಾದರೂ 5ಜಿ ಡಾಟಾ ಬಳಸಬಹುದು. 4ಜಿ ನೆಟ್‌ವರ್ಕ್‌ ಇರುವವರು ದಿನಕ್ಕೆ 2.5ಜಿಬಿಯಷ್ಟು ಡಾಟಾ ಬಳಸಬಹುದು.

ಇದನ್ನೂ ಓದಿ : https://vijayatimes.com/rejection-of-nomination-papers/

ಏರ್ಟೆಲ್‌ನ 3359 ರೂ ಪ್ರೀಪೇಯ್ಡ್ ಪ್ಲಾನ್:


ಈ ಪ್ಲಾನ್‌ನಲ್ಲಿ ನೀವು ಒಂದು ವರ್ಷದ ವ್ಯಾಲಿಡಿಟಿ ಪಡೆಯಬಹುದು. ಇದರಲ್ಲೂ ಕೂಡ ಅನ್ಲಿಮಿಟೆಡ್ 5ಜಿ ಡಾಟಾ ಪಡೆಯಬಹುದು.

ಅಷ್ಟೇ ಅಲ್ಲದೆ ಡಿಸ್ನಿ ಹಾಟ್ಸ್ಟಾರ್ (Disney Hotstar), ವಿಂಕ್, ಅಪೋಲೋ ಇತ್ಯಾದಿ ಗಳ ಸೌಲಭ್ಯಗಳು ಕೂಡ ಉಚಿತವಾಗಿ ಸಿಗುತ್ತವೆ.

5ಜಿ ಸಪೋರ್ಟ್ ಇಲ್ಲದಿದ್ದವರು ದಿನಕ್ಕೆ 2.5 ಜಿಬಿಯಷ್ಟು 4ಜಿ ಡಾಟಾ ಬಳಕೆ ಮಾಡಬಹುದು.

Exit mobile version