ಎಸ್‌ಪಿ ಕಾರ್ಯಕರ್ತರಿಗೆ ಮತದಾನ ಮಾಡಲು ಅವಕಾಶ ನೀಡದಂತೆ ಪೊಲೀಸರಿಗೆ  ಸೂಚನೆ ನೀಡಲಾಗಿದೆ : ಅಖಿಲೇಶ್‌ ಆರೋಪ

Lucknow : ಉತ್ತರ ಪ್ರದೇಶದ(Uttar Pradesh) ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್(Akhilesh Yadav Vs to BJP) ಅವರು ತಮ್ಮ ಪತ್ನಿ ಮತ್ತು ಸಮಾಜವಾದಿ ಪಕ್ಷದ ಮೈನ್‌ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿಂಪಲ್ ಯಾದವ್(Dimple Yadav) ಅವರೊಂದಿಗೆ ತಾವು ಕ್ಷೇತ್ರಕ್ಕೆ ಆಗಮಿಸಿ,

ಈ ಹಿಂದೆ ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್(Akhilesh Yadav Vs to BJP) ಅವರು ಪ್ರತಿನಿಧಿಸಿದ್ದ ಲೋಕಸಭಾ ಕ್ಷೇತ್ರದಲ್ಲಿ  ಮತ ಚಲಾಯಿಸಿದರು.

ಇನ್ನು ಮತ ಚಲಾಯಿಸಿದ ನಂತರ, ಅಖಿಲೇಶ್ ಯಾದವ್ ಅವರು ಮಾಧ್ಯಮಗೋಷ್ಠಿಯನ್ನು ನಡೆಸಿ, ಚುನಾವಣಾ ಅವ್ಯವಹಾರಗಳ ಕುರಿತು ಆರೋಪಿಸಿದರು.

ಉತ್ತರಪ್ರದೇಶ ಆಡಳಿತವು ಆಡಳಿತ ಪಕ್ಷದ ಆಜ್ಞೆಯ ಮೇರೆಗೆ ಪೋಲಿಸ್‌ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದರು.

ಮೈನ್‌ಪುರಿ, ರಾಂಪುರ ಕ್ಷೇತ್ರಗಳಲ್ಲಿ ಎಸ್‌ಪಿ ಕಾರ್ಯಕರ್ತರಿಗೆ ಮತದಾನ ಮಾಡಲು ಅವಕಾಶ ನೀಡದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ : https://vijayatimes.com/congress-leader-demands-arrest/

ನಮ್ಮ ಸಭೆಗೆ ಪಕ್ಷದ ಬೆಂಬಲಿಗರು ಬರುವುದನ್ನು ತಡೆಯಲು ಪೊಲೀಸರನ್ನು ಮತ್ತು ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಯೋಗಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಘುರಾಜ್ ಸಿಂಗ್ ಶಾಕ್ಯಾ(Raghuraj singh shakya) ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು,

ಮೈನ್‌ಪುರಿಯಲ್ಲಿ ಯಾರೂ ಇಲ್ಲದ ಕಾರಣ ಬಿಜೆಪಿ(BJP) ಪಕ್ಷವು ಎಸ್‌ಪಿ ಅಭ್ಯರ್ಥಿಯನ್ನು ನೇಮಿಸಿಕೊಂಡಿದೆ.

ನೇತಾಜಿ ಮೈನ್‌ಪುರಿಗಾಗಿ ಕೆಲಸ ಮಾಡಿದ್ದರಿಂದ ನಾವು ಮೈನ್‌ಪುರಿಯಲ್ಲಿ ಗೆಲ್ಲುತ್ತೇವೆ ಎಂದು  ಯಾದವ್ ಕುಟುಂಬದ ಭದ್ರಕೋಟೆಯ ಸ್ಥಾನವನ್ನು ಉಳಿಸಿಕೊಳ್ಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಇನ್ನು ಮೈನ್‌ಪುರಿ ಲೋಕಸಭಾ ಕ್ಷೇತ್ರವು ಕಳೆದ ಅನೇಕ ದಶಕಗಳಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ಯಾದವ್‌ಅವರು ಸ್ಪರ್ಧಿಸುತ್ತಿದ್ದ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷವು ಸಾಕಷ್ಟು ಪ್ರಬಲವಾಗಿದೆ.

https://fb.watch/hddduJyLLi/ ಸಂಪಿಗೆ ರಸ್ತೆ ದುಸ್ಥಿತಿ! ಇದು ಏನು ಫುಟ್ ಪಾತ್ ಅಥವಾ ಬಿಬಿಎಂಪಿ ಕಸದ ತೊಟ್ಟಿಯ?

ಮುಲಾಯಂ ಸಿಂಗ್‌ ಯಾದವ್‌ ಅವರ ನಿಧನದ ನಂತರ ಇದೀಗ ಈ ಕ್ಷೇತ್ರದಿಂದ ಅವರ ಸೊಸೆ ಡಿಂಪಲ್‌ ಯಾದವ್‌ ಸ್ಪರ್ಧಿಸುತ್ತಿದ್ದಾರೆ. ಸದ್ಯ ನಡೆಯುತ್ತಿರುವ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಬಿಜೆಪಿ ನಡುವೆ ಈ ಕ್ಷೇತ್ರದಲ್ಲಿ ತೀವ್ರ ಹಣಾಹಣಿ ಏರ್ಪಟ್ಟಿದೆ.

Exit mobile version