Mumbai : ಆಗಾಗ್ಗೆ ಕೆನಡಾದ (Canada) ಪೌರತ್ವದ ಬಗ್ಗೆ ಟೀಕೆಗಳನ್ನು ಎದುರಿಸುತ್ತಿದ್ದ ಬಾಲಿವುಡ್(AkshayKumar got Indian citizenship) ನಟ ಅಕ್ಷಯ್ ಕುಮಾರ್
(Akshay Kumar) ಅವರಿಗೆ ಭಾರತದ ಪೌರತ್ವ ಇರಲಿಲ್ಲ. ಅವರು ಆ ಕಾರಣಕ್ಕಾಗಿ ಹಲವಾರು ಟೀಕೆಗಳನ್ನು ಸಹ ಎದುರಿಸಿದ್ದರು. ಕೆನಡಾ ಪ್ರಜೆಯಾಗಿದ್ದ ಅಕ್ಷಯ್ ಕುಮಾರ್ ಕೊನೆಗೂ ಭಾರತದ
ಪೌರತ್ವವನ್ನು(Citizenship of India) ಮರಳಿ ಪಡೆದಿದ್ದಾರೆ. ಹೌದು ಕೊನೆಗೂ ಭಾರತದ ಪ್ರಜೆಯಾಗಿದ್ದಾರೆ.ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದ ಅಕ್ಷಯ್ ಕುಮಾರ್ ದಿಲ್ ಮತ್ತು ಪೌರತ್ವ, ಎರಡೂ
ಹಿಂದೂಸ್ತಾನಿ..’ ಎಂದು ಪೋಸ್ಟ್ (Post) ಹಂಚಿಕೊಂಡು ಸ್ವಾತಂತ್ರ್ಯ ದಿನಾಚರಣೆಯ (independence day) ಶುಭಾಶಯಗಳನ್ನು ಸಹ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಪೌರತ್ವಕ್ಕೆ
ಸಂಬಂಧಿಸಿದಂತೆ ಇರುವ ದಾಖಲೆಗಳ ಫೋಟೋವನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ (Social media) ಹಂಚಿಕೊಂಡಿದ್ದಾರೆ.

ಕೆಲವು ತಿಂಗಳ ಹಿಂದಷ್ಟೇ ಪೌರತ್ವದ ಬಗ್ಗೆ ಮಾತನಾಡಿದ್ದ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಅವರು ಕೆಲ ತಿಂಗಳ ಹಿಂದಷ್ಟೇ ತಮ್ಮ ಪೌರತ್ವದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ನನ್ನ ಕೆನಡಾ ಪೌರತ್ವದ ಬಗ್ಗೆ ‘ವಿಷಯವೇ ಗೊತ್ತಿಲ್ಲದೆ ಕೆಲವರು ಮಾತನಾಡುತ್ತಾರೆ.
ನನಗೆ ಇದು ನಿಜಕ್ಕೂ ಬೇಸರವನ್ನು ಉಂಟುಮಾಡುತ್ತದೆ. ನನಗೆ ಎಲ್ಲವೂ ಭಾರತ ದೇಶ ಆಗಿದೆ. ನಾನು ಏನು ಗಳಿಸಿದ್ದೇನೋ, ಏನನ್ನು ಪಡೆದುಕೊಂಡಿದ್ದೇನೋ ನಾನು ಈ ದೇಶದಲ್ಲೇ
ಅದೆಲ್ಲವನ್ನು ಪಡೆದಿರುವುದು. ಅದನ್ನು ವಾಪಾಸ್ ನೀಡುವ ಸಮಯ ಇದೀಗ ಬಂದಿದೆ’ ಎಂದು (AkshayKumar got Indian citizenship) ಅಕ್ಷಯ್ ಕುಮಾರ್ ಹೇಳಿದ್ದರು.
ಆರು ತಿಂಗಳ ಹಿಂದೆಯೇ ಅರ್ಜಿ ಹಾಕಿದ್ದರು
ಅಕ್ಷಯ್ ಕುಮಾರ್ ಅವರು ಕೆನಡಾ ಪೌರತ್ವ ಹೊಂದಿದ್ದರು ಆದರೆ ಕಳೆದ ಆರು ತಿಂಗಳ ಹಿಂದೆಯೇ ಅದನ್ನು ಬದಲಾಯಿಸಿಕೊಳ್ಳುವ ಕುರಿತು ಆಲೋಚಿಸಿದ್ದರು. ಮತ್ತು ಅದರ ಬಗ್ಗೆ ಅವರು ಮಾತನಾಡಿದ್ದರು.
ಕೆನಡಾ ಪೌರತ್ವ ಬದಲಾಯಿಸಿಕೊಳ್ಳಲು ಈಗ ನಾನು ಅರ್ಜಿ ಹಾಕಿದ್ದೇನೆ’,ನಾನು ಕೆನಡಾ ಪೌರತ್ವದ ಬಗ್ಗೆ ಮರೆತಿದ್ದೆ ಎಂದು ಹೇಳಿಕೊಂಡಿದ್ದರು ಅಕ್ಷಯ್ ಕುಮಾರ್.

ಮೋದಿ ಅವರ ಸಂದರ್ಶನ ಮಾಡಿ ವಿವಾದಕ್ಕೆ ಗುರಿಯಾಗಿದ್ದ ಅಕ್ಷಯ್ ಕುಮಾರ್
ನಟ ಅಕ್ಷಯ್ ಕುಮಾರ್ ನಾಲ್ಕು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ರಾಜಕೀಯ ಸಂದರ್ಶನವನ್ನು ಮಾಡಿದ್ದರು. ಹಾಗೆಯೇ, ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ
ಪ್ರಧಾನಿ ನರೇಂದ್ರ ಮೋದಿ ಸಲಹೆಯಂತೆ ಅಕ್ಷಯ್ ಪಾಲ್ಗೊಂಡಿದ್ದರು. ಆದರೆ ಹಲವರು ಇದನ್ನು ಟೀಕಿಸಿದ್ದರು. ಭಾರತದ ಚುನಾವಣೆಯಲ್ಲಿ(Election) ಕೆನಡಾದ ‘ಪೌರತ್ವ’ವನ್ನು ಹೊಂದಿರುವ ನಟ ಅಕ್ಷಯ್ ಕುಮಾರ್
ಅವರು ವೋಟು(Vote) ಹಾಕಲು ಸಾಧ್ಯವಿಲ್ಲ ಎಂದು ಕುಹಕವಾಡಿದ್ದರು. ಅಕ್ಷಯ್ ಅವರು ಮಾಡಿದ್ದ ಪ್ರಧಾನಿ ಸಂದರ್ಶನವನ್ನು ದಕ್ಷಿಣ ಭಾರತದ ನಟ ಸಿದ್ಧಾರ್ಥ್(Siddarth) ಕೂಡ ಟೀಕಿಸಿದ್ದರು.
ಇದನ್ನೂ ಓದಿ : ಲೋಕಸಭೆ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಸಂಘರ್ಷ : ಹಲವು ಕ್ಷೇತ್ರಗಳಲ್ಲಿ ಭಾರೀ ಲಾಬಿ
ಅಕ್ಷಯ್ ಕುಮಾರ್ ‘OMG 2’ ಸಿನಿಮಾ
ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಸೋತಿದ್ದವು. ಅವರ 10 ಸಿನಿಮಾ ಕಳೆದ 3 ವರ್ಷಗಳಲ್ಲಿ ರಿಲೀಸ್ ಆಗಿದ್ದು, ಅದರಲ್ಲಿ ‘ಸೂರ್ಯವಂಶಿ’ (Suryavamshi) ಸಿನಿಮಾ ಮಾತ್ರ
ನಿಜವಾಗಿ ಗೆಲವು ಕಂಡಿತ್ತು. ಸದ್ಯ OMG 2‘ ಅಕ್ಷಯ್ ಕುಮಾರ್ ನಟನೆಯ ಚಿತ್ರ ‘ ತೆರೆಕಂಡಿದ್ದು, ಉತ್ತಮ ಪ್ರದರ್ಶನದ ಜೊತೆಗೆ ಉತ್ತಮವಾಗಿ ಗಳಿಕೆ ಮಾಡುತ್ತಿದೆ. ಈ ಸಿನಿಮಾವು ಬರೋಬ್ಬರಿ
55.17 ಕೋಟಿ ರೂ. ಅನ್ನು ಕೇವಲ ನಾಲ್ಕು ದಿನಗಳಿಗೆ ಗಳಿಸಿದೆ. ಈ ಚಿತ್ರವು ನಿಧಾನವಾಗಿ ಶತಕೋಟಿ ಕ್ಲಬ್ ಸೇರುವುದು ಗ್ಯಾರಂಟಿ ಎಂಬ ಮಾತು ಕೇಳಿ ಬರುತ್ತಿದೆ .
ರಶ್ಮಿತಾ ಅನೀಶ್