ವಿಚಿತ್ರ ಸುದ್ದಿ ; ನಾಯಿಯನ್ನು ಬಾಳಸಂಗಾತಿಯಾಗಿ ಆರಿಸಿಕೊಂಡ ಅಮೆಂಡಾ ರಾಡ್ಜರ್ಸ್!

Amanda rodgers

ಗಂಡನಿಂದ ಡಿವೋರ್ಸ್(Divroce) ಪಡೆದ ನಂತರ ಒಂಟಿತನ ನಿವಾರಣೆಗೆ ಇಲ್ಲೊಬ್ಬ ಮಹಿಳೆ ನಾಯಿಯನ್ನೇ ಮದುವೆಯಾಗಿ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ.


ಹೀಗೆ ನಾಯಿಯನ್ನು ಮದುವೆಯಾದವಳ ಹೆಸರು “ಅಮಂಡಾ ರಾಡ್ಜರ್ಸ್”(Amanda Rodgers). ಕ್ರೊಯೇಷಿಯಾದಲ್ಲಿ ವಾಸಮಾಡುತ್ತಿರುವ ಅಮಂಡಾ ರಾಡ್ಜರ್ಸ್ ವಿಚ್ಛೇದಿತ ಮಹಿಳೆ. ವಿಚ್ಛೇದನ ಬಳಿಕ ಆಕೆಗೆ ಒಂಟಿತನ ಕಾಡಾಲಾರಂಭಿಸಿತು. ಈ ಕಾರಣದಿಂದ ಸೂಕ್ತ ರೀತಿಯಲ್ಲಿ ಜೀವನ ಸಂಗಾತಿಗಾಗಿ ಹುಡುಕಾಡುತ್ತಿದ್ದ ಅಮೆಂಡಾ ಅವರಿಗೆ ತಮ್ಮನ್ನು ಉತ್ತಮವಾಗಿ ಅರ್ಥಮಾಡಿಕೊಂಡ ನಾಯಿಯೇ ತಮ್ಮ ಬಾಳಸಂಗಾತಿಯನ್ನಾಗಿ ಆರಿಸಿ ಎರಡನೇ ಬಾರಿಗೆ ಮದುವೆಯಾಗಿದ್ದಾರೆ. ಮನುಷ್ಯನನ್ನು ವಿವಾಹವಾಗಲು ಹಿಂಜರಿದ ಅಮಂಡಾ, ಹೆಣ್ಣು ನಾಯಿಯೊಂದನ್ನ ಜೀವನ ಸಂಗಾತಿಯನ್ನಾಗಿಸಿಕೊಳ್ಳುತ್ತಾಳೆ.

ಅಂದ ಹಾಗೆ ಈ ಹೆಣ್ಣು ನಾಯಿ ಹೆಸರು “ಶೆಭಾ”. ಹೆಣ್ಣು ನಾಯಿಯನ್ನು ಸಂಗಾತಿಯನ್ನಾಗಿಸಿಕೊಳ್ಳುವುದು ಕೆಲವರಿಗೆ ಆಶ್ಚರ್ಯವಾಗಬಹುದು. ಕೆಲವರಿಗೆ ಇದು ವಿಚಿತ್ರ ಅಲ್ವಾ ಎಂದು ಅನಿಸಬಹುದು. ಹೀಗೆ ಆಶ್ಚರ್ಯ ವ್ಯಕ್ತಪಡಿಸಿ ಕೇಳಿದವರ ಪ್ರಶ್ನೆಗೆ ಉತ್ತರಿಸಿರುವ ಅಮಂಡಾ ಶೆಭಾ ನನ್ನ ಜೀವನದ ಪ್ರಮುಖ ಭಾಗ. ನನ್ನನ್ನು ಸಂತೋಷ ಪಡಿಸುವ ಈಕೆ ನಾನು ಅಸಮಾಧಾನಗೊಂಡಾಗ ಬೆಂಬಲ ನೀಡುತ್ತಾಳೆ ಎಂದಿದ್ದಾರೆ.


ಶೆಭಾ 2 ತಿಂಗಳಿದ್ದಾಗಲೇ ಅಮಂಡಾಗೆ ಆಕೆಯ ಮೇಲೆ ಪ್ರೀತಿ ಅಂಕುರವಾಗಿತ್ತಂತೆ. ಗಂಡನಿಗಿಂತ ಶೆಭಾಳನ್ನು ಹೆಚ್ಚು ಪ್ರೀತಿಸೋದಾಗಿ ಅಮಂಡಾ ಹೇಳಿದ್ದಾಳೆ. ನನ್ನ ಮತ್ತು ಶೆಬಾ ನಡುವಿನ ಸಂಬಂಧವು ತುಂಬಾ ಆಳವಾಗಿದೆ ಮತ್ತು ಈ ಹೊಸ ಸಂಬಂಧದ ಬಗ್ಗೆ ತುಂಬಾ ಕುತೂಹಲವಿರುವುದಾಗಿಯೂ ತಿಳಿಸಿದ್ದಾಳೆ. ಇನ್ನು ಅಮಂಡಾಗೆ ಬಾಲ್ಯದಿಂದ ವಧುವಿನ ಉಡುಪು ಅಂದ್ರೆ ಬಹಳ ಇಷ್ಟ. ಹೀಗಾಗಿ ಎರಡನೇ ಮದುವೆಗೆ ತಾನೇ ಸ್ವತಃ ವಧುವಿನ ಉಡುಪನ್ನು ವಿನ್ಯಾಸೊಗಳಿಸಿ, ಶೆಭಾಳಗೂ ಉಡುಪನ್ನು ವಿನ್ಯಾಸಗೊಳಿಸಿದ್ದರಂತೆ.

ಅಮಂಡಾಳ ಈ ಅದ್ಧೂರಿ ಮದುವೆಯಲ್ಲಿ ಸುಮಾರು 200 ಮಂದಿ ಪಾಲ್ಗೊಂಡಿದ್ದರು. ಕೊನೆಗೂ ಮದುವೆಯಾಗಲು ಇಚ್ಛಿಸಿದ ಶೆಭಾಳನ್ನು 47 ವರ್ಷದ ಅಮಂಡಾ ರಾಡ್ಜರ್ಸ್ ಚುಂಬಿಸುವ ಮೂಲಕ ಸಂಪ್ರದಾಯಾನುಸಾರ ಮದುವೆಯಾದರು. ಈ ಒಂದು ಸಂಗತಿ ಸಾಕಷ್ಟು ಜನರಿಗೆ ಅಶ್ಚರ್ಯ ಮೂಡಿಸಿದ್ದಂತೂ ಅಕ್ಷರಶಃ ಸತ್ಯ!

Exit mobile version