ಆರ್ಯುವೇದ ಉತ್ಪನ್ನಗಳ ಮಾರುಕಟ್ಟೆಗೆ ಲಗ್ಗೆಯಿಟ್ಟ ಅಮೆಜಾನ್!

amazon

ಆಯುರ್ವೇದ ಉತ್ಪನ್ನಗಳ ಮಾರಟಕ್ಕೆ ಕೈ ಹಾಕಿದೆ.
ತನ್ನ ಗ್ರಾಹಕರಿಗಾಗಿ ಸದಾ ಹೊಸತನವನ್ನು ಬಯಸುತ್ತಿರುವ ಅಮೆಜಾನ್ ಸಂಸ್ಥೆಯು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಆಯುರ್ವೇದ ಉತ್ಪನ್ನಗಳ ಬಗ್ಗೆ ಒಲವು ಹೊಂದಿರುವ ಆನ್ಲೈನ್ ಶಾಪರ್ಗಳಿಗೆ ಸಿಹಿ ಸುದ್ದಿ ನೀಡಿದೆ. ಅಮೆಜಾನ್ ಇಂಡಿಯಾ (Amazon.in) ಮಂಗಳವಾರ ತನ್ನ ಮಾರುಕಟ್ಟೆಯಲ್ಲಿ ಆಯುರ್ವೇದ ಉತ್ಪನ್ನಗಳಿಗಾಗಿ ಮೀಸಲಾದ ಸ್ಟೋರ್ಫ್ರಂಟ್ ಪ್ರಾರಂಭಿಸುವುದಾಗಿ ಘೋಷಿಸಿದೆ.


ವರ್ಚುವಲ್ ಕಾರ್ಯಕ್ರಮದಲ್ಲಿ ಆಯುಷ್ನ ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್ ಅವರು ಅಧಿಕೃತವಾಗಿ ಈ ಸ್ಟೋರ್ಫ್ರಂಟ್ ಪ್ರಾರಂಭಿಸಿದರು. ಈ ಸ್ಟೋರ್ಫ್ರಂಟ್ ವಿವಿಧ ರೀತಿಯ ಜ್ಯೂಸ್ಗಳು, ತ್ವಚೆ-ಆರೈಕೆ ಉತ್ಪನ್ನಗಳು, ಇಮ್ಯುನಿಟಿ ಬೂಸ್ಟರ್ಗಳು, ಎಣ್ಣೆಗಳು ಮತ್ತು ಸಣ್ಣ ವ್ಯಾಪಾರಗಳು ಮತ್ತು D2C ಬ್ರ್ಯಾಂಡ್ಗಳ ವಿಶಿಷ್ಟ ಆಯುರ್ವೇದ ಉತ್ಪನ್ನಗಳನ್ನು ಹೊಂದಿರಲಿದೆ.


ಮೊದಲ ಬಾರಿಗೆ ಆಯುರ್ವೇದ ಉತ್ಪನ್ನಗಳನ್ನು ಪ್ರಯತ್ನಿಸುವ ಗ್ರಾಹಕರಿಗೆ ಸ್ಟೋರ್ಫ್ರಂಟ್ ಶಾಪಿಂಗ್ ಅನ್ನು ಸುಲಭಗೊಳಿಸುತ್ತದೆ. ಇಮ್ಯುನಿಟಿ ಬೂಸ್ಟರ್ಗಳು, ರಕ್ತ ಶುದ್ಧಿಕಾರಕಗಳು, ಮಹಿಳೆಯರ ಆರೋಗ್ಯ, ತೂಕ ನಿರ್ವಹಣೆ, ಮಾನಸಿಕ ಸ್ವಾಸ್ಥ್ಯ ಇತ್ಯಾದಿಗಳಂತಹ ಆರೋಗ್ಯ ಪ್ರಯೋಜನಗಳ ಆಯ್ಕೆಯನ್ನು ಇದು ಹೊಂದಿದೆ.
ಇದರಲ್ಲಿ ಆಯುರ್ವೇದ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಬಳಸುವ ವಿವಿಧ ಗಿಡಮೂಲಿಕೆಗಳು ಮತ್ತು ಪದಾರ್ಥಗಳನ್ನು ಮತ್ತು ಅವುಗಳ ನಿರ್ದಿಷ್ಟ ಆರೋಗ್ಯ ಪ್ರಯೋಜನಗಳನ್ನು ವಿವರವಾಗಿ ವಿವರಿಸಲಾಗಿದೆ. ಇದರಿಂದ ಗ್ರಾಹಕರು ತಿಳುವಳಿಕೆಯುಳ್ಳ ಆಯ್ಕೆಯನ್ನು ಮಾಡಬಹುದು.

Exit mobile version