America : ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಅವರು ಕ್ರೆಮ್ಲಿನ್ ಸಮಾರಂಭದಲ್ಲಿ ಔಪಚಾರಿಕವಾಗಿ ಉಕ್ರೇನ್ನ ನಾಲ್ಕು ಪ್ರದೇಶಗಳನ್ನು ಸ್ವಾಧೀನ ಪಡೆಸಿಕೊಂಡಿರುವುದನ್ನು ಘೋಷಿಸಿದ ಒಂದು ದಿನದ ನಂತರ,

ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ) “ಉಕ್ರೇನ್ನ ನಾಲ್ಕು ಪ್ರದೇಶಗಳನ್ನು ರಷ್ಯಾ ಅಕ್ರಮ ಮತ್ತು ಕಾನೂನುಬಾಹಿರವಾಗಿ ಸ್ವಾಧೀನ ಪಡೆಸಿಕೊಂಡಿರುವುದನ್ನು ತಿರಸ್ಕರಿಸಿದೆ (America questions russia).
ನ್ಯಾಟೋ(NATO) ಮಿತ್ರರಾಷ್ಟ್ರಗಳು ಈ ಯಾವುದೇ ಭೂಪ್ರದೇಶಗಳನ್ನು ರಷ್ಯಾದ ಭಾಗವೆಂದು ಗುರುತಿಸುವುದಿಲ್ಲ ಎಂದು ತಿಳಿಸಿದೆ.
ಈ ಕುರಿತು ಮಾತನಾಡಿರುವ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್ಬರ್ಗ್, ನ್ಯಾಟೋ ಮಿತ್ರರಾಷ್ಟ್ರಗಳು ಈ ಯಾವುದೇ ಭೂಪ್ರದೇಶಗಳನ್ನು ರಷ್ಯಾದ ಭಾಗವೆಂದು (America questions russia) ಗುರುತಿಸುವುದಿಲ್ಲ.
ಏಕೆಂದರೆ ಈ ಭೂಕಬಳಿಕೆ ಕಾನೂನುಬಾಹಿರ ಮತ್ತು ಕಾನೂನುಬಾಹಿರ ಕ್ರಮಗಳಿಂದ ಕೂಡಿದೆ ಎಂದಿದ್ದಾರೆ.
ಇದನ್ನೂ ಓದಿ : https://vijayatimes.com/sucide-bomb-blast-at-kabul/
ಇನ್ನೊಂದೆಡೆ ರಷ್ಯಾದ ಅತಿಕ್ರಮಣವನ್ನು ವಿರೋಧಿಸಿರುವ ಅಮೇರಿಕಾ, ನ್ಯಾಟೋ ಮಿತ್ರರಾಷ್ಟ್ರವಾಗಿರುವ ಅಮೇರಿಕಾ, ನ್ಯಾಟೋ ಪ್ರದೇಶದ ಪ್ರತಿ ಇಂಚನ್ನೂ ರಕ್ಷಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ.
ಆದ್ದರಿಂದ ಮಿಸ್ಟರ್ ಪುಟಿನ್ ಅವರೇ, ನಾನು ಹೇಳುವುದನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ.
ನಾವು ಅದನ್ನು ಈ ಹಿಂದೆ ಮಾಡಿದ್ದೇವೆ. ನಮ್ಮ ಮಿತ್ರರಾಷ್ಟ್ರಗಳೊಂದಿಗೆ ನಾವು ನಿಕಟ ಸಂಪರ್ಕ ಹೊಂದಿದ್ದೇವೆ. ನಾವು ಇಂದು ಕೂಡ ಹೊಸ ನಿರ್ಬಂಧಗಳನ್ನು ರಷ್ಯಾದ ಮೇಲೆ ಘೋಷಿಸುತ್ತಿದ್ದೇವೆ ಎಂದಿದೆ.
ಉಕ್ರೇನ್ನ 4 ಪ್ರದೇಶಗಳನ್ನು ಸ್ವಾಧೀನಕ್ಕೆ ಪಡೆದ ರಷ್ಯಾ
ರಷ್ಯಾ ತನ್ನ ನೆರೆಯ ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ಏಳು ತಿಂಗಳ ನಂತರ, ಸ್ವಾದೀನ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಪುಟಿನ್ ಉಕ್ರೇನ್ನ ಶೇಕಡಾ 15 ರಷ್ಟು ಭೂ ಭಾಗದ ಮೇಲೆ ರಷ್ಯಾದ ಆಳ್ವಿಕೆಯನ್ನು ಘೋಷಿಸಿದ್ದಾರೆ. ಖೆರ್ಸನ್, ಜಪೋರಿಝಿಯಾ, ಲುಹಾನ್ಸ್ಕ್ ಮತ್ತು ಡೊನೆಟ್ಸ್ಕ್ ನಾಲ್ಕು ಪ್ರಾಂತ್ಯಗಳನ್ನು ರಷ್ಯಾ ತನ್ನ ವಶಕ್ಕೆ ಪಡೆದುಕೊಂಡಿದೆ.
ರಷ್ಯಾದ ಈ ಕ್ರಮವನ್ನು ವಿರೋಧಿಸಿರುವ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್ಬರ್ಗ್,
https://youtu.be/2o9yHWezIEQ ಅಂಗನವಾಡಿ ಕೇಂದ್ರಕ್ಕೆ ಇಲ್ಲ ಶಾಶ್ವತ ಕಟ್ಟಡ
ಉಕ್ರೇನ್ನ ಡೊನೆಟ್ಸ್ಕ್, ಲುಹಾನ್ಸ್ಕ್, ಜಪೋರಿಝಿಯಾ ಮತ್ತು ಖೆರ್ಸನ್ ಪ್ರದೇಶಗಳಲ್ಲಿ ಆಯೋಜಿಸಲಾದ “ಜನಾಭಿಪ್ರಾಯ ಸಂಗ್ರಹಣೆಯನ್ನು ಮಾಸ್ಕೋದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಂತರರಾಷ್ಟ್ರೀಯ ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಉಕ್ರೇನ್ ಮೇಲೆ ಹೇರಲಾಗಿದೆ” ಎಂದಿದ್ದಾರೆ.
- ಮಹೇಶ್.ಪಿ.ಎಚ್