Amit Shah : ಸರ್ದಾರ್ ಪಟೇಲ್ ಇಲ್ಲದಿದ್ದರೆ ಹೈದರಾಬಾದ್ ವಿಮೋಚನೆಗೆ ಇನ್ನಷ್ಟು ವರ್ಷ ಬೇಕಾಗುತ್ತಿತ್ತು : ಅಮಿತ್ ಶಾ

Hyderabad : ಕೇಂದ್ರ ಗೃಹ ಸಚಿವ(Central Home Minister) ಅಮಿತ್ ಶಾ(Amit Shah) ಅವರು ಶನಿವಾರ ಹೈದರಾಬಾದ್ ವಿಮೋಚನಾ(Hyderabad Liberation Day) ದಿನದಂದು ತೆಲಂಗಾಣ(Telangana) ಜನತೆಗೆ ಶುಭಾಶಯ ಕೋರಿದ್ದಾರೆ.

ತಮ್ಮ ಟ್ವೀಟರ್(Twitter) ಖಾತೆಯಲ್ಲಿ ಟ್ವೀಟ್ ಮಾಡಿ ತಿಳಿಸಿರುವ ಅವರು, “ತೆಲಂಗಾಣ, ಹೈದರಾಬಾದ್-ಕರ್ನಾಟಕ ಮತ್ತು ಮರಾಠವಾಡ ಪ್ರದೇಶದ ಜನರಿಗೆ ‘ಹೈದರಾಬಾದ್ ವಿಮೋಚನಾ ದಿನದ’ ಶುಭಾಶಯಗಳು. ಹೈದರಾಬಾದ್ ಅನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಲು ಕ್ರೂರ ನಿಜಾಮರ ಆಳ್ವಿಕೆಯಲ್ಲಿ ರಜಾಕರ ದೌರ್ಜನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿದ ಹುತಾತ್ಮರು ಮತ್ತು ವೀರ ಯೋಧರಿಗೆ ನಾನು ನಮಸ್ಕರಿಸುತ್ತೇನೆ” ಎಂದು ಶುಭಕೋರಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/memes-to-a-comedian-hero-ositha-iheme/

ಇಂದು ಹೈದರಾಬಾದ್‌ನ ಪರೇಡ್ ಮೈದಾನದಲ್ಲಿ ನಡೆದ ಹೈದರಾಬಾದ್ ವಿಮೋಚನಾ ದಿನಾಚರಣೆಯಲ್ಲಿ ಅಮಿತ್ ಶಾ ಭಾಗವಹಿಸಿ ನೆರದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಮಾತನಾಡಿದ ಶಾ, ಸರ್ದಾರ್ ಪಟೇಲ್ ಇಲ್ಲದಿದ್ದರೆ ಹೈದರಾಬಾದ್ ವಿಮೋಚನೆಗೊಳ್ಳಲು ಇನ್ನಷ್ಟು ವರ್ಷಗಳು ಬೇಕಾಗುತ್ತಿತ್ತು ಎಂದು ಹೇಳಿದರು.

ನಿಜಾಮರು ರಜಾಕಾರರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸರ್ದಾರ್ ಪಟೇಲರು ತಿಳಿದಿದ್ದರು. ದುರದೃಷ್ಟವಶಾತ್, 75 ವರ್ಷಗಳು ಮುಗಿದಿವೆ ಮತ್ತು ಈ ಸ್ಥಳವನ್ನು ಆಳಿದವರು ವೋಟ್ ಬ್ಯಾಂಕ್ ರಾಜಕೀಯದಿಂದಾಗಿ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಲು ಧೈರ್ಯ ಮಾಡಲಿಲ್ಲ ಎಂದು ಅಮಿತ್ ಶಾ ಸಮಾರಂಭದಲ್ಲಿ ತಮ್ಮ ಭಾಷಣದಲ್ಲಿ ಹೇಳಿದರು.

ಇದನ್ನೂ ಓದಿ : https://vijayatimes.com/pm-narendra-modi-72nd-birthday/

ಸೆಪ್ಟೆಂಬರ್ 17, 1948 ರಂದು ನಿಜಾಮರ ಆಳ್ವಿಕೆಗೆ ಒಳಪಟ್ಟ ನಂತರ ಮಿಲಿಟರಿ ಕ್ರಮದ ನಂತರ ಹೈದರಾಬಾದ್ ಅನ್ನು ಭಾರತದ ಒಕ್ಕೂಟಕ್ಕೆ ಸೇರಿಸಲಾಯಿತು. ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಹಾಗೂ ಅಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಇಲ್ಲದಿದ್ದಿರೇ ಹೈದ್ರಾಬಾದ್ ವಿಮೋಚನೆಗೆ ಇನ್ನಷ್ಟು ವರ್ಷ ಬೇಕಾಗುತ್ತಿತ್ತು ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.

Exit mobile version