Z+ ಭದ್ರತೆ ಜೊತೆಗೆ ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ

Karnataka : ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah visit to Karnataka) ಅವರು ಡಿ.30ಕ್ಕೆ ನಾಳೆ ರಾಜ್ಯಕ್ಕೆ ಭೇಟಿ ನೀಡಲ್ಲಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚರ್ಚೆಯನ್ನು ಪರಿಣಾಮಕಾರಿಯಾಗಿ ತರಾತುರಿಯಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ನಾಳೆ ಮಂಡ್ಯಕ್ಕೆ (Mandya) ಅಮಿತ್ ಶಾ ಭೇಟಿ ಮಾಡಲಿರುವ ಹಿನ್ನೆಲೆ 2ದಿನಗಳ ಕಾಲ ಮಂಡ್ಯ ವಿಶ್ವವಿದ್ಯಾಲಯಕ್ಕೆ ಡಿ.ಸಿ ಡಾ.ಗೋಪಾಲಕೃಷ್ಣ (D.C Dr. Gopalakrishna) ಆದೇಶ ನೀಡುವುದರ ಜೊತೆಗೆ ರಜೆ ಘೋಷಣೆ ಮಾಡಿದ್ದಾರೆ .

ನಾಳೆ ಮಂಡ್ಯ ವಿವಿ ಮೈದಾನದಲ್ಲಿ ಬಿಜೆಪಿ ಸಮಾವೇಶ ಆಯೋಜನೆ ಮಾಡಲಾಗಿದ್ದು ಸಮಾವೇಶದಲ್ಲಿ ಸಚಿವ ಅಮಿತ್ ಶಾ ಭಾಗಿಯಾಗಲಿದ್ದಾರೆ.

ಅಮಿತ್ ಶಾಗೆ Z+ ಭದ್ರತೆ ಇರುವ ಹಿನ್ನೆಲೆ ಮಂಡ್ಯ ವಿವಿಗೆ ರಜೆ ಘೋಷಿಸಲಾಗಿದೆ.

ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ (North Karnataka) ಭಾಗದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆಗೆ ಹೆಚ್ಚೆನ ಆದ್ಯತೆ ನೀಡುವ (Amit shah visit to Karnataka) ನಿರೀಕ್ಷೆಗಳಿತ್ತು.

ಆದರೆ, ಅಧಿವೇಶನದ ಕೊನೆಗೊಳ್ಳುವ ದಿನದವರೆಗೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡುವ ಬಗ್ಗೆ ನಮೂದಾಗಿರಲಿಲ್ಲ ಆದರೆ,

ಇದನ್ನೂ ಓದಿ : https://vijayatimes.com/arshdeep-nominated-for-award/

ಮೊದಲ ದಿನ ಮೊದಲೇ ಅಧಿವೇಶನವನ್ನು ಮುಂದೂಡುವ ಘೋಷಣೆ ಹೊರಬೀಳುತ್ತಿದ್ದಂತೆಯೇ ಸದಸ್ಯರ ಆಗ್ರಹದ ಮೇರೆಗೆ ಬುಧವಾರ ಸಂಜೆಯಿಂದ ಗುರುವಾರ ರಾತ್ರಿ ಕೊನೆಯ ದಿನವಾದವರೆಗೆ,

ಉತ್ತಕ ಕರ್ನಾಟಕ ಕುರಿತ ಚರ್ಚೆಗೆ ಸ್ಪೀಕರ್ (Speaker) ಸಮ್ಮತಿ ನೀಡಿದರು. ವೇಳಾಪಟ್ಟಿಯಂತೆ ಡಿಸೆಂಬರ್ 30 ರಂದು ಅಧಿವೇಶನ ಮುಕ್ತಾಯವಾಗಬೇಕಿತ್ತು.

ಆದರೆ, ಗುರುವಾರ ಬೇಗನೇ ಅಧಿವೇಶನ ಮುಕ್ತಾಯವಾಗುವುದರಿಂದ ಪ್ರಶ್ನೋತ್ತರ ವೇಳೆಯಲ್ಲಿ ಮಹತ್ವದ ಹಣಕಾಸು ಮಸೂದೆಯನ್ನು ಮಂಡಿಸಲಾಗುವುದು ಎಂದು ಸ್ಪೀಕರ್ ಹೇಳಿದ್ದಾರೆ,

ಅಧಿವೇಶನದ ಕೊನೆಯ ದಿನವಾಗಿರುವ ಇಂದಿನ ಚರ್ಚೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, (Basavaraja Bommai) ಶಾಸಕರು ಹಾಗೂ ಸಚಿವರು ಶಾಸಕರು ಹಾಜರಿರಲಿದ್ದಾರೆ.

“ಸರ್ಕಾರವು (Government) ಕೆಲವು ಉದ್ದೇಶಗಳೊಂದಿಗೆ ಅಧಿವೇಶನಗಳನ್ನು ನಡೆಸಬೇಕು ಮತ್ತು ಜನರ ಸಮಸ್ಯೆಗಳನ್ನು ಚರ್ಚಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಆದರೆ ಸುವರ್ಣ ವಿಧಾನಸೌಧದಲ್ಲಿ ಕನಿಷ್ಠ 22 ದಿನಗಳ ಕಾಲ ಅಧಿವೇಶನ ನಡೆಯಬೇಕಾಗಿತ್ತು,

ಆದರೆ ಡಿಸೆಂಬರ್ 30 ರಂದು ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (union home minister amit shah) ಅವರ ಭೇಟಿ ಮಾಡಲಿರುವುದನ್ನು ಗಮನದಲ್ಲಿರಿಸಿ ಅಧಿವೇಶನವನ್ನು ಗುರುವಾರ ಮಧ್ಯಾಹ್ನದ ವೇಳೆಗೆ ಕೊನೆಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.
Exit mobile version