ಅಗ್ನಿವೀರರಿಗೆ ದೊಡ್ಡ ಆಫರ್ ಕೊಟ್ಟ ಆನಂದ್ ಮಹೀಂದ್ರಾ!

Anand Mahindra

ದೇಶಾದ್ಯಂತ ಕೇಂದ್ರ ಸರ್ಕಾರದ(Central Government) ನೂತನ ‘ಅಗ್ನಿಪಥ್’ ಯೋಜನೆಯನ್ನು(Agnipath Yojana) ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಭಾರತದ ಪ್ರಮುಖ ಉದ್ಯಮಿ(Buisness Man) ಆನಂದ್ ಮಹೀಂದ್ರಾ(Anand Mahindra) ಅವರು ‘ಅಗ್ನಿಪಥ್’ ಯೋಜನೆ ಕುರಿತು ತಮ್ಮ ಆಲೋಚನೆಗಳನ್ನು ಟ್ವೀಟರ್‍ನಲ್ಲಿ ಹಂಚಿಕೊಂಡಿದ್ದಾರೆ.

ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಅಗ್ನಿವೀರರು(Agniveer) ಗಳಿಸುವ ಕೌಶಲ್ಯ ಶಿಸ್ತು ಮತ್ತು ಹೋರಾಡುವ ಮನೋಭಾವ ಅವರನ್ನು ಉದ್ಯೋಗಿಗಳನ್ನಾಗಿ ಮಾಡುತ್ತದೆ. ಮಹೀಂದ್ರಾ ಗ್ರೂಪ್ ಅಂತಹ ಸಮರ್ಥ ಅಗ್ನಿವೀರರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಸ್ವಾಗತಿಸುತ್ತದೆ ಎಂದು ‘ಅಗ್ನಿಪಥ್’ ಯೋಜನೆಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ಸೇನೆಯಲ್ಲಿ ಅಗ್ನಿವೀರರು ಗಳಿಸಿರುವ ದೃಢತೆ, ಶಿಸ್ತು, ಶ್ರಮ ಜೀವನ ಮತ್ತು ಕೌಶಲ್ಯಗಳು ಅವರನ್ನು ಅತ್ಯುತ್ತಮ ಉದ್ಯೋಗ ಪಡೆಯಲು ಸಹಾಯ ಮಾಡುತ್ತವೆ. ಅಂತಹ ಯುವಕರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಮಹೀಂದ್ರಾ ಗ್ರೂಪ್ ಸ್ವಾಗತಿಸುತ್ತದೆ.

ಕಾರ್ಪೋರೇಟ್ ವಲಯದಲ್ಲಿ ಅಗ್ನಿವೀರರಿಗೆ ಉದ್ಯೋಗಕ್ಕೆ ದೊಡ್ಡ ಸಾಮಥ್ರ್ಯವಿದೆ. ನಾಯಕತ್ವ, ಉತ್ತಮ ಕೌಶಲ್ಯಗಳೊಂದಿಗೆ ಅಗ್ನಿವೀರರು ಉದ್ಯಮಕ್ಕೆ ಬೇಕಾದ ವೃತ್ತಿಪರ ಪರಿಹಾರಗಳನ್ನು ಒದಗಿಸುತ್ತಾರೆ. ಕಾರ್ಯಾಚರಣೆ, ನಿರ್ವಹಣೆ, ಆಡಳಿತ ಮತ್ತು ಪೂರೈಕೆವರೆಗಿನ ಕಾರ್ಯಾಚರಣೆಯನ್ನು ನಿರ್ವಹಿಸುವ ಸಾಮಥ್ರ್ಯವನ್ನು ಅವರು ಹೊಂದಿದ್ದಾರೆ ಎಂದು ಆನಂದ್ ಮಹೀಂದ್ರಾ ಅವರು ಹೇಳಿದ್ದಾರೆ. ಇನ್ನು ‘ಅಗ್ನಿಪಥ್’ ಯೋಜನೆ ಜಾರಿಯಾದರೆ 4 ವರ್ಷದ ಬಳಿಕ ಮುಂದೆ ಏನು ಮಾಡಬೇಕು ಎಂಬ ಪ್ರಶ್ನೆ ಯುವಕರಲ್ಲಿ ಮೂಡುತ್ತದೆ.

ಸೇನೆಗೆ ಸೇರುವ ಯುವಕರಿಗೆ ಅಭದ್ರತೆ ಕಾಡುತ್ತದೆ. ಅಗ್ನಿವೀರರಾಗಿ ಹೊರಬಂದ ನಂತರ ಯಾರು ಉದ್ಯೋಗ ನೀಡುತ್ತಾರೆ ಎಂದು ವಿರೋಧ ಪಕ್ಷಗಳು ಈ ಯೋಜನೆಯನ್ನು ವಿರೋಧಿಸಿವೆ.

Exit mobile version