ಬೀದಿಗಿಳಿಯಲಿದ್ದಾರೆ ಅಂಗನವಾಡಿ ಕಾರ್ಯಕರ್ತೆಯರು : ಜೂ. 27ಕ್ಕೆ ಪ್ರತಿಭಟನೆ

Bengalore : ಜೂನ್ 27 ರಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟವು ರಾಜ್ಯಾದ್ಯಂತ (Anganwadi Workers Helpers protest) ಪ್ರತಿಭಟನೆ ನಡೆಸಲು ಉದ್ದೇಶಿಸಿದೆ.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಅಂಗನವಾಡಿ ಸಿಬ್ಬಂದಿಗೆ ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಯೋಜನೆ ಜಾರಿಗೊಳಿಸಬೇಕು ಎಂಬುವುದು ನಮ್ಮ ಗುರಿಯಾಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 15 ಸಾವಿರ ಹಾಗೂ ಸಹಾಯಕಿಯರಿಗೆ 10 ಸಾವಿರ ರೂ.ಗೆ (Anganwadi Workers Helpers protest) ಹೆಚ್ಚಿಸುವ ಸಂಕಲ್ಪ ಮಾಡಿದೆ.

ರಾಜ್ಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದ್ದು, ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿಯೂ ಪ್ರತಿಭಟನೆ ನಡೆಯಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ತಿಳಿಸಿದ್ದಾರೆ.

ಇದನ್ನೂ ಓದಿ : ಇಂದಿರಾ ಕ್ಯಾಂಟೀನ್‌ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆಂದು ಕಾರ್ಯಕರ್ತೆಯರಿಗೆ ನಾಲ್ಕು ವರ್ಷಗಳ ಹಿಂದೆ ನೀಡಿದ ಮೊಬೈಲ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು,

ಕೆಟ್ಟು ಹೋಗಿವೆ ಎಂದು ಎಂ.ಜಯಮ್ಮ ತಿಳಿಸಿದ್ದಾರೆ. ಹೊಸ ಮೊಬೈಲ್ ಫೋನ್ ಅಥವಾ ಮಿನಿ ಟ್ಯಾಬ್ ನೀಡಬೇಕು, ಇಲ್ಲದಿದ್ದರೆ ಜುಲೈ ಮೊದಲ ವಾರದಲ್ಲಿ ಇಲಾಖೆಗೆ ಹಿಂತಿರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಮೊಟ್ಟೆ ಸರಬರಾಜಿನ ಜವಾಬ್ದಾರಿಯನ್ನು ಬಾಲ ವಿಕಾಸ ಸಮಿತಿಗೆ ವಹಿಸಬೇಕು ಹಾಗೂ ಇದರ ಟೆಂಡರ್‌ ನೀಡುವುದನ್ನು ಕೈ ಬಿಡಬೇಕು. ಇನ್ನೂ ಕೆಲವು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದೆ

ಇವುಗಳ ಬಾಡಿಗೆ ಬಾಕಿ ಹಣವನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಆರೋಗ್ಯ ಸಮೀಕ್ಷೆ ಕಾರ್ಯಗಳನ್ನು ನಡೆಸಲು ಈಗಾಗಲೇ ಹೆಚ್ಚು ಒತ್ತಡ ಹೇರುತ್ತಿದೆ ಅದನ್ನು ಕೈಬಿಡಬೇಕು.

3 ಲಕ್ಷ ರು. ನಿವೃತ್ತರಿಗೆ ಇಡುಗಂಟು ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ರಶ್ಮಿತಾ ಅನೀಶ್

Exit mobile version