ಅಣ್ಣಾತೆ’ ಚಿತ್ರ ತಂಡದ 8 ಮಂದಿಗೆ ಕೊರೋನಾ ಪಾಸಿಟಿವ್; ರಜನಿ ಸೆಲ್ಫ್ ಕ್ವಾರಂಟೈನ್

ಚೆನ್ನೈ, ಡಿ. 24: ಸೂಪರ್​ಸ್ಟಾರ್ ರಜನಿಕಾಂತ್ ಅಭಿನಯದ ‘ಅಣ್ಣಾತೆ’ ಚಿತ್ರತಂಡದ ಎಂಟು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ತಲೈವಾ ಸ್ವಯಂ ಕ್ವಾರಂಟೈನ್ ಗೆ ಒಳಗಾಗುವ ಸಾಧ್ಯತೆ ಇದೆ.

‘ಅಣ್ಣಾತೆ’ ಚಿತ್ರ ತಂಡದ 8 ಮಂದಿಗೆ ಕೊರೊನಾ ಪಾಸಿಟಿವ್ ಬಂದ ನಂತರ ರಜನಿಂಕಾತ್ ಅವರು ಸಹ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಅವರ ವರದಿ ನೆಗಟಿವ್ ಬಂದಿದೆ. ಆದರೆ ಸ್ವಯಂ ಕ್ವಾರಂಟೈನ್ ಗೆ ಒಳಗಾಗಲಿದ್ದಾರೆ ಎನ್ನಲಾಗಿದೆ.
ರಜನಿಕಾಂತ್ ಅವರು ಡಿ15 ರಂದು ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ‘ಅಣ್ಣಾತೆ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರೊಂದಿಗೆ ಇದ್ದ ಎಂಟು ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ರಜನಿಕಾಂತ್ ಅವರ ಪ್ರಚಾರಕ ರಿಯಾಜ್ ಅಹಮ್ಮದ್ ಅವರು ಖಚಿತಪಡಿಸಿದ್ದಾರೆ.

ಅಣ್ಣಾತೆ ಚಿತ್ರಕ್ಕೆ ನಿರ್ದೇಶಕ ಸಿರುಥೈ ಶಿವಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಯನತಾರಾ, ಖುಷ್ಬೂ, ಕೀರ್ತಿ ಸುರೇಶ್, ಪ್ರಕಾಶ್ ರಾಜ್, ಮೀನಾ, ಸೂರಿ ಸೇರಿ ಬಹುತಾರಾಗಣವನ್ನು ಈ ಚಿತ್ರ ಹೊಂದಿದೆ.

Exit mobile version