ಮಹ್ಸಾ ಅಮಿನಿಯ ಸಾವನ್ನು ಖಂಡಿಸಿ ತೀವ್ರ ಪ್ರತಿಭಟನೆ ; ತನ್ನ ಕೂದಲನ್ನು ಕತ್ತರಿಸಿ ಪ್ರತಿಭಟಿಸಿದ ಇರಾನ್ ಮಹಿಳೆ!

Iran : ಕಳೆದ ಐದು ದಿನಗಳಿಂದ, ಇರಾನ್ (Iran) ಇಸ್ಲಾಮಿಕ್ ರಾಷ್ಟ್ರದ ಸಂಪ್ರದಾಯವಾದಿ ಡ್ರೆಸ್ ಕೋಡ್ ಹಿಜಾಬ್(Hijab) ಅನ್ನು ಉಲ್ಲಂಘಿಸಿದ್ದಕ್ಕಾಗಿ ದೇಶದ ನೈತಿಕತೆಯ ಪೋಲಿಸ್ ನಿಂದ ಬಂಧನಕ್ಕೊಳಗಾದ,

22 ವರ್ಷದ ಮಹ್ಸಾ ಅಮಿನಿಯ(Mahsa Amini) ಸಾವಿನ ವಿರುದ್ಧ ಇರಾನ್ ಮಹಿಳೆಯರಿಂದ ಭಾರಿ ಪ್ರತಿಭಟನೆಗಳು(Protest) ಪ್ರಾರಂಭವಾಗುತ್ತಿದೆ.

Iran Women

ಈ ಘಟನೆಯು ಇರಾನ್ ಮಹಿಳೆಯರನ್ನು ಕೆರಳಿಸಿದ್ದು, ಪ್ರತಿಭಟನೆಯ ತೀವ್ರತೆಯನ್ನು ಪ್ರದರ್ಶಿಸುತ್ತಿದೆ. ಇರಾನ್ ರಾಜಧಾನಿಯಲ್ಲಿ ಸಾರ್ವಜನಿಕವಾಗಿ ಮಹಿಳೆಯೊಬ್ಬರು,

ತಮ್ಮ ಕೂದಲನ್ನು ಕತ್ತರಿಸುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿರುವ ವೀಡಿಯೊ(Video) ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗುವುದರೊಂದಿಗೆ ಟೆಹ್ರಾನ್‌ನಲ್ಲಿನ ಶಾಂತಿ ಕದಡುತ್ತಿದೆ.

ಇದನ್ನು ನೋಡಿದ ಹಲವಾರು ಮಹಿಳೆಯರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕೂದಲನ್ನು ಕತ್ತರಿಸಿ, ತಮ್ಮ ಹಿಜಾಬ್‌ಗಳಿಗೆ ಬೆಂಕಿ ಹಚ್ಚುವ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಪ್ರಾರಂಭಿಸಿದ್ದಾರೆ.

ಮಹ್ಸಾ ಅಮಿನಿಯ ಸಾವು ಸಾಮಾನ್ಯ ಸಾವಲ್ಲ, ಅದು ಲಾಕ್ಅಪ್ ಡೆತ್ ಆಗಿದೆ ಎಂದು ಆರೋಪಿಸಿ ಲಕ್ಷಾಂತರ ಇರಾನ್ ಮಹಿಳೆಯರು ಇರಾನ್‌ನಲ್ಲಿ ಹಿಜಾಬ್ ಅನ್ನು ಕಡ್ಡಾಯಗೊಳಿಸುವ ಕಾನೂನನ್ನು ವಿರೋಧಿಸಿದ್ದಾರೆ.

https://youtu.be/BdixzpXaWjA ಬಿಬಿಎಂಪಿ ಚುನಾವಣೆ ಬೇಕಾ? ಬೇಡ್ವಾ?

1979ರ ಕ್ರಾಂತಿಯ ನಂತರ ವಿಧಿಸಲಾದ ಇರಾನ್‌ನ ಷರಿಯಾ (ಇಸ್ಲಾಮಿಕ್) ಕಾನೂನಿನ ಅಡಿಯಲ್ಲಿ, ಮಹಿಳೆಯರು ತಮ್ಮ ಕೂದಲನ್ನು ಮುಚ್ಚಲು ಮತ್ತು ತಮ್ಮ ವ್ಯಕ್ತಿಗಳನ್ನು ಮರೆಮಾಚಲು ಉದ್ದವಾದ, ಸಡಿಲವಾದ ಬಟ್ಟೆಗಳನ್ನು ಧರಿಸಲು ನಿರ್ಬಂಧವನ್ನು ಹೊಂದಿರುತ್ತಾರೆ.

https://vijayatimes.com/trustee-for-pm-cares-fund/

ಉಲ್ಲಂಘಿಸುವವರು ಸಾರ್ವಜನಿಕ ಖಂಡನೆ, ದಂಡ ಅಥವಾ ಬಂಧನವನ್ನು ಎದುರಿಸುತ್ತಾರೆ. ನೈತಿಕತೆಯ ಪೋಲೀಸರು ಅದನ್ನು ಮತ್ತು ಇತರ ನಿರ್ಬಂಧಗಳನ್ನು ಜಾರಿಗೊಳಿಸುವ ಆರೋಪವನ್ನು ಹೊಂದಿದ್ದಾರೆ, ಇದು ಇತ್ತೀಚಿನ ವರ್ಷಗಳಲ್ಲಿ ಟೀಕೆಗೊಳಗಾಗಿದೆ! ಕಳೆದ ಒಂದು ವಾರದ ಹಿಂದೆ ಇದೇ ಕಾರಣದ ಮೇಲೆ ಮಹ್ಸಾ ಅಮಿನಿ ಎಂಬ ಮಹಿಳೆಯೂ ಧರಿಸಿದ್ದ ಹಿಜಾಬ್ ಲೋಪವಾಗಿದೆ ಎಂದು ಆರೋಪಿಸಿ ಆಕೆಯನ್ನು ಪೊಲೀಸರು ಬಂಧಿಸಿದರು.

Mahsa Amini
ತದನಂತರ ಮಹ್ಸಾ ಅಮಿನಿ ಕೋಮಾಕ್ಕೆ ಬಿದ್ದು ಸಾವನ್ನಪ್ಪಿದರು. ಈ ಘಟನೆಯು ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹೊರಬರುತ್ತಿದ್ದಂತೆ, ಬೀದಿ ಬೀದಿಗಳಲ್ಲಿ ಇರಾನ್ ಮಹಿಳೆಯರಿಂದ ಭಾರೀ ಪ್ರತಿಭಟನೆಯನ್ನು ಹುಟ್ಟುಹಾಕಿತು. ಸದ್ಯ ಮಹ್ಸಾ ಅಮಿನಿ ಸಾವನ್ನು ಖಂಡಿಸಿ ಇರಾನ್ ಮಹಿಳೆಯರು ನಡೆಸುತ್ತಿರುವ ಬೃಹತ್ ಪ್ರತಿಭಟನೆಯೂ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ.
Exit mobile version