Mangalore: ದಕ್ಷಿಣ ಕನ್ನಡ (anticipatory bail vijayalakshmi shibaroor) ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ರೆಡ್ ಬಾಕ್ಸೈಟ್ ಹಗರಣವನ್ನು ಬಯಲಿಗೆಳೆದ ವಿಜಯಟೈಮ್ಸ್
ಮುಖ್ಯಸ್ಥೆ ವಿಜಯಲಕ್ಷ್ಮಿ ಶಿಬರೂರು ಹಾಗೂ ಅವರ ತಂಡದ ಸದಸ್ಯರ ವಿರುದ್ಧ ವಿಟ್ಲ (Vitla) ಪೊಲೀಸರು ಸ್ವಯಂಪ್ರೇರಿತರಾಗಿ ಎಫ್ಐಆರ್ ದಾಖಲಿಸಿದ ಪ್ರಕರಣದಲ್ಲಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು
ವಿಜಯಲಕ್ಷ್ಮಿ ಶಿಬರೂರು (Vijayalakshmi Shibaroor) ಹಾಗೂ ಅವರ ತಂಡದವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ.
ಕವರ್ಸ್ಟೋರಿ (Cover story)ತಂಡದ ಪರವಾಗಿ ಬಂಟ್ವಾಳದ ಖ್ಯಾತ ವಕೀಲರಾದ ಸುರೇಶ್ ನಾವೂರು ಅವರು ಸಮರ್ಥವಾಗಿ ವಾದ ಮಂಡಿಸಿ ಜಾಮೀನು ದೊರಕಿಸಿಕೊಡುವಲ್ಲಿ ಯಶಸ್ವಿಯಾದರು.
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ಗಡಿ ಭಾಗದಲ್ಲಿ ಅಕ್ರಮ ರೆಡ್ ಬಾಕ್ಸೈಟ್ (Red Bauxite) ಗಣಿಗಾರಿಕೆ ನಡೆಸಿ, ಅದನ್ನು ಪರ್ಮಿಟ್ ಇಲ್ಲದೆ ಬೇರೆ ರಾಜ್ಯ ಸಾಗಿಸುವುದನ್ನು ವಿಜಯಟೈಮ್ಸ್ (Vijaya times)
ದಾಖಲೆ ಸಮೇತ ವರದಿಯನ್ನು (anticipatory bail vijayalakshmi shibaroor) ಪ್ರಕಟಿಸಿತ್ತು.
ಅಲ್ಲದೆ ಕೇರಳಾ (Kerala) ಹಾಗೂ ಕರ್ನಾಟಕ (Karnataka) ಗಡಿ ಭಾಗದಲ್ಲಿ ಈ ಅಕ್ರಮ ಹಲವು ವರ್ಷಗಳಿಂದ ನಡೆಯುತ್ತಿದ್ದರೂ, ಗಣಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು
ಕ್ರಮಕೈಗೊಳ್ಳದೆ ಮೌನವಹಿಸಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟವಾಗುತ್ತಿರುವ ಬಗ್ಗೆ ಸವಿವರವಾದ ವರದಿ ಪ್ರಕಟಿಸಿತ್ತು.
ಅಲ್ಲದೆ ಸಿಸಿ ಟಿವಿ (CCTV) ಇಲ್ಲದಿದ್ದರೂ ಚೆಕ್ಪೋಸ್ಟ್ನಲ್ಲಿ ಸಿಸಿಟಿವಿ ಇದೆ ಅನ್ನುವ ಫಲಕ ಹಾಕಿ ಜನರನ್ನು ದಾರಿತಪ್ಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ನಡೆಸುತ್ತಿರುವ ಬಗ್ಗೆ ವಿಜಯಟೈಮ್ಸ್ನ
ಕವರ್ಸ್ಟೋರಿ ತಂಡ ಪ್ರಶ್ನಿಸಿದ್ದರ ವಿರುದ್ಧ ವಿಟ್ಲ ಪೊಲೀಸರು ಎಫ್ಐಆರ್ (FIR) ದಾಖಲಿಸಿದ್ದರು.
ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ವಿಜಯಟೈಮ್ಸ್ ಕವರ್ಸ್ಟೋರಿ ತಂಡದ ಸದಸ್ಯರು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದರು. ಅರ್ಜಿಯನ್ನು ಪುರಸ್ಕರಿಸಿದ ಪ್ರಧಾನ
ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀ ರವೀಂದ್ರ ಎಂ ಜೋಶಿಯವರು (Shree Ravindra M Joshi) ವಾದ ಆಲಿಸಿ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ರ
ಇದನ್ನು ಓದಿ: ಪರಿಶಿಷ್ಟ ಜಾತಿಯವನು ಎನ್ನುವ ಕಾರಣಕ್ಕೆ ಹೆಡಗೇವಾರ್ ವಸ್ತುಸಂಗ್ರಹಾಲಯ ಪ್ರವೇಶಕ್ಕೆ ಬಿಡಲಿಲ್ಲ: ಗೂಳಿಹಟ್ಟಿ ಶೇಖರ್