ಎಸ್‌ಎಸ್‌ಬಿ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೋಟಿಫಿಕೇಶನ್ ಬಿಡುಗಡೆ: ಅರ್ಜಿ ಆಹ್ವಾನ

ಸಶಸ್ತ್ರ ಸೀಮಾ ಬಲವು ಸಬ್‌ ಇನ್ಸ್‌ಪೆಕ್ಟರ್‌ (Sub Inspector) ಗ್ರೂಪ್‌ ಬಿ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ (Notification) ಬಿಡುಗಡೆ ಮಾಡಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 19 ರಿಂದ 30 ದಿನಗಳವರೆಗೆ ಅವಕಾಶ ನೀಡಲಾಗಿದೆ. ಹುದ್ದೆಗಳ ವಿವರ ಕೆಳಗಿನಂತಿದ್ದು ವಿಷಯವನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ.

ಹುದ್ದೆಗಳು
ಸಬ್‌ ಇನ್ಸ್‌ಪೆಕ್ಟರ್ (ಕಂಮ್ಯುನಿಕೇಷನ್) : 59
ಸಬ್‌ ಇನ್ಸ್‌ಪೆಕ್ಟರ್ (ಸ್ಟಾಫ್‌ ನರ್ಸ್‌ ಮಹಿಳಾ) : 29
ಸಬ್‌ ಇನ್ಸ್‌ಪೆಕ್ಟರ್ (ಪಯೋನೀರ್) : 20
ಸಬ್‌ ಇನ್ಸ್‌ಪೆಕ್ಟರ್ (ಡ್ರಾಟ್ಸ್‌ಮನ್) : 03

ವಿದ್ಯಾರ್ಹತೆ
ಸಬ್‌ ಇನ್ಸ್‌ಪೆಕ್ಟರ್ (ಕಂಮ್ಯುನಿಕೇಷನ್) : ಡಿಗ್ರಿ (ಇಲೆಕ್ಟ್ರಾನಿಕ್ಸ್‌ ಅಂಡ್ ಕಂಮ್ಯುನಿಕೇಷನ್‌, ಐಟಿ ಇಂಜಿನಿಯರಿಂಗ್, ಸೈನ್ಸ್‌ ಪದವಿ).
ಸಬ್‌ ಇನ್ಸ್‌ಪೆಕ್ಟರ್ (ಸ್ಟಾಫ್‌ ನರ್ಸ್‌ ಮಹಿಳಾ) : ವಿಜ್ಞಾನ ಪಿಯುಸಿ, ಡಿಪ್ಲೊಮ (Diploma) (ಜೆನೆರಲ್ ನರ್ಸಿಂಗ್).
ಸಬ್‌ ಇನ್ಸ್‌ಪೆಕ್ಟರ್ (ಪಯೋನೀರ್) : ಡಿಪ್ಲೊಮ / ಡಿಗ್ರಿ.
ಸಬ್‌ ಇನ್ಸ್‌ಪೆಕ್ಟರ್ (ಡ್ರಾಟ್ಸ್‌ಮನ್) : ಮೆಟ್ರಿಕ್ಯುಲೇಷನ್, ನ್ಯಾಷನಲ್ ಟ್ರೇಡ್ಸ್‌ಮನ್ ಸರ್ಟಿಫಿಕೇಟ್‌(National Tradesman Certificate).

ವಯಸ್ಸು
ಸಬ್‌ ಇನ್ಸ್‌ಪೆಕ್ಟರ್ (ಕಂಮ್ಯುನಿಕೇಷನ್) : ಗರಿಷ್ಠ 30 ವರ್ಷ ಮೀರಿರಬಾರದು.
ಸಬ್‌ ಇನ್ಸ್‌ಪೆಕ್ಟರ್ (ಸ್ಟಾಫ್‌ ನರ್ಸ್‌ ಮಹಿಳಾ) : 21 ರಿಂದ ಗರಿಷ್ಠ 30 ವರ್ಷ ಮೀರಿರಬಾರದು.
ಸಬ್‌ ಇನ್ಸ್‌ಪೆಕ್ಟರ್ (ಪಯೋನೀರ್) : ಗರಿಷ್ಠ 30 ವರ್ಷ ಮೀರಿರಬಾರದು.
ಸಬ್‌ ಇನ್ಸ್‌ಪೆಕ್ಟರ್ (ಡ್ರಾಟ್ಸ್‌ಮನ್) : 18 ರಿಂದ ಗರಿಷ್ಠ 30 ವರ್ಷ ಮೀರಿರಬಾರದು.

ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಇರುತ್ತದೆ.

ಆಯ್ಕೆಯ ವಿಧಾನ: ಆಯ್ಕೆ ಪ್ರಕ್ರಿಯೆಯಲ್ಲಿ ಸಹಿಷ್ಣುತೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ ಇರುತ್ತದೆ.

ಅರ್ಜಿ ಸಲ್ಲಿಕೆ ದಿನಾಂಕಗಳು
ನೋಟಿಫಿಕೇಶನ್‌ ಬಿಡುಗಡೆ ದಿನಾಂಕ: 19-10-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಅಧಿಸೂಚನೆ ಬಿಡುಗಡೆಯಾದ ದಿನದಿಂದ 30 ದಿನ ಕಾಲಾವಕಾಶ.

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್‌ (Website) ವಿಳಾಸ : www.ssbrectt.gov.in

ಹೆಚ್ಚಿನ ಮಾಹಿತಿಗಳಿಗಾಗಿ ಈ ಕೆಳಗೆ ನಮೂದಿಸಲಾಗಿರುವ ವೆಬ್‌ಸೈಟ್‌ ಕ್ಲಿಕ್ (Click) ಮಾಡಿ ಓದಿರಿ.

ಸಂಸ್ಥೆಯ ಹೆಸರು: ಸಶಸ್ತ್ರ ಸೀಮಾ ಬಲ
ಸ್ಥಳ: ನವದೆಹಲಿ(New Delhi)
ವೆಬ್‌ಸೈಟ್‌ ವಿಳಾಸ: https://ssb.nic.in/?AspxAutoDetectCookieSupport=1

ಭವ್ಯಶ್ರೀ ಆರ್.ಜೆ

Exit mobile version