ಇಬ್ಬರು ಉಗ್ರಗಾಮಿಗಳನ್ನು ಹತ್ಯೆಗೈದ ಸೇನಾ ಶ್ವಾನ ; ಗುಂಡೇಟು ಬಿದ್ದು ಆಸ್ಪತ್ರೆಗೆ ದಾಖಲಾದ ಜೂಮ್!

New Delhi : ದೇಶದ ರಕ್ಷಣೆ ವಿಚಾರದಲ್ಲಿ ಭಾರತೀಯ ಸೇನೆಯ (Indian Army) ಪಾತ್ರ ಬಹಳ ಮಹತ್ವದ್ದು, ಭಾರತೀಯ ಸೇನೆಯಲ್ಲಿ ನಾಯಿಗಳೂ ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳ ವಾಸನಾ ಗ್ರಹಣ ಶಕ್ತಿ ದೇಶ ರಕ್ಷಣೆಗೆ,

ವಿಧ್ವಂಸಕ ಕೃತ್ಯಗಳನ್ನು ತಡೆಯಲು ಹೆಚ್ಚಿನ ಸಂದರ್ಭಗಳಲ್ಲಿ ಸಹಾಯಕಾರಿಯಾಗುತ್ತಲೇ ಇರುತ್ತದೆ.

ಇದನ್ನೂ ಓದಿ : https://vijayatimes.com/driver-detained-by-bengaluru-police/

ಸೈನಿಕರಂತೆ, ಸೇನಾ ನಾಯಿಗಳು ಸಹ ಸೇನೆಯ ಹೀರೋಗಳು ಎಂದು ಪರಿಗಣಿಸಿದರೆ ತಪ್ಪಾಗಲಾರದು. ಸೇನೆಯ ನಾಯಿಗಳನ್ನು ನೋಡಿದರೆ, ಒಂದು ಕ್ಷಣ ಎದುರಿರುವವರ ಗುಂಡಿಗೆಯಲ್ಲಿ ನಡುಕ ಹುಟ್ಟುತ್ತದೆ.

ಸಾವಿರಾರು ನಾಯಿಗಳು ಸೇನೆಯಲ್ಲಿ ತಮ್ಮ ಪಾತ್ರ ನಿರ್ವಹಿಸುತ್ತಿದ್ದು, ಇವುಗಳೂ ಸಹ ಉಗ್ರರ ವಿರುದ್ಧದ ಕಾರ್ಯಾಚರಣೆ, ಗಡಿಯಲ್ಲಿ ಗುಂಡಿನ ಚಕಮಕಿ ಇಂತಹ ಸಂದರ್ಭಗಳಲ್ಲಿ ವೀರ ಮರಣವನ್ನೂ ಹೊಂದುತ್ತವೆ.

ಅದೇ ರೀತಿ, ಸೋಮವಾರ ಜಮ್ಮು ಮತ್ತು ಕಾಶ್ಮೀರದ (Jammu & Kashmir) ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು,

ಉಗ್ರಗಾಮಿಗಳ ನಡುವೆ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಸೇನೆಯ ಶ್ವಾನ ತೀವ್ರವಾಗಿ ಗಾಯಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ಕಾರ್ಯಾಚರಣೆಯ ವಿವರ ಹೀಗಿದೆ. ಭಾನುವಾರ ತಡರಾತ್ರಿ ದಕ್ಷಿಣ ಕಾಶ್ಮೀರ ಜಿಲ್ಲೆಯ ತಂಗ್ಪಾವಾ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.

ಸೋಮವಾರ ಬೆಳಗ್ಗೆ ಸೇನೆಯು ಉಗ್ರರು ಅಡಗಿರುವ ಮನೆಯೊಳಗೆ ‘ಜೂಮ್’ ಹೆಸರಿನ (Army Dog Zoom Injured) ಆಕ್ರಮಣಕಾರಿ ನಾಯಿಯನ್ನು ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


“ಜೂಮ್ ಹೆಚ್ಚು ತರಬೇತಿ ಪಡೆದ, ಆಕ್ರಮಣಕಾರಿ ಮತ್ತು ಹೆಚ್ಚು ಬದ್ಧತೆಯುಳ್ಳ ಶ್ವಾನ. ಇದಕ್ಕೆ ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ಕೆಳಕ್ಕುರುಳಿಸಲು ತರಬೇತಿ ನೀಡಲಾಗಿದೆ.

ದಕ್ಷಿಣ ಕಾಶ್ಮೀರದಲ್ಲಿ ಜೂಮ್ ಅನೇಕ ಸಕ್ರಿಯ ಕಾರ್ಯಾಚರಣೆಗಳ ಭಾಗವಾಗಿದೆ” ಎಂದು ಅವರು ಹೇಳಿದ್ದಾರೆ.


ಸೋಮವಾರ, ಎಂದಿನಂತೆ, ಭಯೋತ್ಪಾದಕರು (Terrorists) ಅಡಗಿರುವ ಮನೆಯನ್ನು ತೆರವುಗೊಳಿಸಲು ಜೂಮ್ (Army Dog Zoom Injured) ಅನ್ನು ನಿಯೋಜಿಸಲಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ,

ಜೂಮ್ ಭಯೋತ್ಪಾದಕರನ್ನು ಗುರುತಿಸಿ ದಾಳಿ ಮಾಡಿತು, ಈ ಸಮಯದಲ್ಲಿ ಶ್ವಾನಕ್ಕೆ ಎರಡು ಗುಂಡುಗಳು ತಗಲಿದ್ದವು ಮತ್ತು ಅದು ತೀವ್ರವಾಗಿ ಗಾಯಗೊಂಡಿತ್ತು.

ಇದನ್ನೂ ಓದಿ : https://vijayatimes.com/slogans-voilence-protest/

ಆದರೂ ಜೂಮ್ ಛಲ ಬಿಡದೇ ಹೋರಾಡಿ, ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿತ್ತು. ಕೊನೆಗೆ, ಈ ಶ್ವಾನ ಇಬ್ಬರು ಉಗ್ರಗಾಮಿಗಳ ಹತ್ಯೆಗೂ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂತಹ ತೀವ್ರವಾದ ಗಾಯಗಳ ನಡುವೆಯೂ, ಕೆಚ್ಚೆದೆಯ ಸೇನಾ ಶ್ವಾನ ಜೂಮ್, ತನ್ನ ಕಾರ್ಯವನ್ನು ಮುಂದುವರೆಸಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿರುವುದು, ಸೇನಾ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
Exit mobile version