ಶೀಘ್ರದಲ್ಲೇ ರಾಜ್ಯ ಸರ್ಕಾರವು ಪ್ರತಿ ಬಿಪಿಎಲ್ ಕುಟುಂಬಕ್ಕೆ ತಿಂಗಳಿಗೆ 2,000 ರೂ. ನೀಡಲಿದೆ : ಆರ್ ಅಶೋಕ್

Bengaluru : ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ಬಿಪಿಎಲ್(Ashok promises to BPL family) ಕುಟುಂಬಕ್ಕೆ ತಿಂಗಳಿಗೆ 2,000 ರೂ. ಹಣವನ್ನು ಶೀಘ್ರದಲ್ಲೇ ನೀಡಲಿದೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌(R Ashok) ಭರವಸೆ ನೀಡಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಕ್ಕೆ ತಿಂಗಳಿಗೆ 2,000 ರೂ. ಹಣವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು,

ಮುಂಬರುವ ಬಜೆಟ್‌ನಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಕರ್ನಾಟಕ ಕಂದಾಯ ಸಚಿವ ಆರ್. ಅಶೋಕ್‌ ಅವರು ಮಂಗಳವಾರ ಹೇಳಿದ್ದಾರೆ.

ಇನ್ನು ಮೊನ್ನೆಯಷ್ಟೇ ಕಾಂಗ್ರೆಸ್‌(congress) ಪ್ರತಿ ಮಹಿಳೆಗೆ ಮಾಸಿಕ ೨೦೦೦ ರೂ. ನೀಡುವುದಾಗಿ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿಯೂ ಇದೇ ರೀತಿಯ ಯೋಜನೆಯನ್ನು ಘೋಷಣೆ ಮಾಡಿದೆ!

ಮೊನ್ನೆ ನಡೆದ ಕಾಂಗ್ರೆಸ್‌ ಆಯೋಜನೆಯ ನಾ ನಾಯಕಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ(priyanka gandhi vadra) ಸೋಮವಾರ ಈ ಘೋಷಣೆ ಮಾಡಿದ್ದು,

ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ ತಿಂಗಳಿಗೆ 2,000 ರೂ. ಹಣವನ್ನು ನೀಡಲಾಗುತ್ತದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಿಂಗಳಿಗೆ 2 ಸಾವಿರ ರೂ. ಹಣವನ್ನು ನೀಡುತ್ತೇವೆ. ಇದು ಜುಲೈ ತಿಂಗಳಿನಿಂದ ಅನ್ವಯವಾಗಲಿದೆ. ಆದರೆ ನಾವು ಈಗಿನಿಂದಲೇ ಆರಂಭಿಸಲಿದ್ದೇವೆ ಎಂದು ಹೇಳಿದರು.

ಸದ್ಯ ಕಂದಾಯ ಸಚಿವ ಆರ್.‌ ಅಶೋಕ್‌ ಅವರು ನಾನು ಹೇಳಿದ ಯೋಜನೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

ಇನ್ನು ಪ್ರಿಯಾಂಕಾ ಗಾಂಧಿ ಅವರ ಕಾರ್ಯಕ್ರಮದ ಬಗ್ಗೆ ವಾಗ್ದಾಳಿ ನಡೆಸಿದ ಆರ್ ಅಶೋಕ್, ನಾ ನಾಯಕ, ನಾ ನಾಯಕಿ ಎಂದು ಹೇಳುವುದಲ್ಲ!

ಬದಲಾಗಿ ಪ್ರಧಾನಿ ಮೋದಿ(Narendra modi) ಅವರೇ ಹೇಳಿದಂತೆ ನಾವೆಲ್ಲರೂ ಸೇವಕರು.

ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ಅವರು “ಗೃಹ ಲಕ್ಷ್ಮಿ ಯೋಜನೆ” ಅಡಿಯಲ್ಲಿ ವಾರ್ಷಿಕವಾಗಿ 24,000 ರೂ.

ಹಣವನ್ನು ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: https://vijayatimes.com/bsy-dr-sudhakar-acted-movie/

ಈ ಯೋಜನೆಯು ‘ನಾ ನಾಯಕಿ’ ಯ ಒಂದು ಭಾಗವಾಗಿದೆ ಅಷ್ಟೇ!. ನಾ ನಾಯಕಿ ಎಂದರೆ ನಾನು ನಾಯಕ’ ಮತ್ತು ಗೃಹ ಲಕ್ಷ್ಮಿ(Gruha lakshmi) ಇದರ ಭಾಗವಾಗಿದೆ.

ಕಳೆದ 75 ವರ್ಷಗಳಿಂದ ಮಾಡದ ಕೆಲಸವನ್ನು ಬಿಜೆಪಿ(BJP) ನೇತೃತ್ವದ ಸರ್ಕಾರ ಮಾಡಿದೆ ಎಂದು ಕಂದಾಯ ಸಚಿವರಾದ ಆರ್. ಅಶೋಕ್‌ ಕಾಂಗ್ರೆಸ್‌ ವಿರುದ್ಧ ವ್ಯಂಗ್ಯವಾಡಿದ್ದಾರೆ.

Exit mobile version