Asia Cup: 2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ (asiacup ind vs pak) ಬದ್ದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯ ಭಾರೀ ರೋಚಕತೆಯನ್ನು ಕೆರಳಿಸಿದೆ.
ಭಾರತ-ಪಾಕ್ ನಡುವಿನ ಮೊದಲ ಪಂದ್ಯ ಶನಿವಾರ ಶ್ರೀಲಂಕಾದ (Srilanka) ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೆಡಿಯಂನಲ್ಲಿ (Stadium) ನಡೆಯಲಿದೆ. ಈ ಪಂದ್ಯಕ್ಕೆ ಸಂಭಾವ್ಯ
ತಂಡವನ್ನು (asiacup ind vs pak) ಭಾರತ ಪ್ರಕಟಿಸಿದೆ.
ಪ್ರಮುಖ ಬ್ಯಾಟರ್ ಕೆ.ಎಲ್ ರಾಹುಲ್ (K L Rahul) ಫಿಟ್ ಇಲ್ಲದ ಕಾರಣ ಅವರನ್ನು ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹೊರಗಿಡುವ ಸಾಧ್ಯತೆಗಳಿವೆ. ಅವರ ಬದಲಿಗೆ ಇಶಾನ್ ಕಿಶನ್
ಕಣಕ್ಕಿಳಿಯಲಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ ಭಾರತ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದರೆ, ಜಸ್ಪ್ರೀತ್ ಬುಮ್ರಾ ಮರಳಿರುವುದರಿಂದ ಭಾರತ ತಂಡದ
ಬೌಲಿಂಗ್ಗೆ ಹೊಸ ಶಕ್ತಿ ಬಂದಿದೆ. ಇನ್ನು ಈ ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ (Star Sports) ಮತ್ತು ಲೈವ್ ಸ್ಟ್ರೀಮಿಂಗ್ ಜೊಯೋ ಸಿನಿಮಾ ಬರಲಿದೆ.
ಮಣಿಪುರ ಹಿಂಸಾಚಾರ: ಖ್ಯಾತ ಆದಿವಾಸಿ ಗೀತೆ ರಚನೆಕಾರ ಲುಂಗ್ಡಿಮ್ ಸೇರಿ ಆರು ಜನ ಗುಂಡಿನ ದಾಳಿಗೆ ಬಲಿ
ಸಂಭಾವ್ಯ ಭಾರತ ತಂಡ : ರೋಹಿತ್ ಶರ್ಮಾ (Rohit Sharma) (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಇಶಾನ್ ಕಿಶನ್(ವಿಕೆಟ್ ಕೀಪರ್),
ಹಾರ್ದಿಕ್ ಪಾಂಡ್ಯ (Hardik Pandya), ಶಾರ್ದುಲ್ ಠಾಕೂರ್, ಜಸ್ಪ್ರೀತ್ ಬುಮ್ರಾ ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ,
ಸಂಭಾವ್ಯ ಪಾಕಿಸ್ತಾನ (Pakistan) ತಂಡ : ಬಾಬರ್ ಅಝಮ್ (ನಾಯಕ), ಶದಾಬ್ ಖಾನ್ (ಉಪ ನಾಯಕ), ಫಖಾರ್ ಝಮಾನ್, ಇಮಾಮ್ ಉಲ್ ಹಕ್, ಮೊಹಮ್ಮದ್ ರಿಝ್ವಾನ್ (ವಿ.ಕೀ),
ಅಘ ಸಲ್ಮಾನ್, ಹ್ಯಾರಿಸ್ ರೌಫ್ ಇಫ್ತಿಖಾರ್ ಅಹ್ಮದ್, ಮೊಹಮ್ಮದ್ ನವಾಜ್ (Mohammed Navaz), ಶಾಹೀನ್ ಅಫ್ರಿದಿ, ನಸೀಮ್ ಶಾ,
ಪಂದ್ಯದ ವಿವರ :
ದಿನಾಂಕ: ಸೆಪ್ಟಂಬರ್ 2, 2023 ಶನಿವಾರ
ಸಮಯ: ಮಧ್ಯಾಹ್ನ 3:00 ಗಂಟೆಗೆ
ಸ್ಥಳ: ಪಲ್ಲೆಕೆಲೆ ಇಂಟರ್ ನ್ಯಾಷನಲ್ ಕ್ರೀಡಾಂಗಣ, ಪಲ್ಲೆಕೆಲೆ
ಈ ಹಿಂದಿನ ಅಂಕಿಅಂಶ :
ಒಟ್ಟು ಆಡಿರುವ ಪಂದ್ಯಗಳು: 132
ಪಾಕಿಸ್ತಾನ ತಂಡದ ಗೆಲುವು: 73
ಭಾರತ ತಂಡದ ಗೆಲುವು: 55
ಡ್ರಾ : 04