2023 ರ ಏಷ್ಯಾಕಪ್ ಟೂರ್ನಿ ಡೇಟ್ ಫಿಕ್ಸ್ : ಪಾಕಿಸ್ತಾನದಲ್ಲಿ ನಡೆಯುವ ಪಂದ್ಯಗಳಲ್ಲಿ ಭಾರತ ತಂಡ ಭಾಗವಹಿಸಲಿದೆಯೇ… ಇಲ್ಲಿದೆ ಮಾಹಿತಿ

Sports News: 2023 ರ ಏಷ್ಯಾಕಪ್ (AsiaCup Tournament Date Fixed) ಟೂರ್ನಿಗಾಗಿ ದಿನಾಂಕಗಳನ್ನು ದೃಢೀಕರಿಸಲಾಗಿದೆ. ಏಷ್ಯಾಕಪ್ ಆಗಸ್ಟ್ 31 ರಂದು ಆರಂಭವಾಗಿ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ

ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) (Asian Cricket Council) ಖಚಿತಪಡಿಸಿದೆ. ಈ ಬಾರಿಯ ಸ್ಪರ್ಧೆಯು ಮಿಶ್ರ ಮಾದರಿಯಲ್ಲಿ ನಡೆಯಲಿದೆ.

ಇದರರ್ಥ ಏಷ್ಯಾಕಪ್ ಅನ್ನು ಆಯೋಜಿಸುವ ಹಕ್ಕನ್ನು ಹೊಂದಿರುವ ಪಾಕಿಸ್ತಾನದಲ್ಲಿ (Pakistana) ನಾಲ್ಕು ಪಂದ್ಯಗಳನ್ನು ಆಡಲಾಗುತ್ತದೆ, ಆದರೆ ಉಳಿದ ಒಂಬತ್ತು ಪಂದ್ಯಗಳನ್ನು ಶ್ರೀಲಂಕಾದಲ್ಲಿ

(Sri Lanka) ಆಡಲಾಗುತ್ತದೆ. ಏಕೆಂದರೆ ಪಾಕಿಸ್ತಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತ ತಂಡ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ(BCCI) ಸ್ಪಷ್ಟಪಡಿಸಿದೆ.

ಇದನ್ನೂ ಓದಿ : 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆಡಲ್ಲ : ಅಭಿಮಾನಿಗಳಿಗೆ ಶಾಕ್ ಕೊಟ್ಟ ಲಿಯೋನೆಲ್ ಮೆಸ್ಸಿ..!

ಹೀಗಾಗಿ ಪಂದ್ಯವನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಹಾಗಾಗಿ ಭಾರತವನ್ನು ಹೊರತುಪಡಿಸಿ ಪಾಕಿಸ್ತಾನದಲ್ಲಿ 4 ಪಂದ್ಯಗಳು ನಡೆಯಲಿದ್ದು,

ಸೂಪರ್ 4 ಮತ್ತು ಫೈನಲ್ ಸೇರಿದಂತೆ 9 ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ (AsiaCup Tournament Date Fixed) ವಹಿಸಲಿದೆ.

ಈ ವರ್ಷದ ಈವೆಂಟ್ ಕೂಡ ಭಾರತ ಮತ್ತು ಪಾಕಿಸ್ತಾನದ ಎರಡು ತಂಡಗಳ ಒಂದೇ ಗುಂಪಾಗಿದ್ದು, ಈ ಪಂದ್ಯವು ಶ್ರೀಲಂಕಾದಲ್ಲಿ ನಡೆಯಲಿದೆ. ಇದರ ಜೊತೆಗೆ ನೇಪಾಳ (Nepal)ಈ ಗುಂಪಿನಲ್ಲಿ ಮೂರನೇ

ಸ್ಥಾನವಾಗಿ ಆಡಲಿದೆ . ಅಂದರೆ ಇದೇ ಮೊದಲ ಬಾರಿಗೆ ನೇಪಾಳ ತಂಡ ಏಷ್ಯಾಕಪ್ ಗೆ ಅರ್ಹತೆ ಪಡೆದಿದ್ದು, ಮೊದಲ ಟೂರ್ನಿಯಲ್ಲಿ ಏಷ್ಯಾದ ಎರಡು ಬಲಿಷ್ಠ ರಾಷ್ಟ್ರಗಳ ವಿರುದ್ಧ ಆಡುವ ಅವಕಾಶ ಪಡೆದಿದೆ.

ನ್ನು ಈ ಬಾರಿ ಏಷ್ಯಾಕಪ್ ಆಡಲಿರುವ 6 ತಂಡಗಳು ಈ ಕೆಳಗಿನಂತಿವೆ.

ಪಾಕಿಸ್ತಾನ್ (ಗ್ರೂಪ್-A)
ಭಾರತ (ಗ್ರೂಪ್-A)
ನೇಪಾಳ (ಗ್ರೂಪ್-A)
ಅಫ್ಘಾನಿಸ್ತಾನ್ (ಗ್ರೂಪ್-B)
ಶ್ರೀಲಂಕಾ (ಗ್ರೂಪ್-B)
ಬಾಂಗ್ಲಾದೇಶ್ (ಗ್ರೂಪ್-B)

ರಶ್ಮಿತಾ ಅನೀಶ್

Exit mobile version