ನಮಗೆ ಮದರಸಾಗಳು ಬೇಡ, ಶಾಲಾ ಕಾಲೇಜುಗಳು ಬೇಕು ; ಮದರಸಾಗಳನ್ನು ಮುಚ್ಚುವುದಾಗಿ ಪ್ರತಿಜ್ಞೆ ಮಾಡಿದ ಅಸ್ಸಾಂ ಸಿಎಂ ಹಿಮಂತ ಶರ್ಮಾ

Belagavi :  ನಾನು 600 ಮದರಸಾಗಳನ್ನು ಮುಚ್ಚಿದ್ದೇನೆ.  ನಮಗೆ ಮದರಸಾಗಳು ಬೇಡವಾದ ಕಾರಣ ಎಲ್ಲಾ ಮದರಸಾಗಳನ್ನು ಮುಚ್ಚಲು ನಾನು ಉದ್ದೇಶಿಸಿದ್ದೇನೆ. ನಮಗೆ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಬೇಕು ಎಂದು ಅಸ್ಸಾಂ (Assam CM closes Madrassas) ಸಿಎಂ ಹಿಮಂತ ಬಿಸ್ವಾ(Himanta Biswa)  ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ  ಮಾತನಾಡಿದ ಅವರು,  ನಮಗೆ ಮದರಸಾಗಳು(Madrassa) ಬೇಡ.

ನಮಗೆ ಬೇಕಿರುವ ಉತ್ತಮ ಶಿಕ್ಷಣ ನೀಡುವ ಶಾಲಾ-ಕಾಲೇಜುಗಳು. ಹೀಗಾಗಿ ಅಸ್ಸಾಂನಲ್ಲಿರುವ ಎಲ್ಲಾ ಮದರಸಾಗಳನ್ನು ಮುಚ್ಚಲು ನಮ್ಮ ಸರ್ಕಾರ ಉದ್ದೇಶಿಸಿದೆ ಎಂದು  ಹೇಳಿದ್ದಾರೆ.

ಇನ್ನು 2020ರಲ್ಲಿ ಅಸ್ಸಾಂನಲ್ಲಿ ಹೊಸ ಕಾನೂನು ರೂಪಿಸಲಾಗಿದ್ದು, ಅದರ ಪ್ರಕಾರ, ಎಲ್ಲಾ ಸರ್ಕಾರಿ ಮದ್ರಸಾಗಳನ್ನು “ಸಾಮಾನ್ಯ ಶಿಕ್ಷಣ” ನೀಡುವ “ನಿಯಮಿತ ಶಾಲೆಗಳಾಗಿ” ಪರಿವರ್ತಿಸಲಾಯಿತು.

ಜನವರಿ 2023 ರ ಹೊತ್ತಿಗೆ, ರಾಜ್ಯದಲ್ಲಿ 3,000 ನೋಂದಾಯಿತ ಮತ್ತು ನೋಂದಾಯಿಸದ ಮದರಸಾಗಳಿವೆ. ಅವುಗಳನ್ನು  ಸಾಮಾನ್ಯ ಶಿಕ್ಷಣ ನೀಡುವ ಕೇಂದ್ರಗಳಾಗಿ ಪರಿವರ್ತಿಸುವ ಗುರಿಯನ್ನು ಅಸ್ಸಾಂ ಸರ್ಕಾರ ಹೊಂದಿದೆ.

  ಇದೇ ವೇಳೆ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ದ ಕಿಡಿಕಾರಿದ ಅವರು, ಬಾಂಗ್ಲಾದೇಶದ ಜನರು ಅಸ್ಸಾಂಗೆ ಬಂದು ನಮ್ಮ ನಾಗರಿಕತೆ ಮತ್ತು ಸಂಸ್ಕೃತಿಗೆ ಬೆದರಿಕೆಯನ್ನು (Assam CM closes Madrassas) ಸೃಷ್ಟಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಕಾಂಗ್ರೆಸ್‌ (Congress) ಪಕ್ಷವನ್ನು ‘ಹೊಸ ಮೊಘಲರು’ ಎಂದು ಟೀಕಿಸಿದ ಅವರು, ಕಾಂಗ್ರೆಸ್‌ ಮೊಘಲ್ ಪರವಾದ ನಿರೂಪಣೆಯೊಂದಿಗೆ ಭಾರತದ ಇತಿಹಾಸವನ್ನು ತಿರುಚಿದೆ. ಭಾರತದ ಇತಿಹಾಸವು ಬಾಬರ್,

ಔರಂಗಜೇಬ್ ಮತ್ತು ಷಹಜಹಾನ್ ಅವರ ಬಗ್ಗೆ ಎಂದು ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ತೋರಿಸಿದರು.

ಭಾರತದ ಇತಿಹಾಸವು ಅವರ ಬಗ್ಗೆ ಅಲ್ಲ. ಛತ್ರಪತಿ ಶಿವಾಜಿ ಮಹಾರಾಜ್(Chatrapati Shivaji Maharaj), ಗುರು ಗೋಬಿಂದ್ ಸಿಂಗ್,

ಸ್ವಾಮಿ ವಿವೇಕಾನಂದರ (Swamy Vivekananda) ಬಗ್ಗೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಶರ್ಮಾ ಹೇಳಿದರು.

ಕಾಂಗ್ರೆಸ್ ಪಕ್ಷವನ್ನು ಮೊಘಲರಿಗೆ ಹೋಲಿಸಿದ ಅವರು, ವಿರೋಧ ಪಕ್ಷವು ದೇಶವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಒಂದು ಕಾಲದಲ್ಲಿ, ದೆಹಲಿಯ ಆಡಳಿತಗಾರರು ದೇವಾಲಯಗಳನ್ನು ಕೆಡವುವ ಬಗ್ಗೆ ಮಾತನಾಡುತ್ತಿದ್ದರು.

ಆದರೆ ಇಂದು ಪ್ರಧಾನಿ ಮೋದಿಯವರ ಆಡಳಿತದಲ್ಲಿ ನಾನು ದೇವಾಲಯಗಳನ್ನು ನಿರ್ಮಿಸುವ ಬಗ್ಗೆ ಮಾತನಾಡುತ್ತಿದ್ದೇನೆ.

ಇದು ನವ ಭಾರತ. ಈ ನವ ಭಾರತವನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಇಂದು ಹೊಸ ಮೊಘಲರನ್ನು ಪ್ರತಿನಿಧಿಸುತ್ತಿದೆ. 

ಭಾರತದಲ್ಲಿ ಅನೇಕ ಜನರು ತಾವು ಮುಸ್ಲಿಂ (Muslim) ಮತ್ತು ಕ್ರಿಶ್ಚಿಯನ್ (Chirstian) ಎಂದು ಹೆಮ್ಮೆಯಿಂದ ಹೇಳುತ್ತಾರೆ.

ನನಗೆ ಅದರಲ್ಲಿ ಯಾವುದೇ ತೊಂದರೆ ಇಲ್ಲ.  ಆದರೆ ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳುವ ವ್ಯಕ್ತಿ ನಮಗೆ ಬೇಕು. ಭಾರತಕ್ಕೆ ಇಂದು ಅಂತಹ ವ್ಯಕ್ತಿಯ ಅಗತ್ಯವಿದೆ ಎಂದು  ಶರ್ಮಾ ಹೇಳಿದರು.

Exit mobile version