ಶಿವನ ವೇಷ ಧರಿಸಿ ಪ್ರತಿಭಟನೆ ಮಾಡಿದ ಅಸ್ಸಾಂ ವ್ಯಕ್ತಿಯ ಬಂಧನ ; ಜಾಮೀನಿನ ಮೇಲೆ ಬಿಡುಗಡೆ

Assam

ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರದ ‘ಧೂಮಪಾನ ಕಾಳಿ’ ಪೋಸ್ಟರ್‌ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಅಸ್ಸಾಂನ(Assam) ನಾಗಾಂವ್‌ನಲ್ಲಿ(Nagao) ಪುರುಷ ಮತ್ತು ಮಹಿಳೆಯೊಬ್ಬರು ಶಿವ ಮತ್ತು ಪಾರ್ವತಿ ದೇವಿಯ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದರ ಬಗ್ಗೆ ತೀವ್ರ ವಿವಾದ ಭುಗಿಲೆದ್ದಿದೆ.

ಈ ಘಟನೆಯು ಹಿಂದೂ ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ನಾಗಾವ್ ಜಿಲ್ಲಾ ಘಟಕಗಳಿಂದ ತೀವ್ರ ಖಂಡನೆಗೆ ಕಾರಣವಾಯಿತು.

ಈ ಕುರಿತು ಪೊಲೀಸರು ಕೂಡಲೇ ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆದ್ರೆ, ಕೆಲವೇ ಗಂಟಗಳಲ್ಲಿ ಜಾಮೀನು ಸಿಕ್ಕಿದೆ.

ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಎಸ್‌ಪಿ ನಾಗಾಂವ್, ಲೀನಾ ಡೋಲಿ ಹೇಳಿದ್ದಾರೆಂದು ಎಎನ್‌ಐ ವರದಿ ಮಾಡಿದೆ.

ಶನಿವಾರ ಸಂಜೆ ಪುರುಷ ಮತ್ತು ಮಹಿಳೆ ಇಬ್ಬರು, ಶಿವ ಮತ್ತು ಪಾರ್ವತಿಯ ವೇಷ ಧರಿಸಿ ರಸ್ತೆಗಿಳಿದು ಇಂಧನ, ಆಹಾರ ಪದಾರ್ಥಗಳು ಮತ್ತು ಇತರ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಈ ರೀತಿ ಪ್ರತಿಭಟಿಸಲು ಮುಂದಾಗಿದ್ದಾರೆ.

https://vijayatimes.com/rss-mohan-bhagwat-visit-to-bengaluru/

ಬೈಕ್‌ನಲ್ಲಿ ನಾಗಾವ್‌ನ ಕಾಲೇಜು ಚೌಕ್‌ಗೆ ಆಗಮಿಸಿದ ಇಬ್ಬರೂ, ಬೈಕ್ ನಲ್ಲಿ ಇಂಧನ ಖಾಲಿಯಾಗುತ್ತಿರುವಂತೆಬ ನಾಟಕವಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ನಟ, ಶಿವನ ವೇಷ ಧರಿಸಿ, ಸರ್ಕಾರ ಕೇವಲ ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ ಮತ್ತು ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದರು.

ನಂತರ ಕುತೂಹಲದಿಂದ ನೋಡುಗರು ಬೀದಿಗಿಳಿದು, ಏರುತ್ತಿರುವ ಹಣದುಬ್ಬರವನ್ನು ಪ್ರತಿಭಟಿಸುವಂತೆ ಒತ್ತಾಯಿಸಿದರು. ಇದಾದ ಬಳಿಕ ಬಡಾ ಬಜಾರ್ ಪ್ರದೇಶಕ್ಕೆ ಆಗಮಿಸಿದ ಜೋಡಿ, ಇದೇ ರೀತಿ ಬೀದಿ ನಾಟಕ ಪ್ರದರ್ಶಿಸಿದರು. ಈ ಸಾಹಸವು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಗಮನಕ್ಕೆ ಬಂದ ಪರಿಣಾಮ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಇಬ್ಬರು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರಿದರು. ನಂತರ ಜೋಡಿಯಾದ ಬಿರಿಂಚಿ ಬೋರಾ ಮತ್ತು ಕರಿಷ್ಮಾ ವಿರುದ್ಧ ನಾಗೋನ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ,

ಇಬ್ಬರನ್ನು ಬಂಧಿಸಲು ಸೂಚಿಸಿದರು. ಅದರ ಅನ್ವಯ ಬೋರಾನನ್ನು ಬಂಧಿಸಲಾಗಿತ್ತು! ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
Exit mobile version