ಪೊಲೀಸ್ ಠಾಣೆಗೆ ಬೆಂಕಿಯಿಟ್ಟ 23 ಮಂದಿಯ ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸ!

ಅಸ್ಸಾಂನ(Assam) ನಾಗಾಂವ್(Nagaov) ಜಿಲ್ಲೆಯ ಅಧಿಕಾರಿಗಳು ಮೇ 22 ರಂದು ಭಾನುವಾರ ಬಟದ್ರಾವ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ 23 ವ್ಯಕ್ತಿಗಳ ಮನೆಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಿದ್ದಾರೆ.

ಸ್ಥಳೀಯ ನಿವಾಸಿಯೊಬ್ಬರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಆರೋಪದ ಹಿನ್ನೆಲೆಯಲ್ಲಿ ಬಟದ್ರವ ಪೊಲೀಸ್ ಠಾಣೆಯ ಒಂದು ಭಾಗಕ್ಕೆ ಜನಸಮೂಹ ಬೆಂಕಿ ಹಚ್ಚಿದ ನಂತರ, ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಸಾಲೊನಿಬಾರಿ ನಿವಾಸಿ ಸಫೀಕುಲ್ ಇಸ್ಲಾಂ ಎಂಬ ವ್ಯಕ್ತಿ, ಶುಕ್ರವಾರ ರಾತ್ರಿ ವ್ಯಾಪಾರ ಪ್ರವಾಸಕ್ಕಾಗಿ ಶಿವಸಾಗರ ಜಿಲ್ಲೆಗೆ ತೆರಳುತ್ತಿದ್ದಾಗ ಬಟದ್ರಬಾ ಪೊಲೀಸರು ಆತನನ್ನು ತಡೆದು 10,000 ರೂ ದಂಡ ಮತ್ತು ಬಾತುಕೋಳಿ ನೀಡುವಂತೆ ಒತ್ತಾಯಿಸಿದ್ದಾರೆ.

ಸಫೀಕುಲ್ ಪೊಲೀಸರ ಬೇಡಿಕೆಗಳನ್ನು ಈಡೇರಿಸಲು ವಿಫಲವಾದಾಗ, ಪೊಲೀಸರು ಅವನನ್ನು ಬಟದ್ರಬಾ ಪೊಲೀಸ್ ಠಾಣೆಗೆ ಕರೆದೊಯ್ದು ಹಣ ಮತ್ತು ಬಾತುಕೋಳಿಯನ್ನು ಶೀಘ್ರ ವ್ಯವಸ್ಥೆ ಮಾಡಲು ಒತ್ತಾಯ ಮಾಡಿದ್ದಾರೆ. ಈ ಒತ್ತಡಕ್ಕೆ ಒಳಗಾದ ಸಫೀಕುಲ್ ತನ್ನ ಹೆಂಡತಿಗೆ ಕರೆ ಮಾಡಿ ಹಣ ತರಲು ಹೇಳಿದ್ದಾನೆ. ಸಫೀಕುಲ್ ಅವರ ಪತ್ನಿ ಹಣ ಹೊಂದಿಸಲು ವಿಫಲವಾದ ಕಾರಣ ಬಾತುಕೋಳಿಯೊಂದಿಗೆ ಮಾತ್ರ ಠಾಣೆಗೆ ಬಂದಿದ್ದಾರೆ. ನಂತರ ಪೊಲೀಸರು ಸಫೀಕುಲ್ ಅನ್ನು ಆತನ ಹೆಂಡತಿಯ ಮುಂದೆ ಥಳಿಸಲು ಪ್ರಾರಂಭಿಸಿದ್ದಾರೆ.

ಈ ದೃಶ್ಯವನ್ನು ನೋಡಲಾಗದೇ ಆಕೆ ಹಣವನ್ನು ವ್ಯವಸ್ಥೆ ಮಾಡಲು ಹಿಂದಿರುಗಿದ್ದಾಳೆ. ಆದ್ರೆ, ಹಣದೊಂದಿಗೆ ಹಿಂದಿರುಗಿದಾಗ, ಆಕೆಯ ಪತಿ ಠಾಣೆಯಲ್ಲಿ ಕಾಣಿಸಿಲ್ಲ. ಇದನ್ನು ಪ್ರಶ್ನಿಸಿದರೆ, ನಾಗಾನ್ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇತರ ಕುಟುಂಬ ಸದಸ್ಯರೊಂದಿಗೆ ಆಸ್ಪತ್ರೆಗೆ ತಲುಪಿದಾಗ, ಸಫೀಕುಲ್‌ನ ದೇಹವು ಶವಾಗಾರದಲ್ಲಿ ಇತ್ತು. ಸಫೀಕುಲ್ ಅವರ ಕುಟುಂಬ ಸದಸ್ಯರು ನೂರಾರು ಗ್ರಾಮಸ್ಥರೊಂದಿಗೆ ಬಟದ್ರಬಾ ಪೊಲೀಸ್ ಠಾಣೆಗೆ ಶವವನ್ನು ತಂದು ಪ್ರತಿಭಟನೆ ನಡೆಸಿದ್ದಾರೆ. ಸುಫೀಕುಲ್ ಪರ ಪ್ರತಿಭಟನೆ ಮಾಡಿದ ಗುಂಪು ಮತ್ತು ಪೊಲೀಸರ ನಡುವಿನ ಮಾತಿನ ಚಕಮಕಿ ನಡೆದಿದೆ.

ಗುಂಪು ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಮೂವರು ದುಷ್ಕರ್ಮಿಗಳನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಎಸ್ಪಿ ಲೀನಾ ಡೋಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವುದಾಗಿ ಎಸ್ಪಿ ಭರವಸೆ ನೀಡಿದರು ಮತ್ತು ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು.

ಭಾನುವಾರ, ಬುಲ್ಡೋಜರ್‌ಗಳು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಆರೋಪಿಗಳ ಮನೆಗಳನ್ನು ಕೆಡವಿದ್ದಾವೆ. ಪ್ರಕರಣದಲ್ಲಿ 20 ಮಂದಿಯನ್ನು ಬಂಧಿಸಲಾಗಿದ್ದು, ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಡಿಐಜಿ ಸತ್ಯರಾಜ್ ಹಜಾರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version