ಚಿಕ್ಕಮಗಳೂರು, ಕಾರ್ಕಳ ಪುತ್ತೂರು , ಬೆಂಗಳೂರು ದಕ್ಷಿಣದ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶದ ತಕ್ಷಣದ ಅಪ್​ಡೇಟ್ ಇಲ್ಲಿದೆ

Bengaluru : 2023 ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka assembly election) ಮತ ಎಣಿಕೆಯು ಅತ್ಯಂತ ಭರದಿಂದ ನಡೆಯುತ್ತಿದೆ.ರಾಜ್ಯದ ಪ್ರತಿಯೊಂದು ಕ್ಷೇತ್ರದ ಫಲಿತಾಂಶವೂ ಅತ್ಯಂತ ಮಹತ್ವದ್ದೆನಿಸಿದೆ. ಅತ್ಯಂತ ಪ್ರಮುಖವಾದ ಕ್ಷೇತ್ರಗಳ ಕುತೂಹಲಕರವಾದ ಫಲಿತಾಂಶದ ಮಾಹಿತಿ ಇಲ್ಲಿ ನಿಮಗೆ ಸಿಗಲಿದೆ. ನಿಮ್ಮ ಜಿಲ್ಲೆಯ ಹಾಗೂ ನಿಮ್ಮ ಕ್ಷೇತ್ರದ ಕ್ಷಣ ಕ್ಷಣದ ಮಾಹಿತಿಯನ್ನು ಸಹ ನೀವು ಇಲ್ಲಿ ತಿಳಿದುಕೊಳ್ಳಬಹುದು.

ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ಅಬ್ಬರ :

Chikmagalur : ಕಾಫಿನಾಡಿನಲ್ಲಿ ಕಾಂಗ್ರೆಸ್ (Congress) ಮುನ್ನಡೆ ಪಡೆಯುತ್ತಿದೆ.ಚಿಕ್ಕಮಗಳೂರಿನಲ್ಲಿ ಹೆಚ್.ಡಿ. ತಮ್ಮಯ್ಯ (H.D. Tammaiya) , ಸಿಟಿ ರವಿ (CT Ravi) ವಿರುದ್ಧ ಮುನ್ನಡೆ ಮುನ್ನಡೆ ಸಾಧಿಸಿದ್ದಾರೆ.ಶೃಂಗೇರಿ ಕ್ಷೇತ್ರದಲ್ಲಿ ಟಿ.ಡಿ ರಾಜೇಗೌಡ ಸುಮಾರು 4000 ಮತಗಳ ಮುನ್ನಡೆ ದೊರೆತಿದೆ.ತರೀಕೆರೆ ಕ್ಷೇತ್ರದಲ್ಲಿ ಜಿ.ಹೆಚ್.ಶ್ರೀನಿವಾಸ್ ಗೆ 1255 ಮತಗಳ ಮುನ್ನಡೆ ದೊರಕಿದೆ. ಮೂಡಿಗೆರೆ ಕ್ಷೇತ್ರದಲ್ಲಿ 97 ಮತಗಳ ಅಂತರದಿಂದ ನಯನ ಮೋಟಮ್ಮ ಮುನ್ನಡೆ ಸಾಧಿಸಿದ್ದಾರೆ.

ಕಾರ್ಕಳ ಕ್ಷೇತ್ರದಲ್ಲಿ ಸುನೀಲ್ ಕುಮಾರ್​ಗೆ ಎಷ್ಟು ಮತ ಸಿಕ್ತು?

ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ 510 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಉದಯ್ ಕುಮಾರ್ ಶೆಟ್ಟಿ ಪಡೆದ ಮತ 9612 ಮತ್ತು ಬಿಜೆಪಿಯ ಸುನಿಲ್ ಕುಮಾರ್ ಪಡೆದ ಮತ 10122. ಆದರೆ.

ಇದನ್ನೂ ಓದಿ : https://vijayatimes.com/election-result-update-2023/

ಪುತ್ತೂರಲ್ಲಿ ಏನಾಗ್ತಿದೆ?

ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada District) ಪುತ್ತೂರು ವಿಧಾನಸಭಾ ಕ್ಷೇತ್ರ (Puttur Assembly Constituency) ಇಡೀ ರಾಜ್ಯದಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. ಇಲ್ಲಿಯ ಪಕ್ಷೇತರ ಅಭ್ಯರ್ಥಿಯಾದ ಪುತ್ತಿಲರನ್ನು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ 1500 ಮತಗಳ ಮೂಲಕ ಮುನ್ನಡೆ ಸಾಧಿಸಿದ್ದಾರೆ.

ಬೆಂಗಳೂರು ದಕ್ಷಿಣದ ವಿಧಾನಸಭಾ ಕ್ಷೇತ್ರಗಳ ವಿವರ :

ವಿಜಯನಗರ – ಬಿಜೆಪಿ – ಮುನ್ನಡೆ
ಗೋವಿಂದರಾಜನಗರ ಕಾಂಗ್ರೆಸ್ – ಮುನ್ನಡೆ
ಬೊಮ್ಮನಹಳ್ಳಿ – ಬಿಜೆಪಿ ಮುನ್ನಡೆ
ಬಸವನಗುಡಿ – ಬಿಜೆಪಿ ಮುನ್ನಡೆ
ಬಿಟಿಎಂ – ಕಾಂಗ್ರೆಸ್ – ಮುನ್ನಡೆ
ಜಯನಗರ – ಕಾಂಗ್ರೆಸ್ ಮುನ್ನಡೆ
ಪದ್ಮನಾಭನಗರ – ಬಿಜೆಪಿ ಮುನ್ನಡೆ

ಇದನ್ನೂ ಓದಿ : https://vijayatimes.com/congress-leading-by-110-seats/

ಕಾಂಗ್ರೆಸ್ (Congress) : 16371
ಬಿಜೆಪಿ (BJP) : 3687
ಜೆಡಿಎಸ್ (JDS) : 3080 ಮತಗಳನ್ನು ಪಡೆದಿವೆ.

Exit mobile version