`ಇದು’ ರಾಷ್ಟ್ರಧ್ವಜಕ್ಕೆ ಕೊಡುವ ಗೌರವವಲ್ಲ ಎಂದ ಸ್ಪೀಕರ್!

speaker

ಮೂರನೇ ದಿನದ ವಿಧಾನಸಭೆಯಲ್ಲಿ ಹಿಜಾಬ್ ವಿಚಾರ ಕುರಿತು ಚರ್ಚಿಸುವ ಸಮಯದಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಸರ್ಕಾರ ನಡುವೆ ತೀವ್ರ ಜಟಾಪಟಿ ವಾದದ ನಡುವೆ ಸಚಿವ ಈಶ್ವರಪ್ಪರವರು ಶಿವಮೊಗ್ಗದಲ್ಲಿ ಕೆಂಪುಕೋಟೆಯಲ್ಲಿ ಭಗವಾ ಧ್ವಜ ಹಾರಿಸ್ತೀವಿ ಎಂದು ಹೇಳಿದ ಹೇಳಿಕೆ ವಿರುದ್ದ ಕಾಂಗ್ರೆಸ್ ನಾಯಕರು ಸದನದಲ್ಲಿ ರಾಷ್ಟ್ರಧ್ವಜ ಪ್ರದರ್ಶನ ಮಾಡಿ ಪ್ರತಿಭಟಿಸಿದ್ದಾರೆ. ಇತ್ತ ಕಡೆಯಿಂದ ಬಿಜೆಪಿ ನಾಯಕರು ರಾಷ್ಟ್ರಧ್ವಜವನ್ನು ನಿಮ್ಮ ರಾಜಕೀಯಕ್ಕಾಗಿ ಬಳಸುವುದು ಸರಿಯಲ್ಲ ಎಂದು ತಿರಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಭಾಧ್ಯಕ್ಷರಾದ ವಿಶ್ವೇಶ್ವರ ಕಾಗೇರಿಯವರು, ರಾಷ್ಟ್ರಧ್ವಜವನ್ನ ಹೇಗೆ ಬೇಕು ಹಾಗೆ ಪ್ರತಿಭಟನೆಗೆ ಬಳಸುವುದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ ಎಂದು ಸದಸ್ಯರಿಗೆ ಹೇಳಿದ್ದಾರೆ. ತರನಂತರ ಅಡಿಕೆ ಕೊಯ್ಯುವ ಯಂತ್ರದ ಸಬ್ಸಿಡಿ ಕುರಿತು ವಿಧಾನ ಸಭೆಯಲ್ಲಿ ಚರ್ಚೆ ಮಾಡಲಾಯಿತು. ರಾಜ್ಯಪಾಲರಿಗೆ ಧನ್ಯವಾದಗಳನ್ನು ಸಲ್ಲಿಸುವ ಸಮಯದಲ್ಲಿ ಹಲವು ಜಟಾಪಟಿ ವಾದಗಳಾದ ನಡುವೆ, ಶಾಸಕ TD ರಾಜೇಗೌಡ ರವರ ತೋಟಗಾರಿಕ ಕ್ಷೇತ್ರದ ಅನುದಾನಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿರುವಾಗ ತೋಟಗಾರಿಕ ಸಚಿವರಾದ ಮುನಿರತ್ನ ಅವರಿಗೆ ವಿಧಾನ ಸಭೆ ಸ್ಪೀಕರ್ ಮಲೆನಾಡಿನ ಭಾಗದವರಾದ ನಾವು ಅತಿ ಹೆಚ್ಚು ಅಡಿಕೆ ಬೆಳೆಗಾರರಿರುವ ಪ್ರದೇಶ ನಮ್ಮದು.

ಅಡಿಕೆ ಕೊಯ್ಯಲಿಗೆ ಒಂದು ಲಕ್ಷ, ಎಂಬತ್ತು ಸಾವಿರ ಬೆಲೆಬಾಳುತ್ತೆ ಹಾಗೂ ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಎದುರಾಗುತ್ತಿದೆ ಹಾಗೂ ಪ್ರಾಣಾಪಾಯಗಳು ಬರುತ್ತಿದೆ. ಗೃಹ ಸಚಿವರಾದ ಅರಗ ಜ್ಞಾನೇಂದ್ರರವರು ನಾವು ಕೂಡ ಅಡಿಕೆ ಬೆಳೆಗಾರರ ಪ್ರದೇಶದವರಾಗಿದ್ದು, ಅಡಿಕೆ ಕೊಯ್ಯುವ ದೋಟಿ ಯಂತ್ರವು ಅತಿ ಸುಲಭ ನಿರ್ವಹಣೆ ಆಗಿದ್ದು ಇದನ್ನು ಸಬ್ಸಿಡಿ ಪಟ್ಟಿಗೆ ಸೇರಿಸಬೇಕಾಗಿ ವಿನಂತಿಸುತ್ತೇನೆ ಎಂದು ಹೇಳಿದರು. ಈ ಕುರಿತು ಉತ್ತರಿಸಿದ ತೋಟಗಾರಿಕ ಸಚಿವ ಮುನಿರತ್ನರವರು ಈ ಕುರಿತು ಚರ್ಚಿಸಿ ಅನುದಾನಗಳ ಪಟ್ಟಿಗೆ ಸೇರಿಸುವ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

Exit mobile version