ಚಂದ್ರನನ್ನೂ ಮೀರಿಸುವಷ್ಟು ಕುಳಿಗಳನ್ನು ಹೊಂದಿರುವ ಅತ್ಯಂತ ವಿಶಿಷ್ಟ ಕ್ಷುದ್ರಗ್ರಹ ‘ಪಲ್ಲಾಸ್’

asteroid

ಕ್ಷುದ್ರಗ್ರಹಗಳ(Ceres Asteroid) ಬಗ್ಗೆ ನೀವು ಕೇಳಿಯೇ ಇರುತ್ತೀರಿ, ಆಗಾಗ ಭೂಮಿಯ(Earth) ಸಮೀಪಕ್ಕೆ ಬರುವ ಕ್ಷುದ್ರ ಗ್ರಹಗಳಿಂದ ಭೂಮಿಗೆ ಏನಾದರೂ ತೊಂದರೆಯಾಗುತ್ತದೆನೋ ಎನ್ನುವ ಆತಂಕ ಖಗೋಳ ವಿಜ್ಞಾನಿಗಳನ್ನು(Scientists) ಕಾಡುತ್ತಲೇ ಇರುತ್ತದೆ. ಕ್ಷುದ್ರ ಗ್ರಹಗಳೆಂದರೆ ಸೌರವ್ಯೂಹದಲ್ಲಿರುವ ಬಹಳ ಸಣ್ಣ ಗ್ರಹಗಳು, ಅವುಗಳನ್ನು ಕುಬ್ಜಗ್ರಹಗಳೆಂದೂ ಕೂಡ ಕರೆಯುತ್ತಾರೆ. ಕೆಲವು ಖಗೋಳ ವಿಜ್ಞಾನಿಗಳ ಪ್ರಕಾರ, ಆಸ್ಟೆರೋಯ್ಡ್ ಗಳ ಹುಟ್ಟು ಮಿಲಿಯಾಂತರ ವರ್ಷಗಳ ಹಿಂದೆ ಚೂರುಚೂರಾದ ಗ್ರಹಗಳಿಂದ ಆಗಿದೆ.


ವಿಶಿಷ್ಟ ಕ್ಷುದ್ರಗ್ರಹಗಳಲ್ಲಿ ಒಂದಾದ ಪಲ್ಲಾಸ್ ಹಲವಾರು ವಿಶೇಷತೆಗಳನ್ನು ಹೊಂದಿದೆ. 512 ಕಿಲೋ ಮೀಟರ್ ಸುತ್ತಳತೆ ಹೊಂದಿರುವ ಈ ಕ್ಷುದ್ರಗ್ರಹ, ಮಂಗಳ ಹಾಗೂ ಗುರು ಗ್ರಹದ ನಡುವೆ ಸುತ್ತುತ್ತಿದೆ. ಮಂಗಳ ಹಾಗೂ ಗುರು ಗ್ರಹದ ನಡುವೆ ಕ್ಷುದ್ರಗ್ರಹಗಳ ಅತಿ ದೊಡ್ಡ ಸಮೂಹವೇ ಇದೆ. ಈ ಪೈಕಿ ಮೂರನೇ ಅತಿ ದೊಡ್ಡ ಕ್ಷುದ್ರ ಗ್ರಹ ಅನ್ನೋ ಹೆಗ್ಗಳಿಕೆಗೆ ಪಲ್ಲಾಸ್‌ ಪಾತ್ರವಾಗಿದೆ. 1802 ರಲ್ಲಿ ಈ ಕ್ಷುದ್ರಗ್ರಹವನ್ನು ಕಂಡು ಹಿಡಿದ ಜರ್ಮನಿಯ ಖಗೋಳ ಶಾಸ್ತ್ರಜ್ಞ, ಇದನ್ನು ಭೂಮಿಯ ರೀತಿ ಒಂದು ಗ್ರಹ ಎಂತಲೇ ಭಾವಿಸಿಬಿಟ್ಟಿದ್ದ.


ಪಲ್ಲಾಸ್‌ ಕ್ಷುದ್ರಗ್ರಹ, ಎಲ್ಲಾ ಕ್ಷುದ್ರಗ್ರಹಗಳಂತೆಯೇ ವಿಚಿತ್ರ ರೀತಿಯ ಕಕ್ಷೆಯನ್ನು ಹೊಂದಿದೆ. ಇದು ಒಮ್ಮೊಮ್ಮೆ ಮಂಗಳ ಹಾಗೂ ಗುರು ಗ್ರಹದ ನಡುವಿನ ಕ್ಷುದ್ರ ಗ್ರಹ ಪಟ್ಟಿಯಿಂದ ಆಚೆಗೆ ಬಂದು ಬಿಡುತ್ತಂತೆ. ಕೆಲವೊಮ್ಮೆ ಭೂಮಿಯ ಕಕ್ಷೆಯ ತೀರಾ ಸಮೀಪಕ್ಕೆ ಬಂದ ಉದಾಹರಣೆಗಳಿವೆ. ಇತ್ತೀಚಿಗೆ ಪಲ್ಲಾಸ್ ಕ್ಷುದ್ರಗ್ರಹದ ಅತ್ಯಂತ ಸ್ಪಷ್ಟ ಚಿತ್ರವೊಂದು ವಿಜ್ಞಾನಿಗಳಿಗೆ ಲಭ್ಯವಾಗಿದೆ. ಚಂದ್ರನನ್ನೂ ಮೀರಿಸುವಷ್ಟು ಕುಳಿಗಳು ಪಲ್ಲಾಸ್ ಕ್ಷುದ್ರಗ್ರಹದ ಮೇಲಿವೆ ಎಂದು ತಿಳಿದುಬಂದಿದೆ! ಸದ್ಯ ಸಿಕ್ಕಿರುವ ಫೋಟೋಗಳನ್ನು ನೋಡಿದರೆ, ಪಲ್ಲಾಸ್ ಕ್ಷುದ್ರಗ್ರಹ ಗಾಲ್ಫ್‌ ಆಟದಲ್ಲಿ ಬಳಸುವ ಬಾಲ್‌ನ ರೀತಿ ಹಳ್ಳ-ಕೊಳ್ಳಗಳಿಂದ ಕೂಡಿದೆ.

ಹಾಗೆ ನೋಡಿದ್ರೆ ಕ್ಷುದ್ರಗ್ರಹ ಸಮೂಹದಲ್ಲೇ ಇಷ್ಟೊಂದು ಹಳ್ಳ-ಕೊಳ್ಳಗಳಿಂದ ಕೂಡಿರುವುದು ಪಲ್ಲಾಸ್ ಕ್ಷುದ್ರಗ್ರಹ ಮಾತ್ರ!
ಆಗಾಗ ಸಣ್ಣ-ಪುಟ್ಟ ಕ್ಷುದ್ರ ಗ್ರಹಗಳ ದಾಳಿಗೆ ಸದಾ ತುತ್ತಾಗುತ್ತಲೇ ಇರುತ್ತದೆ ಪಲ್ಲಾಸ್. ಹೀಗಾಗಿ ಈ ಕ್ಷುದ್ರಗ್ರಹದಲ್ಲಿ ಸದಾ ಕಾಲ ಯುದ್ಧದ ಸನ್ನಿವೇಶ ಇದ್ದಂತೆ ಕಂಡು ಬರುತ್ತದೆ. ಈ ತರಹದ ಸಣ್ಣ ಪುಟ್ಟ ಕಲ್ಲು-ಬಂಡೆಗಳ ದಾಳಿಯಿಂದಾಗಿ ಪಲ್ಲಾಸ್ ತುಂಬಾ ಹಳ್ಳ-ಕೊಳ್ಳಗಳಿಂದ ತುಂಬಿವೆ ಎನ್ನಲಾಗಿದೆ.

ಮಾಹಿತಿ ಸಂಗ್ರಹ : ಪವಿತ್ರ

Exit mobile version