Uttar Pradesh: ಕೋಟ್ಯಂತರ ಹಿಂದುಗಳು ಅತ್ಯಂತ ಕಾತುರದಿಂದ ನಿರೀಕ್ಷಿಸುತ್ತಿರುವ ಅಯೋಧ್ಯೆ (Ayodhya Ram Mandir Inauguration) ಶ್ರೀರಾಮನ ಮಂದಿರದ (Sri Ram Mandir)
ಉದ್ಘಾಟನೆ ಸಮಯ ಇನ್ನೇನು ಹತ್ತಿರವಾಗುತ್ತಿರುವಂತೆಯೇ ಸಮರಸಜ್ಜಿನಂತೆ ನಿರ್ಮಾಣ ಕಾರ್ಯ ಪೂರ್ಣವೇಗದಿಂದ ಸಾಗಿದೆ. ಭವ್ಯ ದೇಗುಲದ ಗರ್ಭಗುಡಿ ಭಕ್ತರ ದರ್ಶನಕ್ಕೆ 2024ರ ಜ.
1 ರಂದು ಮುಕ್ತವಾಗಲಿದೆ. ದೇವಾಲಯಕ್ಕೆ ಅಂತಿಮರೂಪ ಕೊಡುವ ಕಾರ್ಯ (Ayodhya Ram Mandir Inauguration) ಈಗ ನಡೆಯುತ್ತಿದೆ.

ರಾಜಸ್ಥಾನ (Rajasthan), ಕರ್ನಾಟಕ (Karnataka)ಸೇರಿದಂತೆ ಹಲವು ರಾಜ್ಯಗಳಿಂದ ತರಿಸಲಾದ ಗ್ರಾನೈಟ್ (Granite) ಕಲ್ಲುಗಳನ್ನು 2.77 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರ
ನಿರ್ಮಾಣಕ್ಕೆ ಬಳಸಲಾಗುತ್ತಿದೆ. ದೇಶಾದ್ಯಂತ ಹಿಂದುಗಳು ಕೋಟ್ಯಂತರ ರೂ.ಗಳ ದೇಣಿಗೆಯನ್ನು ಎರಡು ವರ್ಷಗಳ ಹಿಂದೆ ಮಂದಿರ ನಿರ್ಮಾಣಕ್ಕೆ ನೀಡಿದ್ದಾರೆ.ಹಲವು ಶತಮಾನಗಳ ಹಿಂದುಗಳ ಕನಸು ಇದೀಗ
ನನಸಾಗಲಿದ್ದು, ಅಯೋಧ್ಯೆಯ ರಾಮಮಂದಿರ ಧಾರ್ಮಿಕ, ಜಾಗತಿಕ ಮತ್ತು ಪ್ರವಾಸಿ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ : ಸಾಲ ಮರುಪಾವತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಬೇಡ, ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಸೂಚನೆ : ನಿರ್ಮಲ ಸೀತಾರಾಮನ್
ಭದ್ರಬುನಾದಿಯ ಮೇಲೆ ನಿರ್ಮಾಣಗೊಂಡಿರುವ ದೇವಾಲಯದ ಗುಲಾಬಿ ಮರಳುಗಲ್ಲಿನಿಂದ ಕೆತ್ತಲಾಗಿರುವ 132 ಬೃಹದಾಕಾರದ ಕಂಬಗಳು ಮೊದಲ ಹಂತದಲ್ಲಿ ಇವೆ. ಪರಮೇಶ್ವರ, ಹನುಮಂತ,
ವಾನರಸೇನೆ ಮುಂತಾದ ದೇವತೆಗಳ ವಿಗ್ರಹಗಳನ್ನು ಈ ಕಂಬಗಳ ಮೇಲೆ ಕೆತ್ತಲಾಗಿದೆ. ಈ ವಿಗ್ರಹಗಳಿಗೆ ಅಂತಿಮರೂಪ ಕೊಡುವ ಕಾರ್ಯ ಭರದಿಂದ ನಡೆಯುತ್ತಿದೆ. ಈ ಕಂಬಗಳು ಗರ್ಭಗುಡಿಯ ಸುತ್ತಲೂ
ನಿರ್ಮಿಸಲಾದ ವೃತ್ತಾಕಾರದ ಮಾರ್ಗದಲ್ಲಿ ತಲೆಎತ್ತಿನಿಂತಿವೆ. ಈ ಮಾರ್ಗದ ಮೂಲಕ ಭಕ್ತರು ಶ್ರೀರಾಮನ ಪ್ರದಕ್ಷಿಣೆ ಮಾಡುತ್ತಾರೆ.

ಇನ್ನು 160 ಬೃಹತ್ ಕಂಬಗಳನ್ನು ಗರ್ಭಗುಡಿ ಪ್ರಾಂಗಣಕ್ಕೆ ಅಳವಡಿಸಲಾಗುತ್ತಿದೆ. ಮಂದಿರದ ಪ್ರಧಾನಕೇಂದ್ರ ಗರ್ಭಗುಡಿ 20 ಅಡಿ ವಿಸ್ತೀರ್ಣವಾಗಿದೆ. ಮೂರು ರಾಮನ ಮೂರ್ತಿಗಳನ್ನು ವಿಶೇಷವಾಗಿ ತರಿಸಲಾದ
ಕಲ್ಲಿನಿಂದ ಕೆತ್ತಲಾಗುತ್ತಿದೆ. ಈ ಪೈಕಿ ಒಂದು ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ತಿಳಿಸಿದೆ.
ಇಡೀ ದೇವಾಲಯಕ್ಕೆ ಒಟ್ಟು 12 ದ್ವಾರಗಳಿವೆ.ತೇಗದ ಮರದಿಂದ ಎಲ್ಲವನ್ನೂ ತಯಾರಿಸಲಾಗಿದೆ.ಸಿಂಹದಾರ ಭವ್ಯವಾಗಿ ಮುಖ್ಯದಾರ ನಿರ್ಮಾಣಗೊಳ್ಳಲಿದೆ. ಭಾರತದ ಸನಾತನ ಪರಂಪರೆಯ ಹೆಗ್ಗುರುತಾಗಿರುವ
ರಾಮಮಂದಿರ ನಿರ್ಮಾಣಕ್ಕೆ ಯಾವುದೇ ಕಬ್ಬಿಣ ಬಳಕೆ ಮಾಡಿಲ್ಲ. ಮುಂದಿನ ಸಾವಿರ ವರ್ಷಗಳವರೆಗೂ ಮಂದಿರಕ್ಕೆ ರಿಪೇರಿಯ ಅಗತ್ಯವೇ ಇರುವುದಿಲ್ಲ ಇದನ್ನು ಆ ಪರಿ ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿದೆ ಎಂದು
ಜನ್ಮಭೂಮಿ ಟ್ರಸ್ಟ್‌ನ (Trust) ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ (Champath Ray) ಹೇಳುತ್ತಾರೆ.ಮಂದಿರ 2024 ರ ಜನವರಿ ಒಂದರಂದು ಉದ್ಘಾಟನೆಗೊಳ್ಳಲಿದೆ ಎಂದು ಕೇಂದ್ರ ಗೃಹಸಚಿವ
ಅಮಿತ್ ಶಾ (Amit Shah) ಈಗಾಗಲೇ ಪ್ರಕಟಿಸಿದ್ದಾರೆ.
ರಶ್ಮಿತಾ ಅನೀಶ್