ಕಿಡ್ನಿಯಲ್ಲಿ ಕಲ್ಲಿದೆಯಾ? ಹಾಗಾದ್ರೆ ಹೆಚ್ಚು ಟೆನ್ಞನ್‌ ಬೇಡ ಬಾಳೆ ದಿಂಡಿನ ಈ ಸರಳ ಮದ್ದು ಬಳಸಿ

Health: “ಬಾಳೋರಿಗೆ ಒಂದೇ ಮಾತು, ಬಾಳೆಗೆ ಒಂದೇ ಗೊನೆ” ಇದು ಅನಾದಿಕಾಲದಿಂದಲೂ ನಮ್ಮ ಪೂರ್ವಜರು ತಮ್ಮ ಕಿರಿಯರಿಗೆ ಬುದ್ಧಿ ಹೇಳುವಾಗ ಬಳಸುವ ಸಾಮಾನ್ಯ ಗಾದೆ ಮಾತು. ಸಾಮಾನ್ಯವಾಗಿ (Banana stem benifits) ಬಾಳೆಯ ಗಿಡವು ಕಲ್ಪವೃಕ್ಷದಂತೆ ಒಂದು ಪರಿಪೂರ್ಣ ಜೀವನ ಬಾಳೆ ಎಲೆಗಳು, ಬಾಳೆ ಹೂವು, ಬಾಳೆಕಾಯಿ,

ಬಾಳೆಹಣ್ಣು, ಕಾಂಡ, ಬಾಳೆ ದಿಂಡು (banana stem) ಹೀಗೆ ಬಾಳೆಯ ಪ್ರತಿಯೊಂದು ಭಾಗವು ಮನುಷ್ಯರಿಗೆ ಹಲವು ರೀತಿಯಲ್ಲಿ ಉಪಯೋಗವಾಗುತ್ತದೆ.

ಬಾಳೆಯ ಮರದಲ್ಲಿ ಒಂದು ಸಲ ಹಣ್ಣು ಬಿಟ್ಟರೆ ಅಲ್ಲಿಗೆ ಅದರ ಆಯಸ್ಸು ಮುಗಿದಂತೆ ಆಗ ಆ ಗಿಡದ ಮೃದುವಾದ ಕಾಂಡವನ್ನು ಕತ್ತರಿಸಿ ತೆಗೆದು ಅದರ ನಟ್ಟ ನಡುವೆ ದೊರೆಯುವ ಕೆನೆ ಹಾಲಿನ ಬಣ್ಣದ ವಸ್ತುವೇ ಬಾಳೆಯ ದಿಂಡು.

ಈಗಲೂ ಎಷ್ಟೋ ಜನರಿಗೆ ಬಾಳೆದಿಂಡು ಕೇವಲ ಅಲಂಕಾರಕ್ಕೆ ಪೂಜೆಗೆ ಚಪ್ಪರಕ್ಕೆ ಮಾತ್ರ ಬಳಸುತ್ತಾರೆ ಎಂದು ತಿಳಿದಿದ್ದಾರೆ.

ಆ ಬಾಳೆದಿಂಡಿನ ಒಳ ತಿರುಳಿನಲ್ಲಿ ಎಷ್ಟು ಒಳ್ಳೆಯ ಆರೋಗ್ಯ (Healthy life) ಪೂರಕ ಅಂಶಗಳಿವೆ ಎಂದು ಗೊತ್ತೇ ಇಲ್ಲಾ.

ಮಲೆನಾಡು ಹಾಗೂ ಕೆಲವು ಹವ್ಯಕರ ಮನೆಗಳಲ್ಲಿ ಮಾತ್ರ ಈ ಬಾಳೆ ದಿಂಡಿನ ಬಳಕೆಯಪದ್ಧತಿ ಹಿಂದಿನ ಕಾಲದಿಂದ ಕಾಣಬಹುದಿತ್ತು.

ಇದನ್ನೂ ಓದಿ : https://vijayatimes.com/cattle-transportation-in-rajasthan/

ಆದರೆ ಇಂದಿನ ಒತ್ತಡದ ಏರುಪೇರಿನ ಜೀವನಗಳ ಮಧ್ಯ ವಿಚಿತ್ರ ಆಹಾರ ಪದ್ಧತಿಗಳಿಂದ ನಮಗರಿವಿಲ್ಲದಂತೆ ಎಷ್ಟೋ ರೋಗ ರುಜಿನಗಳಿಗೆ ಅಹ್ವಾನ ನೀಡುತ್ತಿದ್ದೇವೆ.

ನಮಗರಿವಿಲ್ಲದಂತೆಯೇ ಗೊತ್ತಿಲ್ಲದೆ ಬಾಳೆ ದಿಂಡಿನಂತಹ ಎಷ್ಟೋ ಸತ್ವ ಪದಾರ್ಥಗಳನ್ನು ಬಿಸಾಡುತ್ತಾ ಬಂದಿದ್ದೇವೆ…ಆದರೆ ಕಸದಿಂದ ರಸ ತೆಗೆಯುವ ಕೆಲವು ಬುದ್ಧಿವಂತರಿಂದ, ಪ್ರಾಚೀನ ಆಯುರ್ವೇದ,

ಹಾಗೂ ಹಿರಿಯರು ಮಾಡುತ್ತಿದ್ದ ಸಾಂಸ್ಕೃತಿಕ ಅಡಿಗೆಗಳಿಂದ, ಕೆಲವು ಸಾಮಾಜಿಕ ಜಾಲತಾಣಗಳಿಂದ, ಮಾಧ್ಯಮಗಳ ಕೆಲವು ಅಡುಗೆ ಕಾರ್ಯಕ್ರಮ,

ಆರೋಗ್ಯ, ಆಯುರ್ವೇದದ ಕಾರ್ಯಕ್ರಮಗಳಿಂದ (Ayurvedic programme) ಈ ಬಾಳೆದಿಂಡಿನ ಬಳಕೆ ಹಾಗೂ ಅದರ ಉಪಯೋಗಗಳು ಇತ್ತೀಚೆಗೆ ಹೆಚ್ಚಾಗಿ ಪ್ರಚಲಿತಕ್ಕೆ ಬರುತ್ತಿದೆ…

ಇದನ್ನೂ ಓದಿ : https://vijayatimes.com/h-d-deve-gowda-statement/


ಇಂತಹ ಬಾಳೆದಿಂಡಿನ ಪ್ರಯೋಜನಗಳನ್ನು ಒಂದೊಂದಾಗಿ ತಿಳಿಯೋಣ ಬನ್ನಿ……


ಪ್ರತಿದಿನ ಒಂದು ಲೋಟ ಬಾಳೆದಿಂಡಿನ ರಸದೊಂದಿಗೆ ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ಕಿಡ್ನಿಯಲ್ಲಿರುವ ಕಲ್ಲುಗಳನ್ನು ಕರಗಿಸುವಲ್ಲಿ ಹಾಗೂ ಮೂತ್ರನಾಳದ ಸೋಂಕನ್ನು (Banana stem benifits) ತಡೆಗಟ್ಟುವಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತದೆ.
ಹೊಟ್ಟೆಯುಬ್ಬರ ಅಸಿಡಿಟಿಯನ್ನು ನಿಯಂತ್ರಣಕ್ಕೆ ತರಲು ಸಹಾಯಮಾಡುತ್ತದೆ ಎದೆಯುರಿ,

ಹೊಟ್ಟೆಯಲ್ಲಿ ಒಂದು ರೀತಿಯ ತಳಮಳ,ಹೊಟ್ಟೆಯಲ್ಲಿ ಬೆಂಕಿ ಉರಿಯುತ್ತಿರುವಂತೆ ಭಾಸವಾಗುವುದು, ಇದೆಲ್ಲದಕ್ಕೂ ಬಾಳೆದಿಂಡಿನರಸ ರಾಮಬಾಣ. ಸಕ್ಕರೆ ಕಾಯಿಲೆಯನ್ನು ತಡೆಗಟ್ಟುವಲ್ಲಿ ಬಾಳೆದಿಂಡು ಸಹಕಾರಿ ಏಕೆಂದರೆ ವಿಟಮಿನ್ ಬಿ6 ಕೊರತೆಯ ಪರಿಣಾಮದಿಂದಾಗಿ ಮಧುಮೇಹದಂಥ (diabetes) ಕಾಯಿಲೆಗಳು ದೇಹಕ್ಕೆ ಆವರಿಸುತ್ತದೆ.

ಇದನ್ನೂ ಓದಿ : https://vijayatimes.com/sudeep-entry-into-politics/

ಆದರೆ ಬಾಳೆದಿಂಡಿನಲ್ಲಿ ವಿಟಮಿನ್ ಬಿ 6 ಹೇರಳವಾಗಿರುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ (Hemoglobin) ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಬಾಳೆದಿಂಡಿನ ರಸದಲ್ಲಿ ಫೈಬರ್ ಅಂಶವು ಹೆಚ್ಚಾಗಿರುವುದರಿಂದ ಹಸಿವನ್ನು ತಡೆಯುತ್ತದೆ ಇದರಿಂದ ಹೆಚ್ಚು ತಿನ್ನುವಬಯಕೆಯನ್ನು ತಡೆದಂತಾಗುತ್ತದೆ.

ಫೈಬರ್ ಅಂಶವು (Fiber content) ದೇಹಕ್ಕೆ ಹೆಚ್ಚಾಗಿರುವ ಸಕ್ಕರೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಮೂತ್ರದ ಮೂಲಕ ಹೊರ ಹಾಕುತ್ತದೆ ಹೀಗಾಗಿ ದೇಹದಲ್ಲಿ ತೂಕ ನಿಯಂತ್ರಣಕ್ಕೆ ಬರುತ್ತದೆ. ಬಾಳೆದಿಂಡಿನ ರಸ ಅಥವಾ ಜ್ಯೂಸ್ ಮಾಡುವ ವಿಧಾನ .
ಬೇಕಾಗಿರುವ ಪದಾರ್ಥಗಳು.

ಇದನ್ನೂ ಓದಿ : https://vijayatimes.com/declaration-of-asaduddin-owaisi/


1.ಸಣ್ಣಗೆ ಹೆಚ್ಚಿದ ಒಂದು ಕಪ್ ನಷ್ಟು ಬಾಳೆದಿಂಡಿನ ತಿರುಳುಗಳು.

2.ಜ್ಯೂಸ್ ಮಾಡಲು ಬೇಕಾಗುವಷ್ಟು ನೀರು.

3.ನಿಂಬೆರಸ.

4.ಚಿಟಿಕೆ ಉಪ್ಪು.

5.ಅಗತ್ಯಕ್ಕೆ ಅಥವಾ ನಮ್ಮ ರುಚಿಗೆ ಬೇಕಾಗುವಷ್ಟು ಬೆಲ್ಲ.

ಮಾಡುವ ವಿಧಾನ
ಮೊದಲು ಬಾಳೆ ದಿಂಡಿನ ತಿರುಳನ್ನು ಸುಮಾರು ಒಂದು ಅಥವಾ ಎರಡು ಗಂಟೆಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆ ಹಾಕಬೇಕು.

ಚೆನ್ನಾಗಿ ನೆಂದಿರುವ ತಿರುಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಬೇಕು. ಸೋಸುವ ಜಾಲರಿಯಿಂದ ಚೆನ್ನಾಗಿ ಶೋಧಿಸಿ. ಈಗ ಕಬ್ಬಿನ ಹಾಲಿನ ರಸದಂತೆ ತಿಳಿಹಳದಿ ಬಣ್ಣದ ರಸ ದೊರೆಯುತ್ತದೆ.

ಅದಕ್ಕೆ ಚಿಟಿಕೆ ಉಪ್ಪು ಬೆಲ್ಲ ಸೇರಿಸಿ ಚೆನ್ನಾಗಿ ಕಲಕಿ ನಂತರ ನಿಂಬೆ ರಸವನ್ನು ಬೆರೆಸಿದರೆ ಅಮೃತದಂತಹ ಬಾಳೆದಿಂಡಿನ ರಸ ಸವಿಯಲು ಸಿದ್ಧ.

ಹೀಗೆ ಬಾಳೆದಿಂಡಿನ ರಸವನ್ನು ಅದರ ತಿರುಳನ್ನು ಪಲ್ಯ ಸಾಂಬಾರ್ ಯಾವುದೇ ರೂಪದಲ್ಲಿ ಸೇವಿಸಿದರು ಕಾಲಿನಿಂದ ತಲೆಯವರೆಗೂ ಅದ್ಭುತ ಆರೋಗ್ಯಕರವಾದ ಬದಲಾವಣೆ ಹಾಗೂ ಪರಿಣಾಮಗಳನ್ನು ನಾವು ಕಾಣಬಹುದು.

ಬನ್ನಿ ಪ್ರಾಚೀನ ಕಾಲದ ಆಹಾರ ಪದ್ಧತಿ ಹಾಗೂ ಆಯುರ್ವೇದ ಪದ್ಧತಿಯನ್ನು (Ayurvedic system) ರೂಡಿಸಿಕೊಂಡು ಈಗಿನ ಅನಾರೋಗ್ಯದ ವಾತಾವರಣವನ್ನು ಬದಲಾಯಿಸೋಣ.

ನಮ್ಮ ಮುಂದಿನ ಪೀಳಿಗೆಯನ್ನು ಆರೋಗ್ಯವಾಗಿರಿಸೋಣ.

ಯಶಸ್ವಿನಿಗೌಡ ಆರ್.

Exit mobile version