2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?

Bengaluru : 2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು(Weddings) ಆಯೋಜಿಸಿದ ಭಾರತೀಯ ನಗರಗಳ ಪಟ್ಟಿಯನ್ನು ವೆಡ್ಡಿಂಗ್ ಟೆಕ್ನಾಲಜಿ ಪ್ಲಾಟ್‌ಫಾರ್ಮ್‌,ವೆಡ್ಡಿಂಗ್ ವೈರ್‌ನ(Bangalore hosted most weddings) ವಾರ್ಷಿಕ ವರದಿಯಲ್ಲಿ ಬಿಡುಗಡೆ ಮಾಡಲಾಗಿದೆ.

ವೆಡ್ಡಿಂಗ್ ಟೆಕ್ನಾಲಜಿ ಪ್ಲಾಟ್‌ಫಾರ್ಮ್‌,ವೆಡ್ಡಿಂಗ್ ವೈರ್‌ನ ವಾರ್ಷಿಕ ವರದಿ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿ(Dehli) ಮೊದಲ ಸ್ಥಾನದಲ್ಲಿದ್ದರೆ ಮುಂಬೈ(Mumbai) ಮೂರನೇ ಸ್ಥಾನದಲ್ಲಿದೆ.

ಈ ನಡುವೆ ಬೆಂಗಳೂರು ಎರಡನೇಯ ಸ್ಥಾನ ಪಡೆದುಕೊಂಡಿದೆ. ಇನ್ನು ವಿವಾಹದ ವೇಳೆ ವೆಡ್ಡಿಂಗ್ ಛಾಯಾಗ್ರಾಹಕರು ಮತ್ತು ಮೇಕಪ್ ಕಲಾವಿದರು ಹೆಚ್ಚಾಗಿ ಬೇಡಿಕೆಯಲ್ಲಿದ್ದರು ಎನ್ನಲಾಗಿದೆ.

2022 ರಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ಗಳ(Destination Wedding) ಸಂಖ್ಯೆಯು ಹೆಚ್ಚಾಗಿದೆ. ಉದಯಪುರ, ಜೈಪುರ ಮತ್ತು ಗೋವಾದಲ್ಲಿ(Goa) ಅತಿ ಹೆಚ್ಚು ಡೆಸ್ಟಿನೇಶನ್ ವಿವಾಹಗಳನ್ನು ಆಯೋಜಿಸಲಾಗಿದೆ. 

ಅಂತರಾಷ್ಟ್ರೀಯ ನಗರಗಳ ವಿಷಯಕ್ಕೆ ಬಂದರೆ, ಸಿಂಗಾಪುರ, ಅಬುಧಾಬಿ ಮತ್ತು ನ್ಯೂಯಾರ್ಕ್ ನಗರಗಳು  ಭಾರತೀಯರ ನೆಚ್ಚಿನ ವಿವಾಹ ತಾಣಗಳಾಗಿವೆ.

2022 ರಲ್ಲಿ ಡಿಸೆಂಬರ್ 2 ರಂದು ಅತಿ ಹೆಚ್ಚು ವಿವಾಹಗಳು ನಡೆದಿವೆ. 21.5 ರಷ್ಟು ವಿವಾಹಗಳೊಂದಿಗೆ ಗರಿಷ್ಠ ಸಂಖ್ಯೆಯ ವಿವಾಹಗಳಿಗೆ(Bangalore hosted most weddings) ಡಿಸೆಂಬರ್ ತಿಂಗಳು ಸಾಕ್ಷಿಯಾಗಿದೆ ಎಂದು ವರದಿಯು ಬಹಿರಂಗಪಡಿಸಿದೆ. 

ಫೆಬ್ರವರಿಯಲ್ಲಿ 15.49 ರಷ್ಟು ವಿವಾಹಗಳು ನಡೆದಿವೆ. ವಾರಾಂತ್ಯದ ವಿವಾಹಗಳು ಜನಪ್ರಿಯತೆಯ ಪಟ್ಟಿಯಲ್ಲಿ ಇನ್ನೂ ಹೆಚ್ಚಿನ ಸ್ಥಾನವನ್ನು ಪಡೆದಿದೆ.

ಏಕೆಂದರೆ ಹೆಚ್ಚಿನ ಜೋಡಿಗಳು ಭಾನುವಾರವನ್ನು ನಿಕಟವಾಗಿ ಆಯ್ಕೆ ಮಾಡಿಕೊಂಡಿದ್ದು, ಶುಕ್ರವಾರದ ನಂತರ ದಿನವನ್ನು ಮದುವೆಯ ದಿನವನ್ನಾಗಿ ಹೆಚ್ಚಿನವರು ಆಯ್ಕೆಮಾಡಿಕೊಂಡಿದ್ದಾರೆ.

ಇದನ್ನೂ ಓದಿ: https://vijayatimes.com/book-railway-tickets-kannada/

ಇನ್ನು ತ್ರಿಪುರಾ(Tripura), ಸಿಕ್ಕಿಂ(Sikkim) ಮತ್ತು ಇಂಫಾಲ್ ದೇಶದಲ್ಲಿ ಕಡಿಮೆ ಸಂಖ್ಯೆಯ ವಿವಾಹಗಳನ್ನು ದಾಖಲಿಸಿದ ನಗರಗಳಾಗಿದೆ. ದೇಶದಲ್ಲಿ ಕೋವಿಡ್(Covid) ನಿರ್ಬಂಧಗಳಿಂದಾಗಿ 2020 ಮತ್ತು 2021ರಲ್ಲಿ ಮದುವೆ ಮಾರುಕಟ್ಟೆಯು ಕುಸಿತ ಕಂಡಿತ್ತು.

2022 ರಲ್ಲಿ ನಿರ್ಬಂಧಗಳನ್ನು ತೆಗೆದುಹಾಕಲಾಯಿತು. ಇದೀಗ ಮದುವೆ ಉದ್ಯಮವು ಮತ್ತೆ ಚೇತರಿಕೆ ಕಂಡಿದೆ. ಅದೇ ರೀತಿ ಬೆಂಗಳೂರು ಅತಿಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರವಾಗಿದೆ. ಬೆಂಗಳೂರು ನಗರದಲ್ಲಿ ಆಯೋಜಿಸಿದ ವಿವಾಹಗಳಲ್ಲಿ ಅತಿಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ.

ವಿವಾಹ ಸಮಯದಲ್ಲಿ ಛಾಯಾಗ್ರಾಹಕ ವೃತ್ತಿಯೂ ಅತಿಹೆಚ್ಚು ಬೇಡಿಕೆಯ ಮತ್ತು ಗಳಿಕೆಯ ವೃತ್ತಿಯಾಗಿದೆ ಎಂದು ವೆಡ್ಡಿಂಗ್ ಟೆಕ್ನಾಲಜಿ ಪ್ಲಾಟ್‌ಫಾರ್ಮ್‌,ವೆಡ್ಡಿಂಗ್ ವೈರ್‌ನ ವಾರ್ಷಿಕ ವರದಿ ತಿಳಿಸಿದೆ.

Exit mobile version