ಬೆಂಗಳೂರು(ಜು.11): ಇಂದು(ಮಂಗಳವಾರ) ಬೆಂಗಳೂರು ವಿಶ್ವವಿದ್ಯಾಲಯದ(Bengaluru University) ಸುಮಾರು 52 ವಿಭಾಗದ 3 ಸಾವಿರ ವಿದ್ಯಾರ್ಥಿಗಳು ತರಗತಿಗೆ ಗೈರು ಹಾಜರಾಗಲು ಸ್ವಯಂ ಪ್ರೇರಿತರಾಗಿ ನಿರ್ಧರಿಸಿದ್ದಾರೆ. ನ್ಯಾಕ್ ಎ ಡಬಲ್ ಪ್ಲಸ್(Nac a++) ವಿವಿಗೆ ಬಂದಿದ್ದರೂ ಸಹ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಕೊಡಬೇಕಿದ್ದ ಮೂಲ ಸೌಕರ್ಯ ಕೊಡದೇ ಸತಾಯಿಸುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ವಿವಿ ವಿರುದ್ಧ ವಿದ್ಯಾರ್ಥಿಗಳು ಮೂಲ ಸೌಕರ್ಯಗಳಿಗೆ ಒತ್ತಾಯಿಸಿ ಸುಸ್ತಾಗಿದೆ ಎಂದು ಕಿಡಿ ಕಾರಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಕೊಡಬೇಕಿರುವ ಮೂಲ ಸೌಕರ್ಯಗಳನ್ನ ಕೊಡದೇ ಸತಾತಿಯಿಸುತ್ತಿದೆ.ವಿವಿ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಆದರೆ ಯಾವುದೇ ಕಾರಣಕ್ಕೂ ಇವತ್ತು ತರಗತಿಗೆ ಹಾಜರಾಗುವುದಿಲ್ಲ, ಎಂದು ಎಲ್ಲಾ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.

ಇಂದು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಯಾವುದೇ ವಿಭಾಗದಲ್ಲಿಯೂ ಹಾಜರಾಗಲ್ಲ. ಸುಮಾರು 3 ಸಾವಿರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
ನ್ಯಾಕ್ ಎ++ ಶ್ರೇಣಿ ಪಡೆಯುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯ ಐತಿಹಾಸಿಕ ಸಾಧನೆಗೈದಿದ್ದು, ಈ ಕೀರ್ತಿಗೆ ಭಾಜನವಾದ ರಾಜ್ಯದ ಮೊದಲ ಮತ್ತು ದೇಶದ 2ನೇ ಸರ್ಕಾರಿ ವಿವಿ ಎಂಬ ಕೀರ್ತಿಗೆ ಭಾಜನವಾಗಿದೆ.ಅಲ್ಲದೆ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಐಸಿಎಂಆರ್(ICMR), ಐಸಿಎಸ್‌ಆರ್ (ICSR)ಸೇರಿ ವಿವಿಧ ಸಂಸ್ಥೆಗಳಿಂದ ವಿವಿಯಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು 136 ಕೋಟಿ ರೂ. ಸಂಶೋಧನಾ ಅನುದಾನ ಬಂದಿದೆ.ಅಷ್ಟೇ ಅಲ್ಲದೆ 4 ಕೋಟಿ ರೂ.ವಿವಿಧ ನಾಗರಿಕ ಸೇವೆ ಮತ್ತು ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ಕೆ ಅನುದಾನ ಬಂದಿದೆ

ವಿದ್ಯಾರ್ಥಿಗಳ ‘ಮೂಲ’ ಬೇಡಿಕೆಯೇನು?
ಸ್ಮಾರ್ಟ್ ಕ್ಲಾಸ್
ಗ್ರಂಥಾಲಯದಲ್ಲಿ ಉತ್ತಮ ಪುಸ್ತಕ
ಉತ್ತಮ ಲ್ಯಾಬ್
ಕೋಚಿಂಗ್ ಕ್ಲಾಸ್
ಸ್ವಿಮ್ಮಿಂಗ್ ಪೂಲ್ ದುರಸ್ತಿ
ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉತ್ತಮ ಹಾಸ್ಟೆಲ್ ವ್ಯವಸ್ಥೆ
24/7 ಗ್ರಂಥಾಲಯ
ಸ್ಕಿಲ್ ಡೆವೆಲಪ್ಮೇಂಟ್ ಕ್ಲಾಸ್
ದೈಹಿಕ ವ್ಯಾಯಾಮ ಶಾಲೆ
ಕ್ರಿಡೋಪಕರಣಗಳು
ಉತ್ತಮ ಹೊರ ಕ್ರೀಡಾಂಗಣ
ಕುಡಿಯುವ ನೀರಿನ ವ್ಯವಸ್ಥೆ
ಉತ್ತಮ ಒಳ ಕ್ರೀಡಾಂಗಣ
ಹಾಗೂ ವಿದ್ಯಾರ್ಥಿಗಳು ಇನ್ನಿತರ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ.
ರಶ್ಮಿತಾ ಅನೀಶ್