ಬ್ಯಾಟರಿ ರಹಿತ ಫೋನ್ ಬರುವ ದಿನ ದೂರವಿಲ್ಲ ; ಬ್ಯಾಟ್ರಿ ರಹಿತ ಮೊಬೈಲ್ ಕಂಡುಹಿಡಿದ ಸಂಶೋಧಕರು!

batteryless

ಮೊಬೈಲ್(Mobile) ಈ ಪ್ರಪಂಚಕ್ಕೆ ಬಂದ ಮೊದ ಮೊದಲು ನಾವೆಲ್ಲರೂ ಹೆಮ್ಮೆಯಿಂದ ಬೀಗಿದೆವು ಇನ್ನು ಮುಂದೆ ಇಡೀ ಪ್ರಪಂಚ ನಮ್ಮ ಅಂಗೈಯಲ್ಲಿ ಇರುತ್ತೆ ಅಂತ. ಆದರೆ, ಇಂದು ಆ ಮೊಬೈಲ್ ಅಂಗೈಯಲ್ಲಿ ನಾವೆಲ್ಲರೂ ಇರುವಂತಾಗಿದೆ. ಇದಕ್ಕೆಲ್ಲಾ ಮೊಬೈಲ್ ಅನ್ನೋ ‘ಮಾಯಾವಿ’ಯನ್ನು ನಾವು ನಮ್ಮ ಬದುಕಿನೊಳಗೆ ಅತಿಯಾಗಿ ಬಿಟ್ಟುಕೊಂಡಿದ್ದೇ ಕಾರಣ. ಜಂಗಮವಾಣಿ(MobilePhone) ಇಂದು ಕೇವಲ ಫೋನ್ ಮಾಡಲು ಮತ್ತು‌ ಮೆಸೇಜ್ ಮಾಡಲಷ್ಟೇ ಉಳಿದಿದ್ದರೆ ಬಹುಷಃ ಮೊಬೈಲ್ ಇಷ್ಟೊಂದು ನಶೆ ಆಗುತ್ತಿರಲಿಲ್ಲ.


ಮೊಬೈಲ್ ಕೆಲಸ ಮಾಡುವುದಕ್ಕೆ ಸಾಂಪ್ರದಾಯಿಕ ಬ್ಯಾಟರಿಗಳಿಷ್ಟೇ ಏಕೈಕ ಶಕ್ತಿಮೂಲಗಳಲ್ಲ, ಇದರ ಬದಲಿಗೆ ಗಾಳಿಯಿಂದ ಶಕ್ತಿಯನ್ನು ಸೆಳೆದುಕೊಳ್ಳುವ ಇಲ್ಲವೇ ಟಿಲಿವಿಷನ್, ಸೆಲ್ಯೂಲಾರ್ ಇಲ್ಲವೇ ವೈಫೈ ಸಂಕೇತಗಳ ಮೂಲಕ ತನ್ನಷ್ಟಕ್ಕೆ ತಾನೇ ‘ಶಕ್ತಿ’ಯನ್ನು ತುಂಬಿಕೊಳ್ಳುವ ಮೊಬೈಲ್‌ಗಳು ಮುಂದಿನ ಆವಿಷ್ಕಾರಗಳಾಗಲಿವೆ. ಹೌದು, ಇನ್ಮುಂದೆ ಮೊಬೈಲ್ ಬ್ಯಾಟರಿ ಬಹುಬೇಗ ಖಾಲಿಯಾಗುತ್ತದೆ ಎಂಬ ಚಿಂತೆಯನ್ನು ಬಿಟ್ಟುಬಿಡಿ. ಏಕೆಂದರೆ, ಮೊಬೈಲ್‌ನಲ್ಲಿ ಬ್ಯಾಟರಿಯೇ ಇಲ್ಲವಾಗಿಸಲು ಇದೀಗ ವಿಜ್ಞಾನಿಗಳು ಪವಾಡವನ್ನೇ ನಡೆಸಿದ್ದಾರೆ.

ಅಂದರೆ, ಸಂಶೋಧಕರು ನೂತನ ಪ್ರಯೋಗವನ್ನು ಮಾಡಿದ್ದು, ಬ್ಯಾಟರಿಯಿಲ್ಲದ ಮೊಬೈಲ್​ ಫೋನ್​​​​ವೊಂದನ್ನು ಕಂಡುಹಿಡಿದು ವಿಶ್ವಕ್ಕೇ ಅಚ್ಚರಿ ಮೂಡಿಸಿದ್ದಾರೆ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಬಳಕೆ ಮಿತಿಗಳಲ್ಲಿ ಬ್ಯಾಟರಿ ಬಹುಬೇಗ ಖಾಲಿಯಾಗುತ್ತಿರುವುದು ಕೂಡ ಒಂದು. ಹಾಗಾಗಿ ಮೊಬೈಲ್ ಫೋನ್​ ಬ್ಯಾಟರಿ ಶಕ್ತಿಯನ್ನು ಹೆಚ್ಚಿಸಲು ಮೊಬೈಲ್ ತಯಾರಿಕ ಸಂಸ್ಥೆಗಳು ನಾನಾ ತರಹದ ಪ್ರಯೋಗಗಳನ್ನು ನಡೆಸುತ್ತಿವೆ. ಆದರೆ, ಅಮೆರಿಕಾದ ಸಂಶೋಧಕರು ಬ್ಯಾಟರಿಯಿಲ್ಲದ ಮೊಬೈಲ್​ ಅನ್ನು ಕಂಡುಹಿಡಿದಿದ್ದಾರೆ.

ಯುನಿವರ್ಸಿಟಿ ಆಫ್​ ವಾಷಿಂಗ್ಟನ್​​​​ ಸಂಶೋಧಕರು ನೂತನ ಪ್ರಯೋಗವನ್ನು ನಡೆಸಿ ಬ್ಯಾಟರಿಯಿಲ್ಲದ ಮೊಬೈಲ್​ ಫೋನ್​​​​ವೊಂದನ್ನು ಕಂಡುಹಿಡಿದಿದ್ದು, ಪ್ರಕೃತಿದತ್ತವಾಗಿ ಲಭ್ಯವಿರುವ ಶಕ್ತಿಯನ್ನು ಉಪಯೋಗಿಸಿ ಈ ಮೊಬೈಲ್ ಕೆಲಸ ಮಾಡಲಿದೆ. ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಬ್ಯಾಟರಿ ರಹಿತ ಫೋನ್ ಬರುವ ದಿನ ದೂರವಿಲ್ಲ ಎಂದು ಸಂಶೋಧನ ತಂಡ ಹೇಳಿದೆ.
ವಿದ್ಯುತ್​​ ಶಕ್ತಿಗೆ ಬದಲಾಗಿ ರೇಡಿಯೋ ಸಿಗ್ನಲ್ಗಳ ಮೂಲಕ ಬೆಳಕಿಗೆ ಅಗತ್ಯವಿರುವ ಮೈಕ್ರೋವ್ಯಾಟ್​​​ಗಳನ್ನು ಬಳಸಿಕೊಂಡು ತಯಾರಾಗಿರುವ ಈ ಬ್ಯಾಟರಿ ರಹಿತ ಮೊಬೈಲ್ ಫೋನಿನಲ್ಲಿ ಸಂಶೋಧಕರು ಸ್ಕೈಪ್​​ ಕರೆಗಳನ್ನು ಮಾಡಿ ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ.

ಹಾಗಾಗಿ, ಭವಿಷ್ಯದ ಮೊಬೈಲ್‌ಗಳು ಬ್ಯಾಟರಿ ಇಲ್ಲದೇ ಚಾಲೂ ಆಗುತ್ತವೆ ಎಂದು ಹೇಳಬಹುದು. ಇನ್ನು ಪ್ರಕೃತಿದತ್ತವಾದ ಶಕ್ತಿಯನ್ನು ಉಪಯೋಗಿಸಿ ಬಳಸಬಹುದಾದ ಬ್ಯಾಟರಿ ರಹಿತ ​ಫೋನಿನ ವಿನ್ಯಾಸದ ಕುರಿತು ಸಂಶೋಧನ ತಂಡ ಮಿಮರ್ಶಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಸಜ್ಜುಮಾಡುತ್ತಿದ್ದಾರೆ. ಇನ್ನು ಸ್ವಲ್ಪ ದಿನದಲ್ಲೇ ಬ್ಯಾಟರಿ ಸಂಬಂಧಿತ ಸಮಸ್ಯೆಗಳಿಂದ ತಲೆ ಕೆಡಿಸಿಕೊಂಡವರಿಗೆ ಸಿಹಿ ಸುದ್ದಿ ಸಿಗೋದು ಗ್ಯಾರಂಟಿ.

Exit mobile version