ತುರ್ತು ಅಧಿಕಾರ ಬಳಸಿ, ಬಿಬಿಸಿಯ ಮೋದಿ ವಿರೋಧಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ ಕೇಂದ್ರ ಸರ್ಕಾರ

New Delhi: ಬ್ರಿಟನ್‌ನ ಬಿಬಿಸಿ(BBC’s Modi documentary banned) ಸಂಸ್ಥೆ ನಿರ್ಮಿಸಿರುವ ಗುಜರಾತ್‌ ಗಲಭೆಗೆ ಸಂಬಂಧಿಸಿದ ಸಾಕ್ಷ್ಯಚಿತ್ರವನ್ನು ಭಾರತ ಸರ್ಕಾರ ತನ್ನ ತುರ್ತು ಅಧಿಕಾರ ಬಳಸಿ ನಿಷೇಧಿಸಿದೆ.

ಈ ಸಾಕ್ಷ್ಯಚಿತ್ರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ಭಾರತ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.

ಈ ಸಾಕ್ಷ್ಯಚಿತ್ರದಲ್ಲಿ, 2002ರ ಗುಜರಾತ್(Gujarat) ಗಲಭೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಅಂದಿನ ಮುಖ್ಯಮಂತ್ರಿಯಾಗಿ “ನೇರವಾಗಿ ಹೊಣೆಗಾರರಾಗಿದ್ದಾರೆ” ಎಂದು ಬಿಬಿಸಿ ಬಿಂಬಿಸಿದೆ.

ಬ್ರಿಟನ್‌ನಲ್ಲಿ(Britain) ಸಾಕ್ಷ್ಯಚಿತ್ರದ ಮೊದಲ ಸಂಚಿಕೆಯನ್ನು ಮಂಗಳವಾರ ಪ್ರಸಾರ ಮಾಡಲಾಗಿತ್ತು. ಆದರೆ 59 ನಿಮಿಷಗಳ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಪ್ರಸಾರ ಮಾಡಲಾಗಿಲ್ಲ.

ಆದರೂ ಇದನ್ನು ಟ್ವಿಟರ್(Twitter) ಮತ್ತು ಯೂಟ್ಯೂಬ್‌ನಲ್ಲಿ(Youtube) ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಹೀಗಾಗಿ ಭಾರತ ಸರ್ಕಾರ ಮಾಹಿತಿ ಮತ್ತು ತಂತ್ರಜ್ಞಾನ ಕಾನೂನಿನಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಬಿಬಿಸಿಯ ಸಾಕ್ಷ್ಯಚಿತ್ರದ ತುಣುಕುಗಳನ್ನು

ನಿರ್ಬಂಧಿಸಲು ಯೂಟ್ಯೂಬ್ ಮತ್ತು ಟ್ವಿಟರ್ ಎರಡಕ್ಕೂ ಆದೇಶಗಳನ್ನು ನೀಡಿದೆ ಎಂದು ಭಾರತ ಸರ್ಕಾರದ ಸಲಹೆಗಾರ ಕಾಂಚನ್ ಗುಪ್ತಾ(Kanchan Gupta) ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, “”ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಬಿಬಿಸಿ ವಲ್ಡ್ನ(BBC World) ದ್ವೇಷಪೂರಿತ ಪ್ರಚಾರದ ಮೊದಲ ಸಂಚಿಕೆಯ ಯೂಟ್ಯೂಬ್ ವೀಡಿಯೊಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದೆ.

ಅದೇ ರೀತಿ ವೀಡಿಯೊಗಳ ಲಿಂಕ್‌ಗಳೊಂದಿಗೆ 50 ಕ್ಕೂ ಹೆಚ್ಚು ಟ್ವೀಟ್‌ಗಳನ್ನು ನಿರ್ಬಂಧಿಸಲು ಟ್ವೀಟರ್‌ಗೆ ಆದೇಶವನ್ನು ನೀಡಲಾಗಿದೆ” ಎಂದು ತಿಳಿಸಿದ್ದಾರೆ.

ಇನ್ನು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು ಬಿಬಿಸಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಸಾಕ್ಷ್ಯಚಿತ್ರವು “ವಸಾಹತುಶಾಹಿ ಮನಸ್ಥಿತಿ” ತೋರಿಸುವ “ಪ್ರಚಾರ ತುಣುಕು”.

ದುರುದ್ದೇಶಪೂರಿತ ‘ಸಾಕ್ಷ್ಯಚಿತ್ರ’ವನ್ನು ಪರಿಶೀಲಿಸಲಾಗಿದೆ. ಇದು ಭಾರತದ ಸುಪ್ರೀಂ ಕೋರ್ಟ್‌ನ(Supreme Court) ಅಧಿಕಾರ ಮತ್ತು ವಿಶ್ವಾಸಾರ್ಹತೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಬಿತ್ತರಿಸುತ್ತಿದೆ.

ವಿವಿಧ ಭಾರತೀಯ ಸಮುದಾಯಗಳಲ್ಲಿ ವಿಭಜನೆಗಳನ್ನು ಬಿತ್ತಿದೆ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಕಣಕ್ಕಿಳಿಯಲು ನಿರ್ಧಾರ: ಸಂಚಲನ ಸೃಷ್ಟಿಸಿದ ಜೆಡಿಎಸ್‌ ನಿರ್ಧಾರ ..

ಇನ್ನು ಗುಜರಾತ್‌ನ ಗೋಧ್ರಾ ನಿಲ್ದಾಣದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಇದ್ದ ರೈಲಿನ ಕೋಚ್‌ಗೆ ಬೆಂಕಿ ಹಚ್ಚಿ 59 ಜನರನ್ನು ಸಜೀವ ದಹನ ಮಾಡಲಾಯಿತು.

ಅದರ ನಂತರ ಇಡೀ ಗುಜರಾತ್‌ ರಾಜ್ಯದಾದ್ಯಂತ ಹಿಂಸಾಚಾರ ಭುಗಿಲೆದ್ದಿತು.

ಈ ಹಿಂಸಾಚಾರದಲ್ಲಿ ನೂರಾರು ಜನರ ಹತ್ಯೆಯಾಯಿತು. ಈ ಗಲಭೆಗೆ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೇ ನೇರ ಕಾರಣ ಎಂದು ಆರೋಪಿಸಲಾಯಿತು.

ಆದರೆ ಈ ಕುರಿತು ಸುದಿರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ನರೇಂದ್ರ ಮೋದಿ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಭಾರತದ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ದವಾಗಿ ಬಿಬಿಪಿಯು ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ. ಹೀಗಾಗಿ ಭಾರತ ಈ ಸಾಕ್ಷ್ಯಚಿತ್ರವನ್ನು ನಿಷೇಧಿಸಿದೆ ಎನ್ನಲಾಗಿದೆ.

Exit mobile version