ಪ್ಲಾಸ್ಟಿಕ್ ನಿಷೇಧ ಉಲ್ಲಂಘನೆ ; ಬಿಬಿಎಂಪಿಯಿಂದ 990 ಪ್ರಕರಣಗಳು, 5.97 ಲಕ್ಷ ರೂಪಾಯಿ ದಂಡ ವಸೂಲಿ!

bengaluru

ಜುಲೈ 1 ರಿಂದ ಪ್ಲಾಸ್ಟಿಕ್ ನಿಷೇಧವನ್ನು(Plastic Ban) ಜಾರಿಗೊಳಿಸುವ ಬಗ್ಗೆ ಉಸ್ತುವಾರಿ ವಹಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP), ನಿಷೇಧವನ್ನು ಉಲ್ಲಂಘಿಸಿದ ಜನರ ವಿರುದ್ಧ ಇಲ್ಲಿಯವರೆಗೂ 990 ಪ್ರಕರಣಗಳನ್ನು ದಾಖಲಿಸಿದೆ ಎನ್ನಲಾಗಿದೆ. ಕಳೆದ 12 ದಿನಗಳಲ್ಲಿ 5,97,800 ರೂ.ಗಳ ದಂಡವನ್ನೂ ಸಂಗ್ರಹಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಜುಲೈ 1 ರಿಂದ ಪ್ಲಾಸ್ಟಿಕ್ ನಿಷೇಧ ಜಾರಿಗೆ ಬಂದ ನಂತರ ಒಟ್ಟು 990 ಪ್ರಕರಣಗಳನ್ನು ದಾಖಲಿಸಿದ್ದು, ನಿಯಮ ಉಲಂಘನೆ ಮಾಡಿದವರಿಂದ ಒಟ್ಟು 5,97,800 ರೂಪಾಯಿಗಳನ್ನು ದಂಡವಾಗಿ ಸಂಗ್ರಹಿಸಲಾಗಿದೆ.

ಬಿಬಿಎಂಪಿಯು ಬೃಹತ್ ಬೆಂಗಳೂರು ಮಹಾನಗರ ಪ್ರದೇಶದಲ್ಲಿನ ನಾಗರಿಕ ಸೌಕರ್ಯಗಳು ಮತ್ತು ಕೆಲವು ಮೂಲಸೌಕರ್ಯ ಸ್ವತ್ತುಗಳನ್ನು ನೋಡಿಕೊಳ್ಳುವ ಆಡಳಿತ ಮಂಡಳಿಯಾಗಿದೆ. ನಿಷೇಧದ ಅನುಷ್ಠಾನ ಪ್ರಾಧಿಕಾರವಾದ ನಗರ ಸ್ಥಳೀಯ ಸಂಸ್ಥೆಯು ಒಟ್ಟು 1,380.8 ಕೆಜಿ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡಿದೆ. ಚಿಲ್ಲರೆ ಅಂಗಡಿಗಳು, ಹೋಟೆಲ್‌ಗಳು, ಪ್ಲಾಸ್ಟಿಕ್ ಉತ್ಪಾದನಾ ಕಂಪನಿಗಳು ಮತ್ತು ಇತರ ಸಂಸ್ಥೆಗಳಿಂದ ನಿಯಮ ಉಲ್ಲಂಘನೆ ಆಧಾರದ ಮೇರೆಗೆ ವಶಪಡಿಸಿಕೊಳ್ಳಲಾಗಿದೆ.

ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಕಿರಿಯ ಆರೋಗ್ಯ ಮೇಲ್ವಿಚಾರಕರು ಮತ್ತು ಮಾರ್ಷಲ್‌ಗಳ ತಂಡದಿಂದ ದಿಢೀರ್ ಭೇಟಿ ನಡೆಸಲಾಗುತ್ತಿದೆ. ಬಿಬಿಎಂಪಿಯ ಅಂಕಿಅಂಶಗಳ ಪ್ರಕಾರ, ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು ನಿಷೇಧ ಉಲ್ಲಂಘನೆಗಳು (255) ದಾಖಲಾಗಿದ್ದರೆ, ಪೂರ್ವದಲ್ಲಿ 203 ಉಲ್ಲಂಘನೆಗಳು ಸಂಭವಿಸಿವೆ ಎನ್ನಲಾಗಿದೆ. ಅತೀ ಕಡಿಮೆ ಉಲ್ಲಂಘನೆಯಾಗಿರುವ ನಗರ ದಾಸರಹಳ್ಳಿ ಎಂಬುದು ವರದಿಯಲ್ಲಿ ತಿಳಿದುಬಂದಿದೆ.

Exit mobile version