ಹೇರ್‌ ಡೈ ಮಾಡುವ ಮುನ್ನ ಎಚ್ಚರ !

hair dye tips

ಬಹುತೇಕರು ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಹೇರ್‌ ಡೈ ಉಪಯೋಗಿಸುತ್ತಾರೆ ಆದರೆ ಇದು ಕೆಲವರಿಗೆ ಹಲವು ರೋಗಗಳು ಬರುವುದಕ್ಕೆ ಕಾರಣವಾಗುತ್ತದೆ. ಮುಖ್ಯವಾಗಿ ಹೇರ್‌ ಡೈನಲ್ಲಿರುವ ರಾಸಾಯನಿಕಗಳು ಚರ್ಮಕ್ಕೆ ಸೋರಿಕೆಯಾಗಿ, ದದ್ದುಗಳು, ಅಲರ್ಜಿಯಂತಹ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು. ಇದಲ್ಲದೆ, ಕಣ್ಣು, ಕಿವಿ, ನೆತ್ತಿ ಮತ್ತು ಮುಖದ ಚರ್ಮಗಳಿಗೆ ಅಲರ್ಜಿ ಉಂಟಾಗಬಹುದು. ಹಾಗೆಯೇ ನೆತ್ತಿಯ ತುರಿಕೆ, ಕೆಂಪು ಊತ, ತಲೆ ಹೊಟ್ಟುದಂತಹ ಸಮಸ್ಯೆ ಕೂಡ ಎದುರಾಗಬಹುದು.

ಬಿಳಿ ಕೂದಲಿಗೆ ಶಾಶ್ವತ ಹೇರ್ ಕಲರಿಂಗ್‌ ಮಾಡುವುದರಿಂದ ಮತ್ತಷ್ಟು ತೊಂದರೆಗೆ ಸಿಲುಕುವಿರಿ. ಅದೇನೆಂದರೆ ಇಂತಹ ಬಣ್ಣಗಳಲ್ಲಿ ಅಮೊನಿಯಾ ಮತ್ತು ಪೆರಾಕ್ಸೈಡ್‌ ಗಳನ್ನು ಹೊಂದಿರುತ್ತದೆ. ಇವೆರಡೂ ಕೂದಲಿನ ನೈಸರ್ಗಿಕ ವರ್ಣದ್ರವ್ಯವನ್ನು ತಟಸ್ಥಗಳಿಸುವಂತೆ ಮಾಡುವುದಲ್ಲದೆ, ಕೂದಲಿಗೆ ಹಾನಿಯುಂಟು ಮಾಡುತ್ತದೆ.

ಕೂದಲ ಬಣ್ಣಗಳನ್ನು ಹಚ್ಚಿಕೊಳ್ಳುವಾಗ ಅತೀವವಾದ ಎಚ್ಚರಿಕೆ ಅಗತ್ಯ. ಕೊಂಚ ಎಚ್ಚರ ತಪ್ಪಿದರೂ ಇದರಿಂದ ಸಿಡಿಯುವ ಚಿಕ್ಕ ಹನಿ ಕಣ್ಣಿಗೆ ಬಿದ್ದರೂ ಭಾರೀ ಉರಿ ಎದುರಾಗಬಹುದು. ಇದರಲ್ಲಿರುವ ರಾಸಾಯನಿಕಗಳು ಅತಿ ಪ್ರಬಲವಾಗಿದ್ದು ಕಣ್ಣಿನಂತಹ ಸೂಕ್ಷ್ಮ ಭಾಗಕ್ಕೆ ಅತಿ ಹೆಚ್ಚಿನ ಪರಿಣಾಮ ಬೀರುತ್ತದೆ. ಅಕಸ್ಮಾತ್ ಅತಿ ಚಿಕ್ಕ ಹಸಿ ಕಣ್ಣಿಗೆ ಬಿದ್ದರೂ ಇದರಿಂದ ಕಣ್ಣು ಉರಿ ಮತ್ತು ಮದ್ರಾಸ್ ಐ ಎಂಬ ಕಣ್ಣಿನ ಕಾಯಿಲೆ ಎದುರಾಗಬಹುದು.

ಕೂದಲಿಗೆ ಬಣ್ಣ ಹಾಕುವ ಪ್ರಯತ್ನಗಳು ಗರ್ಭಿಣಿ ಮಹಿಳೆಯರ ಹುಟ್ಟಲಿರುವ ಮಗುವಿಗೂ ಹಾನಿಕಾರಕವಾಗಬಹುದು ಏಕೆಂದರೆ ಇದು ಭ್ರೂಣದಲ್ಲಿ ಅನಪೇಕ್ಷಿತ ಜೀವಕೋಶಗಳ ಬೆಳವಣಿಗೆಗೆ (malignancy) ಕಾರಣವಾಗಬಹುದು.

ಹೇರ್ ಡೈನಲ್ಲಿರುವ ಪಿ-ಪೀನೈಲ್ಎಂಡಾಮೈನ್‌ ರಾಸಾಯನಿಕ ಬ್ಲೇಡರ್ ಕ್ಯಾನ್ಸರ್‌, ಶ್ವಾಸಕೋಶ ಹಾಗೂಕಿಡ್ನಿ ಸಮಸ್ಯೆ ತರುವ ಸಾಧ್ಯತೆ ಇದೆ. ಇಂಟರ್‌ನ್ಯಾಷನಲ್ ಜರ್ನಲ್‌ ಆಫ್‌ ಕ್ಯಾನ್ಸರ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯು ತಿಂಗಳಿಗೊಮ್ಮೆ ಹೇರ್ ಡೈ ಬಳಸುವವರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು ಎಂದು ಹೇಳಿದೆ. ಅದರಲ್ಲೂ ಕಂದು ಹಾಗೂ ಕಪ್ಪು ಬಣ್ಣದ ಹೇರ್‌ಡೈನಲ್ಲಿ ಈ ರಾಸಾಯನಿಕಗಳು ಅಧಿಕವಾಗಿರುವುದರಿಂದ ಈ ಹೇರ್‌ ಡೈಗಳನ್ನು ಬಳಸುವುದು ಅಪಾಯಕಾರಿಯಾಗಿದೆ ಎಂದು ಹೇಳಿದೆ.

ಇನ್ನೂ ಕೆಲವು ಕಾರಣಗಳನ್ನು ನೋಡುವುದಾದರೆ,

ಕೂದಲಿನ ಬಣ್ಣದ ವಾಸನೆ ಅಥವಾ ರಾಸಾಯನಿಕಗಳು ಆಸ್ತಮಾ ಕಾಯಿಲೆಗೆ ಕಾರಣವಾಗಬಹುದು. ಇದರ ಪರಿಣಾಮ ಉಸಿರಾಡಲು ಕಷ್ಟವಾಗಬಹುದು. ಸಾಕಷ್ಟು ಅಧ್ಯಯನಗಳು ಹೇರ್‌ ಡೈನಿಂದ ಆಸ್ತಮಾ ಪಡೆಯುವ ಸಾಧ್ಯತೆಗಳು ಹೆಚ್ಚು ಎಂದು ಹೇಳುತ್ತವೆ.

Exit mobile version