ಬೆಂಗಳೂರು ಬಿಇಎಂಎಲ್‌ನಲ್ಲಿ BE ಪಾಸಾದವರಿಗೆ ಉದ್ಯೋಗ: ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

ಭಾರತ್ ಅರ್ಥ್‌ ಮೂವರ್ಸ್‌ ಲಿಮಿಟೆಡ್ (Bharat Earth Movers Limited) ಬೆಂಗಳೂರು ಕಚೇರಿಯು ವಿವಿಧ 101 ಹುದ್ದೆಗಳ (BEML Jobs for BE Passed) ಭರ್ತಿಗೆ ಅಧಿಸೂಚನೆ

ಹೊರಡಿಸಿದ್ದು, ಎಕ್ಸಿಕ್ಯೂಟಿವ್, ಡೆಪ್ಯೂಟಿ ಜೆನೆರಲ್ ಮ್ಯಾನೇಜರ್, ಅಸಿಸ್ಟಂಟ್ ಮ್ಯಾನೇಜರ್(Assistant Manager) , ಆಫೀಸರ್ ಸೇರಿದಂತೆ ವಿವಿಧ ಪದನಾಮಗಳ ಹುದ್ದೆಗಳಿವೆ. ಹುದ್ದೆಗಳ

ಕುರಿತ ಕಂಪ್ಲೀಟ್‌ ಮಾಹಿತಿಯನ್ನು ಕೆಳಗಿನಂತೆ (BEML Jobs for BE Passed) ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ:
ಅಸಿಸ್ಟಂಟ್ ಮ್ಯಾನೇಜರ್ – ಆರ್‌ ಅಂಡ್ ಡಿ : 31
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್- ಮಾರ್ಕೆಟಿಂಗ್ (Marketing) : 03
ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್- ಪ್ಲಾನಿಂಗ್ (Planning) : 01
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಆಪರೇಷನ್ಸ್‌ ಎಕ್ಸಲೆನ್ಸ್‌): 01
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಸ್ಟ್ರಾಟೆಜಿ / ಅಲಾಯನ್ಸ್‌ ಮ್ಯಾನೇಜ್ಮೆಂಟ್) : 01
ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್ – ಕ್ವಾಲಿಟಿ ಇಂಜಿನಿಯರಿಂಗ್ : 01
ಸೀನಿಯರ್ ಮ್ಯಾನೇಜರ್ – ಪ್ರೊಡಕ್ಷನ್ ಕಂಟ್ರೋಲ್ : 01
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ ಆರ್‌ ಅಂಡ್ ಡಿ: 02
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಎಂಜಿನ್ಸ್‌) : 01
ಆಫೀಸರ್ ಪ್ರೊಡಕ್ಷನ್ : 01
ಆಫೀಸರ್ ಕ್ವಾಲಿಟಿ (ಮೆಕ್ಯಾನಿಕಲ್) : 02
ಆಫೀಸರ್ – ಕ್ವಾಲಿಟಿ ( ಇಲೆಕ್ಟ್ರಿಕಲ್ ) : 01
ಅಸಿಸ್ಟಂಟ್ ಮ್ಯಾನೇಜರ್ – ಪ್ರೊಡಕ್ಷನ್ ಕಂಟ್ರೋಲ್ : 01
ಆಫೀಸರ್ ಪ್ರೊಡಕ್ಷನ್ / ಪ್ಲಾನಿಂಗ್ / ಪ್ರೊಡಕ್ಷನ್ ಕಂಟ್ರೋಲ್ : 04

ವಯಸ್ಸಿನ ಅರ್ಹತೆಗಳು:
ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ 30 ವರ್ಷ ಗರಿಷ್ಠ ಮಿತಿ.
ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್(Assistant General Manager) ಹುದ್ದೆಗೆ 42 ವರ್ಷ ಗರಿಷ್ಠ ಮಿತಿ.
ಎಕ್ಸಿಕ್ಯೂಟಿವ್ (Executive) ಹುದ್ದೆಗಳಿಗೆ 45 ವರ್ಷ ಗರಿಷ್ಠ ಮಿತಿ.
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ ಹುದ್ದೆಗೆ 45 ವರ್ಷ ಗರಿಷ್ಠ ಮಿತಿ.
ಸೀನಿಯರ್ ಮ್ಯಾನೇಜರ್‌ (Senoir Manager) ಹುದ್ದೆಗೆ 39 ವರ್ಷ,
ಅಸಿಸ್ಟಂಟ್‌ ಮ್ಯಾನೇಜರ್ ಹುದ್ದೆಗೆ 30 ವರ್ಷ,
ಇತರೆ ಹುದ್ದೆಗಳಿಗೆ 27 ವರ್ಷ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ.

ಪ್ರಮುಖ ದಿನಾಂಕಗಳು
ಬಿಇಎಂಎಲ್‌ (BEML) ಹುದ್ದೆಗಳ ಅಧಿಸೂಚನೆ ಬಿಡುಗಡೆ ದಿನಾಂಕ : 03-11-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 06-11-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-11-2023 ರ ಸಂಜೆ 06 ಗಂಟೆವರೆಗೆ.

ಅಪ್ಲಿಕೇಶನ್‌ ಶುಲ್ಕ ಮಾಹಿತಿ:
ಸಾಮಾನ್ಯ /EWS/ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.500.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಇದನ್ನು ಓದಿ: ಬಿಎಂಟಿಸಿ ಕಲೆಕ್ಷನ್​​ಗೆ ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಯಿಂದ ಭಾರಿ ಹೊಡೆತ

ಭವ್ಯಶ್ರೀ ಆರ್. ಜೆ

Exit mobile version