ಅರಿಶಿಣ ಕಾಫೀ ಕುಡಿಯಿರಿ ಅನಾರೋಗ್ಯದಿಂದ ದೂರವಿರಿ

ಜಾಸ್ತಿ ಕಾಫಿ(Benefits of turmeric coffee) ಕುಡಿದು ಆರೋಗ್ಯ ಹಾಳು ಮಾಡ್ಕೋಬೇಡಿ,  ದೇಹದ ಉಷ್ಣಾಂಶ ಹೆಚ್ಚಾಗುವುದರ ಜೊತೆಗೆ ಕಾಫೀ ಚಟವಾಗಬಹುದು ಎಂದು ಹೇಳುವುದನ್ನು ಕೇಳಿರಬಹುದು.

ಆದರೆ ಅರಿಶಿನ ಕಾಫಿ(Turmeric coffee) ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಯಾರಿಗೂ ತಿಳಿದಿಲ್ಲ.

ಈ ಕಾಫಿಯಲ್ಲಿ ಅರಿಶಿನ ಇರುವುದರಿಂದ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕಗಳಿಂದ ಸಮೃದ್ಧವಾಗಿದೆ. ಹಾಗೆಯೇ ಆ್ಯಂಟಿಆಕ್ಸಿಡೆಂಟ್(Antioxident) ಗುಣಗಳು ಯಕೃತ್ತನ್ನು ನಿರ್ವಿಷಗೊಳಿಸುವ ಕೆಲಸ ಮಾಡುತ್ತದೆ.

ಇದರಿಂದ ಜೀರ್ಣಕ್ರಿಯೆ ಪ್ರಕ್ರಿಯೆಗೆ(Digestive process)  ಸಹಾಯಕಾರಿಯಾಗಿದೆ. ಹಾಗೆಯೇ, ದೇಹವನ್ನು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ.

ಅರಿಶಿನ ಕಾಫಿಯನ್ನು ತಯಾರಿಸುವುದು ಹೇಗೆ??

ಅರಿಶಿನ ಕಾಫಿಯನ್ನು ಅತ್ಯಂತ ಸುಲಭವಾಗಿ ತಯಾರಿಸಬಹುದು, ಮೊದಲು ಹಾಲಿಗೆ ಸ್ವಲ್ಪ ಬೆಲ್ಲ(Benefits of turmeric coffee) ಅಥವಾ ಸಕ್ಕರೆಯನ್ನು ಸೇರಿಸಿ ಕುದಿಸಬೇಕು ನಂತರ ಅದಕ್ಕೆ ಕಾಫಿ ಪೌಡರ್ ಸೇರಿಸಿ ಬಿಸಿ ಮಾಡಿಕೊಳ್ಳಬೇಕು. ನಂತರ ಅದಕ್ಕೆ  ಅರಿಶಿನವನ್ನು ಬೆರೆಸಿ ಕುದಿಸಿದರೆ,ಅರಿಶಿನ ಕಾಫೀ ಸಿದ್ಧವಾಗುತ್ತದೆ.

ಈ ಕಾಫಿಯನ್ನು ಆರಾಮವಾಗಿ ಕುಡಿಯಬಹುದು, ಇದು ಆರೋಗ್ಯಕ್ಕೂ ಕೂಡ ತುಂಬಾ ಉಪಯೋಗಕಾರಿ.

ಅರಿಶಿನ ಕಾಫಿಯಿಂದ ಅನೇಕ ಪ್ರಯೋಜನಗಳಿವೆ ಅವುಗಳೆಂದರೆ,

ಆ್ಯಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ

ಅರಿಶಿನ ಕಾಫಿ ಆಮ್ಲೀಯತೆಯನ್ನು(Acidity) ಸಂಪೂರ್ಣವಾಗಿ ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಹಾಗೆಯೇ ಆಮ್ಲೀಯ pH ಅನ್ನು ಕಡಿಮೆಗೊಳಿಸುತ್ತದೆ.

ಮತ್ತು ಆಮ್ಲೀಯತೆಯ ಸಮಸ್ಯೆಯನ್ನು ಶಾಶ್ವತವಾಗಿ ತೆಗೆದುಹಾಕುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸುತ್ತದೆ. ಈ ಕಾರಣದಿಂದಾಗಿ, ದೇಹವು

ಅರಿಶಿನದ ಪ್ರಯೋಜನಗಳನ್ನು ನೇರವಾಗಿ ಪಡೆದುಕೊಂಡು ಆರೋಗ್ಯದ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

ಉರಿಯೂತವನ್ನು ಕಡಿಮೆ ಮಾಡುತ್ತದೆ

ಅರಿಶಿನದ ಕಾಫಿ ಹೊಟ್ಟೆಯ ಊತವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಕರ್ಕ್ಯುಮಿನ್ ಹೊಟ್ಟೆಯ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಜೀರ್ಣಕ್ರಿಯೆಯನ್ನು ಗುಣಪಡಿಸುತ್ತದೆ.

ಹಾಗೆಯೇ ಇದು ಅನೇಕ ಕಾಯಿಲೆಗಳನ್ನು,ತೊಡೆದುಹಾಕುತ್ತದೆ. ಕಾಫಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಮೂಳೆಗಳು ಮತ್ತು ಕೀಲುಗಳ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಷ್ಟು ಮಾತ್ರವಲ್ಲದೆ ಮೂಳೆ ಅಥವಾ ಕೀಲುಗಳಲ್ಲಿ ನೋವು ಇರುವವರು ಈ  ಕಾಫಿ ಕುಡಿಯುವುದರಿಂದ ಸುಧಾರಿಸಬಹುದು.

ಇದನ್ನೂ ಓದಿ: https://vijayatimes.com/nitish-kumar-criticized-modi/

ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ

ಅರಿಶಿನ ಕಾಫಿಯನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು(Immunity) ಉತ್ತಮಗೊಳಿಸುತ್ತದೆ ಮತ್ತು ಅನೇಕ ರೀತಿಯ ಸೋಂಕುಗಳನ್ನು ತಡೆಯುತ್ತದೆ. ಈ ಎಲ್ಲಾ ಪ್ರಯೋಜನಗಳಿಗೆ ಅರಿಶಿನ ಕಾಫಿ ತುಂಬಾ ಸಹಾಯಕವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಕಾಫೀ ಕುಡಿಯುವುದು ಆರೋಗ್ಯಕ್ಕೆ  ಕೆಟ್ಟದು ಎನ್ನುವವರು ಒಮ್ಮೆ ಅರಿಶಿನ ಕಾಫಿಯನ್ನು ಸವಿದರೆ ಹೊಸ ಅನುಭವದ ಜೊತೆಗೆ ಆರೋಗ್ಯವನ್ನು ಹತೋಟಿಯಲ್ಲಿ  ಇಟ್ಟುಕೊಳ್ಳಬಹುದು.

 

Exit mobile version