ಬೆಂಗಳೂರಿನ 172 ಪ್ರಮುಖ ಬಡಾವಣೆಗಳಲ್ಲಿ ಕಾವೇರಿ ನೀರು ಸರಬರಾಜು ಸ್ಥಗಿತ!

ಬೆಂಗಳೂರು ನಗರಕ್ಕೆ ಅತೀ ಮುಖ್ಯವಾಗಿ ಪ್ರತಿದಿನ ಸರಬರಾಜು ಆಗುವುದು ಕಾವೇರಿ ನೀರು. ಜನರಿಗೆ ಕುಡಿಯಲು, ಬಳಸಲು ಅಗತ್ಯವಾಗಿ ಬೇಕಿರುವ ಕಾವೇರಿ ನೀರು ನಗರದ 172 ಬಡಾವಣೆಗಳಲ್ಲಿ ಸರಬರಾಜು ನಿಲ್ಲಿಸಲಾಗುವುದು!

ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯುವುದಾದರೆ. ಬೆಂಗಳೂರಿಗೆ ಪ್ರತಿನಿತ್ಯ ಸರಬರಾಜಾಗುವ ಕಾವೇರಿ ನೀರು ಮೂರು ಮತ್ತು ನಾಲ್ಕನೆಯ ಹಂತದ ಘಟಕದಿಂದ ಸರಬರಾಜು ಆಗುವ ಸ್ಥಳಗಳಲ್ಲಿ ಅನೇಕ ರೀತಿಯ ಕಾಮಗಾರಿ ಕೆಲಸಗಳನ್ನು ಪ್ರಾರಂಭಿಸಬೇಕಿದೆ. ಈ ಕುರಿತು ಮಾತನಾಡಿರುವ ಬೆಂಗಳೂರು ಜಲಮಂಡಳಿ(Bengaluru cauvery water supply) ಪತ್ರಿಕಾ ಪ್ರಕಟಣೆಯಲ್ಲಿ ನಾವು ಮಾರ್ಚ್ 03ನೇ ದಿನದಂದು ಬೆಳಿಗ್ಗೆ ೬ ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೂ ನೀರು ಪೂರೈಕೆಯಲ್ಲಿ ತೊಡಕಾಗಲಿದೆ.

ಜನಸಾಮಾನ್ಯರು ಸ್ವಲ್ಪ ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾರೆ. ಬೆಂಗಳೂರಿನ ಜಲಮಂಡಳಿಯ 3ನೇ ಹಂತದ ಜಲಶುದ್ದೀಕರಣದ ಘಟಕದ ಕಡೆ ನೀರಿನ ಹರಿವನ್ನು ಸುಲಭಗೊಳಿಸಲು ಬೃಹತ್ ಲೀಟರ್ ಟ್ಯಾಂಕ್ ಅನ್ನು ಜಲಶುದ್ದೀಕರಣದ ಕಾರಣಕ್ಕಾಗಿ ಕಾಮಗಾರಿ ಮಾಡಲಾಗುವುದು. ಈ ಕಾರಣದಿಂದ ನೀರಿನ ಪೂರೈಕೆಯಲ್ಲಿ ತೊಂದರೆ ಎದರುರಾಗಲಿದೆ. ಯಾವ ಬಡಾವಣೆಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬುದು ಇಲ್ಲಿದೆ.

ಹೈಗ್ರೌಂಡ್ಸ್ ವಸಂತ ನಗರ, ಗಾಂಧಿ ನಗರ, ಸಂಪಂಗಿರಾಮ ನಗರ, ಲಾಲ್ ಬಾಗ್, ಟೌನ್ಹಾಲ್, ಇನ್ಫಾಂಟ್ರಿ ರಸ್ತೆ, ಶಿವಾಜಿನಗರ, ಸುಂಕಲ್ ಪೇಟೆ, ಕಬ್ಬನ್ ಪೇಟೆ, ಕುಂಬಾರಪೇಟೆ, ಕಾಟನ್ ಪೇಟೆ, ಚಿಕ್ಕಪೇಟೆ, ಭಾರತಿನಗರ, ಸೇಂಟ್ ಜಾನ್ ರಸ್ತೆ, ಫ್ರೇಜರ್ ಟೌನ್, ಎಂಎಂ ರಸ್ತೆ, ಬ್ಯಾಡರಹಳ್ಳಿ, ನಾಗವಾರ, ಸಮಾಧಾನ ನಗರ, ಕೋಲ್ಸ್ ರಸ್ತೆ, ನೇತಾಜಿ ರಸ್ತೆ, ಕಾಕ್ಸ್ ಟೌನ್, ವಿವೇಕಾನಂದನಗರ, ಮಾರುತಿ ಕಾಲೊನಿ, ಪಿಎನ್ ಟಿ ಕಾಲೊನಿ, ಡಿಜೆ ಹಳ್ಳಿ, ನಾಗವಾರ, ಪಿಳ್ಳಣ್ಣ ಗಾರ್ಡನ್ 1,2 ಮತ್ತು 3 ಹಂತ, ಲಿಂಗರಾಜಪುರ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರಿನ ಜಲಮಂಡಳಿ ಮಾಹಿತಿ ನೀಡಿದೆ.
Exit mobile version