ಕಟ್ಟಡ ನೆಲಸಮ ಮಾಡಲು ಮುಂದಾದರೆ ಬೆಂಕಿ ಹಚ್ಚಿಕೊಂಡು ಸಾಯ್ತಿವಿ ; ಕೆ.ಆರ್ ಪುರಂನಲ್ಲಿ ದಂಪತಿಗಳ ಹೈಡ್ರಾಮಾ

Bengaluru : ನಗರದ ಒಳಚರಂಡಿಗೆ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವು ಮಾಡುವ ಕಾರ್ಯಾಚರಣೆಯನ್ನು ಪೌರಕಾರ್ಮಿಕರು ಮುಂದುವರಿಸಿದ್ದು, ಬೆಂಗಳೂರಿನ(Bengaluru) ಕೆ.ಆರ್ ಪುರಂ(KR Puram) ನಗರಕ್ಕೆ ತೆರಳಿದ ಜೆಸಿಬಿ ತಮ್ಮ ಮನೆಯನ್ನು ಕೆಡವಲು ಮುಂದಾಗಿದ್ದಕ್ಕೆ, ದಂಪತಿಗಳು(Bengaluru Couple High Drama) ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ಮನೆ ಕೆಡವಿದರೆ ಬೆಂಕಿ ಹಚ್ಚಿಕೊಂಡು ಸಾಯುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಒಂದು ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗಿದೆ.

ಬಿಬಿಎಂಪಿ(BBMP) ನಗರದ ಈಶಾನ್ಯ ಭಾಗದಲ್ಲಿರುವ ಕೆ.ಆರ್. ಪುರಂನಲ್ಲಿ ನೆಲಸಮ ನಡೆಸುತ್ತಿದ್ದಾಗ ಕಾರ್ಯಾಚರಣೆ ತಂಡವನ್ನು ದಂಪತಿಗಳು ಅಡ್ಡಿಪಡಿಸಿದ್ದಾರೆ.

ಜೆಸಿಬಿ ಕಟ್ಟಡ ಕೆಡವಲು ಮುಂದಾದಾಗ, ಸೋನಾ ಸೇನ್ ಮತ್ತು ಆಕೆಯ ಪತಿ ಸುನೀಲ್ ಸಿಂಗ್ ಅವರು ಬೆಂಕಿ ಹಚ್ಚಿಕೊಳ್ಳುತ್ತೇವೆ ಎಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ, ನೀವು ನಮ್ಮ ಮನೆ ಕೆಡವಲು(Bengaluru Couple High Drama) ಮುಂದೆ ಬಂದರೆ ನಾವು ಬೆಂಕಿ ಹಚ್ಚಿಕೊಳ್ಳುತ್ತೀವಿ ಎಂದು ಹೆದರಿಸಿದ್ದಾರೆ.

ಇದನ್ನೂ ಓದಿ : https://vijayatimes.com/dhoni-entertainment-has-started/

ದಂಪತಿಗಳು ತಮ್ಮ ಮನೆಯ ಹೊರಗಿನ ಕಾಂಪೊಂಡ್ ಗೋಡೆಯ ಮುಂದೆ ನಿಂತು ಬೆದರಿಕೆ ಹಾಕಿದ್ದಾರೆ.

ಸ್ಥಳೀಯ ಪೊಲೀಸರು ಮತ್ತು ನೆರೆಹೊರೆಯವರು ಅವರನ್ನು ಹಿಡಿದು ಮೇಲಕ್ಕೆ ಎಳೆಯಲು ಪ್ರಯತ್ನಿಸಿದಾಗ ಅವರು ತಮ್ಮ ಮೇಲೆ ಪೆಟ್ರೋಲ್ ಸುರಿದುಕೊಂಡಿರುವುದು ಕಂಡುಬಂದಿದೆ. ಬೆಂಕಿ ಹಚ್ಚಿಕೊಳ್ಳಲು ಬೆಂಕಿ ಪೊಟ್ಟಣ ತೆಗೆದಾಗ ಪೊಲೀಸರು ದಂಪತಿಯ ಮೇಲೆ ನೀರನ್ನು ಎರಚಿ ಅವರನ್ನು ರಕ್ಷಿಸಿದ್ದಾರೆ.

https://youtu.be/B17BlX9yaF8

ನೆರೆಹೊರೆಯವರು ಮತ್ತು ಇತರರು ದಂಪತಿಗಳಿಗೆ ಈ ರೀತಿ ದುಡುಕಿ ನಿರ್ಧಾರ ಕೈಗೊಳ್ಳಬೇಡಿ ಎಂದು ದಂಪತಿಗೆ ಹೇಳಿದ್ದಾರೆ. ಬಳಿಕ ಮನೆ ಕೆಡವಲು ಬಂದಿದ್ದ ನಾಗರಿಕ ಅಧಿಕಾರಿಗಳಿಗೆ ದಂಪತಿ ಪರವಾಗಿ ಡೆಮಾಲಿಷನ್(Demolition) ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/top-economist-pierre-olivier-gourinchas/

ಆಡಳಿತವು ನಿರಾಶ್ರಿತರನ್ನು ಬಿಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ದಂಪತಿಗಳು, ತಮ್ಮ ಮನೆ ಅಕ್ರಮವಾಗಿಲ್ಲ ಎಂದು ಸಾಬೀತುಪಡಿಸಲು ತಮ್ಮ ಬಳಿ ದಾಖಲೆಗಳಿವೆ ಎಂದು ಒತ್ತಿ ಹೇಳಿದ್ದಾರೆ. ಆದರೆ, ನೀರಿನ ಚರಂಡಿಯ ಮೇಲೆ ಭಾಗಶಃ ನಿರ್ಮಿಸಲಾದ ಪ್ರದೇಶದಲ್ಲಿನ ಆರು ಮನೆಗಳಲ್ಲಿ ದಂಪತಿಗಳ ಮನೆಯೂ ಒಂದಾಗಿದೆ ಎಂದು ನಾಗರಿಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Exit mobile version