Visit Channel

ಟೋಯಿಂಗ್ ಸಿಬ್ಬಂದಿಗಳಿಗೂ ಇದೆ ಸಾಕಷ್ಟು ನಿಯಮಗಳು, ಪಾಲಿಸುವವರು ಯಾರಿಲ್ಲಿ ?

maxresdefault
  • ಪ್ರೀತಮ್ ಹೆಬ್ಬಾರ್

ಒಂದೆಡೆ ರಾಜ್ಯ ರಾಜಧಾನಿಯಲ್ಲಿ ಟೋಯಿಂಗ್ ಸಿಬ್ಬಂದಿಯ ಮೇಲೆ ಹಲ್ಲೆ ಹೆಚ್ಚಾಗುತ್ತಿದೆ ಇದು ಕಾನೂನು ಬಾಹಿರ ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದವರ ಮೇಲೆ ಸಿ ಕ್ಯಾಟಗರಿ  ರೌಡಿ ಪಟ್ಟಿ ಜಾರಿಗೊಳಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಹಾಗಂದ ಮಾತ್ರಕ್ಕೆ ಟೋಯಿಂಗ್ ಸಿಬ್ಬಂದಿಗಳು ಮಾಡುವುದು ಎಲ್ಲವೂ ಸರಿಯೇ ಅವರಿಗೂ ಕೂಡ ಅವರದೆ ಆದ ಕಾನೂನು ನಿಯಮಗಳು ಇಲ್ಲವೇ ? ಅದನ್ನು ಅವರು ಎಷ್ಟರ ಮಟ್ಟಿಗೆ ಪಾಲನೆ ಮಾಡುತ್ತಿದ್ದಾರೆ ಹಾಗೂ ಅವರ ಮಾಡುವ ಕೆಲವು ತಪ್ಪು ಕೆಲಸಗಳಿಂದಾಗಿಯೇ ಅವರ ಮೇಲೆ ಕೆಲವು ಸಾರ್ವಜನಿಕರು ಕೂಡ ದ್ವೇಷ ಸಾಧಿಸುತ್ತಿದ್ದಾರೆ ಎಂಬುವುದು ಕೂಡ ಅಷ್ಟೇ ಸತ್ಯ.

ಕೆಲವು ದಿನಗಳ ಹಿಂದೆ ಇಂದಿರಾ ನಗರದಲ್ಲಿ ಟೋಯಿಂಗ್ ಸಿಬ್ಬಂದಗಳ ಮೇಲೆ ಹಲ್ಲೆ ನಡೆದಿತ್ತು ಅದಕ್ಕೂ ಮೊದಲು ಯಲಹಂಕದಲ್ಲೂ ಕೂಡ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದಿತ್ತು. ಹಲ್ಲೆ ನಡೆಸಿದವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದರು. ಹಾಗದರೆ ಟೋಯಿಂಗ್ ಸಿಬ್ಬದಿಂಗೂ ಕೂಡ ಹಲವು ನಿಯಮಗಳಿವೆ ಆ ನಿಯಮವನ್ನು ಪಾಲಿಸದ ಸಿಬ್ಬಂದಿಗಳ ವಿರುದ್ದ ಯಾರು ಕ್ರಮ ಕೈಗೊಳ್ಳುತ್ತಾರೆ?  

ಸಾರ್ವಜನಿಕರಿಗೆ ಬೆಂಗಳೂರಿನಲ್ಲಿ ಟೋಯಿಂಗ್ ಅವರ ಕಿರಿಕಿರಿ ಬಹಳವಾಗುತ್ತಿದೆ.

ಬೆಂಗಳೂರಿನಲ್ಲಿ ಕೆಲವೆಡೆ ಗಾಡಿ ನಿಲ್ಲಿಸಲು ಸಮರ್ಪಕವಾದ ಸ್ಥಳಾವಾಕಾಶವಿಲ್ಲ ಇದನ್ನು  ಬಂಡವಾಳ ಮಾಡಿಕೊಂಡಿರುವ ಟೋಯಿಂಗ್ ಸಿಬ್ಬಂದಿಗಳು ಯಾರು ಯಾವ ಪರಿಸ್ಥಿತಿಯಲ್ಲಿಇರುತ್ತಾರೋ ಗೊತ್ತಿರುವುದಿಲ್ಲ, ಅವರ ಬಳಿ ಹಣವಿರುವುದೋ ಇಲ್ಲವೋ ಅವರು ಯಾವ ತುರ್ತು ಪರಿಸ್ಥಿತಿಯಲ್ಲಿ ಇರುತ್ತಾರೋ ಎಂಬ ಯಾವ ವಿಷಯಗಳನ್ನು ಲೆಕ್ಕಿಸದೆ ಟೋಯಿಂಗ್ ಮಾಡುವುದೇ ಅವರ ಕೆಲಸವಾಗಿದೆ. ದಂಡ ಹಾಕುವುದು ಮಾತ್ರವಲ್ಲದೆ  ಗಾಡಿಗಳಿಗೆ ಸ್ಕ್ರಾಚ್ ಕೂಡ ಮಾಡುತ್ತಾರೆ. ಅವರು ಮಾಡುವ ಇಂತಹ ಅಚಾತುರ್ಯಕ್ಕೆ  ಯಾರು ಹೊಣೆಯಾಗುತ್ತಾರೆ ಎಂಬುವುದುನ್ನು ಟೋಯಿಂಗ್‌ನವರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇಂತಹ ಹಗಲು ದರೋಡೆಯಿಂದ ಸಾರ್ವಜನಿಕರ ಹತಾಶೆಯಾಗಿದ್ದಾರೆ.  ಎಲ್ಲ ಕಡೆಯೂ ನೋ ಪಾರ್ಕಿಂಗ್  ಬೋರ್ಡ್ ಹಾಕಲು ಟ್ರಾಫಿಕ್ ಪೋಲಿಸರಿಗೆ ಸಾಧ್ಯವಿಲ್ಲವೆಂಬುವುದು ಪೊಲೀಸರ ವಾದ, ಹಾಗದರೆ ಬೋರ್ಡ್ ಹಾಕದೆ ಇರುವ ಕಡೆಗಳಿಂದ  ಟೋಯಿಂಗ್ ಸಿಬ್ಬಂದಿಗಳು ಅಲ್ಲಿನ ವಾಹನಗಳನ್ನು ಎತ್ತಿಕೊಂಡು ಹೋಗುವುದು ಎಷ್ಟು ಸರಿ ? ಇವರಿಗೆ ಬೋರ್ಡ್ ಹಾಕಲಿಕ್ಕೆ ಹಣದ ಕೊರತೆಯಾದರೆ  ಸಾರ್ವಜನಿಕರಿಂದ  ವಸೂಲಿ ಮಾಡುವ ಹಣ ಯಾರ ಜೇಬಿಗೆ ಹೋಗುತ್ತದೆ ಎಂಬವುದು ಆ ಸರ್ಕಾರಿ ಅಧಿಕಾರಿಗಳೇ ಬಹಿರಂಗ ಪಡಿಸಬೇಕಾಗಿದೆ.

ಟೋಯಿಂಗ್‌ ಸಿಬ್ಬಂದಿಗೆ ಅವರದೆ ಆದ ಕೆಲವಷ್ಟು ನಿಯಮಗಳಿವೆ. ಆ ನಿಯಮಗಳನ್ನು ಅವರು ಎಷ್ಟು ಪಾಲನೆ ಮಾಡುತ್ತಿದ್ದಾರೆ ಎಂಬುವುದು ಸದ್ಯಕ್ಕಿರುವು ಪ್ರಶ್ನೆ.

  • ನೋ ಪಾರ್ಕಿಂಗ್‌ನಲ್ಲಿ ನಿಂತಿರುವ ವಾಹನಗಳನ್ನು ಟೋಯಿಂಗ್‌ ಮಾಡುವುದಕ್ಕಿಂತ ಮುಂಚೆ ಅದರ ಚಿತ್ರೀಕರಣ ಮಾಡಬೇಕು
  • ವಾಹನಗಳನ್ನು ಟೋಯಿಂಗ್ ಮಾಡಲು ಟೋಯಿಂಗ್‌ ವಾಹನದಲ್ಲಿ ಕನಷ್ಠ ಒಬ್ಬ ಎಎಸ್‌ಐ ಆದರೂ ಇರಲೇಬೇಕು
  • ವಾಹನವನ್ನು ಟೋಯಿಂಗ್‌ ವಾಹನಕ್ಕೆ ತುಂಬುವ ಮೊದಲು ಎಎಸ್‌ಐ ಆ ವಾಹನದ ಸಂಖ್ಯೆಯನ್ನು ಧ್ವನಿವರ್ಧಕ ಮೂಲಕ ಘೋಷಣೆ ಮಾಡಬೇಕು. ಘೋಷಣೆ ಮಾಡಿ 5ನಿಮಿಷವಾದರೂ ಆ ವಾಹನದ ಮಾಲೀಕರು ವಾಹನವನ್ನು ತೆರವುಗೊಳಿಸದೆ ಇದ್ದರೆ ಆ ವಾಹನವನ್ನು ಟೋಯಿಂಗ್‌ ಮಾಡಬಹುದು
  • ಟೋಯಿಂಗ್ ಮಾಡುವ ಸಂದರ್ಭದಲ್ಲಿ ವಾಹನಕ್ಕೆ ಯಾವುದೇ ಹಾನಿಯಾದರೂ ಅದಕ್ಕೆ ಟೋಯಿಂಗ್‌ ಏಜನ್ಸಿಯವರೇ ಹೊಣೆಯಾಗಿರುತ್ತಾರೆ.
  • ಟೋಯಿಂಗ್‌ ಮಾಡುವ ಮೊದಲು ಆ ವಾಹನದ ಸಂಪೂರ್ಣ ಚಿತ್ರೀಕರಣ ಮಾಡಿ ನಂತರ ಟೋಯಿಂಗ್ ಮಾಡಬೇಕು.

ಟೋಯಿಂಗ್ ಮಾಡಬೇಕಾದರೆ ಹೀಗೆ ಸಾಕಷ್ಟು ನಿಯಮಗಳಿದ್ದು ಈ ಎಲ್ಲಾ ನಿಯಮಗಳಲ್ಲಿ ಅವರು ಎಷ್ಟು ನಿಯಮಗಳನ್ನು ಪಾಲಿಸುತ್ತಿದ್ದಾರೆ ಮತ್ತು ನಗರದಲ್ಲಿ ಎಷ್ಟು ಕಡೆಗಳಲ್ಲಿ ನೋಪಾರ್ಕಿಂಗ್ ಬೋರ್ಡ್‌ಗಳಿವೆ ಎಂಬುವುದನ್ನು ಇಲಾಖೆಯೇ ಸ್ಪಷ್ಟಪಡಿಸಬೇಕಿದೆ.

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.