ಪೋಷಕರೇ ಎಚ್ಚರ: ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಂಗನಬಾವುವಿನ ಕಡೆ ಇರಲಿ ಗಮನ

Bengaluru: ಚಳಿಗಾಲ ಆರಂಭವಾದರೆ ಸಾಕು ದೊಡ್ಡವರಿಂದ ಹಿಡಿದು ಚಿಕ್ಕವರವರೆಗೂ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ರಾಜ್ಯದಲ್ಲಿ ಮಕ್ಕಳು ಋುತುಮಾನಾಧಾರಿತ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಆದರೆ ಈ ವರ್ಷ ಹೆಚ್ಚಿನ ಮಕ್ಕಳು ಮಂಫ್ಸ್‌ ಸೋಂಕಿಗೆ (Mumps Infection) ತುತ್ತಾಗಿದ್ದಾರೆ.

ಇದು ಸಾಂಕ್ರಾಮಿಕ ವೈರಲ್‌ ಸೋಂಕಾಗಿದ್ದು (Viral Infection), ಮೊದಲನೆಯದಾಗಿ ಲಾಲಾರಸ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ. ಉಸಿರಾಟದ ಹನಿಗಳು ಅಥವಾ ಸೋಂಕಿತ ಲಾಲಾರಸದ ನೇರ ಸಂಪರ್ಕದ ಮೂಲಕ ವೈರಸ್‌ ವಿಶಿಷ್ಟವಾಗಿ ಹರಡುತ್ತದೆ. ವೈಯಕ್ತಿಕ ಸಂಪರ್ಕದಿಂದಲೂ ಈ ಸೋಂಕು ಹರಡಬಹುದು ಎಂದು ಮಕ್ಕಳ ತಜ್ಞರು ಹೇಳುತ್ತಾರೆ. ಈ ಸೋಂಕನ್ನು ಕೆಪ್ಪಟೆ ಅಥವಾ ಮಂಗನಬಾವು ಎಂದು ಕರೆಯುತ್ತಾರೆ.

ಈ ಸೋಂಕಿಗೆ ಹೆಚ್ಚಿನ ಮಕ್ಕಳು ಬಲಿಯಾಗುತ್ತಿದ್ದು, ಇಂದ್ರ ಧನುಷ್‌ ಲಸಿಕೆ (Indra Dhanush Vaccine)ಯಲ್ಲಿ ಎಂಆರ್‌ ಲಸಿಕೆ ನೀಡಲಾಗುತ್ತದೆ. ಸದ್ಯ ಮಕ್ಕಳಿಗೆ ನೀಡುವ ಇಂದ್ರ ಧನುಷ್‌ ಲಸಿಕಾ ಅಭಿಯಾನದಲ್ಲಿ ಮಂಫ್ಸ್‌ (ಕೆಪ್ಪಟೆ ಅಥವಾ ಮಂಗನ ಬಾವು) ಕಾಯಿಲೆ ನಿವಾರಣೆಗೆ ಬೇಕಾದ ಲಸಿಕೆ ನೀಡುತ್ತಿಲ್ಲ. ಈ ಲಸಿಕೆ ದಡಾರ ಮತ್ತು ರುಬೆಲ್ಲಾ ಕಾಯಿಲೆ ಗುಣಪಡಿಸುತ್ತದೆ.

ಎಂಆರ್‌ ಲಸಿಕೆ ಬದಲಿಗೆ ಎಎಂಆರ್‌ ಲಸಿಕೆ (MMR Vaccine) ನೀಡಿದಲ್ಲಿ ಮಂಫ್ಸ್‌ನಿಂದ ಮಕ್ಕಳು ಪಾರಾಗಬಹುದು ಎಂಎಂಆರ್‌ ನೀಡುವುದರಿಂದ ದಡಾರ ಮತ್ತು ರುಬೆಲ್ಲಾ ಕಾಯಿಲೆ ಜೊತೆ ಮಂಫ್ಸ್‌ ಕಾಯಿಲೆಗೂ ಔಷಧ ಸಿಗುತ್ತದೆ ಎನ್ನುತ್ತಾರೆ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಹಾಗೂ ಮಕ್ಕಳ ತಜ್ಞ ಡಾ. ಎಸ್‌. ಶ್ರೀನಿವಾಸ್‌ (Dr. S Srinivas)

ಒಂದು ಅಥವಾ ಎರಡೂ ಪರೋಟಿಡ್‌ ಗ್ರಂಥಿಗಳ (Parotid Gland) ಊತ ಈ ಕೆಪ್ಪಟೆಯ ವಿಶಿಷ್ಟ ಲಕ್ಷಣವಾಗಿದ್ದು, ಇದರಿಂದಾಗಿ ಕೆನ್ನೆ ಊದಿಕೊಳ್ಳುವುದು ಇತರ ಸಾಮಾನ್ಯ ರೋಗ ಲಕ್ಷಣಗಳು ಜ್ವರ, ತಲೆ ನೋವು, ಸ್ನಾಯು ನೋವು, ಆಯಾಸ (Fever, Headache, Muscle Pain, Fatigue) ಮತ್ತು ನುಂಗಲು ತೊಂದರೆಯಾಗುವುದು. ಇಂತಹ ರೋಗ ಲಕ್ಷಣಗಳು ಇತರ ಉಸಿರಾಟದ ಸೋಂಕುಗಳೊಂದಿಗೆ ಕಾಣಿಸಿಕೊಳ್ಳಬಹುದು..

ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಶೀತ, ಜ್ವರ, ಕೆಮ್ಮು, ಅಲರ್ಜಿ (Cough, Allergy) ಜೊತೆ ಈ ಮಂಫ್ಸ್‌ ಕೂಡ ಹೆಚ್ಚಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಇದು ಗಂಭೀರವಾದ ಕಾಯಿಲೆಯಾಗುವುದಿಲ್ಲ ಒಂದೆರಡು ದಿನದಲ್ಲೇ ಕಡಿಮೆಯಾಗುತ್ತದೆ’ ಎಂದು ಮಕ್ಕಳ ತಜ್ಞರು ಹೇಳಿದ್ದಾರೆ.

ಭವ್ಯಶ್ರೀ ಆರ್ ಜೆ

Exit mobile version