ಆನ್ಲೈನ್ ವಂಚಕರಿದ್ದಾರೆ ಹುಷಾರ್: ರಿಮೋಟ್ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಲು ಹೋಗಿ 11 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆ

ರಿಮೋಟ್ ಆಕ್ಸೆಸ್ ಸಾಫ್ಟ್ವೇರ್ (Remote Access Software) ಇನ್ಸ್ಟಾಲ್ ಮಾಡಲು ಹೋಗಿ 11 ಲಕ್ಷ ರೂಪಾಯಿ ಕಳೆದುಕೊಂಡ (Beware of online Scammers) ಅಮಾಯಕ ಮಹಿಳೆ.


ಈ ರೀತಿಯ ಕೆಲಸ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆಗಳು ಹೆಚ್ಚಾಗುತ್ತಿದ್ದು, ಅಮಾಯಕರ ಬಳಿ ಕ್ಷಣಾರ್ಧದಲ್ಲಿ ಕಣ್ಮುಚ್ಚಿ ಬಿಡುವಷ್ಟರಲ್ಲಿ ಹಣ

ಕದಿಯುವವರ (Beware of online Scammers) ಕಳ್ಳರ ಸಂಖ್ಯೆ ಜಾಸ್ತಿಯಾಗಿದೆ.

ಇದೀಗ ಅಮಾಯಕಿಯೊಬ್ಬಳು ಆನ್ಲೈನ್ (Online) ವಂಚನೆಯಿಂದ ಮೋಸ ಹೋಗಿದ್ದಾಳೆ. ಮೋಸ ಹೋದ ಮಹಿಳೆ ಮುಂಬೈ ಮೂಲದವಳು ಎಂದು ತಿಳಿದು ಬಂಡಿದ್ದು, ತನ್ನ ಬ್ಯಾಂಕ್ ಖಾತೆಯ

ಆನ್ಲೈನ್ ಸ್ಟೇಟ್ಮೆಂಟ್ (Statement) ತೆಗೆಯಲು ಸಹಾಯ ಪಡೆಯಲು ಪ್ರಯತ್ನಿಸಿದಾಗ ಈ ದೊಡ್ಡ ಮಟ್ಟದ ಹಣವನ್ನು ಕಳೆದುಕೊಳ್ಳಬೇಕಾದ ಸಂಕಷ್ಟ ಬಂದಿತು. ಅವಳು ಕಷ್ಟಪಟ್ಟು ಕೂಡಿಟ್ಟಿದ್ದ

ಬರಬರೆ ಹನ್ನೊಂದು ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾಳೆ.

ಈ ಮಹಿಳೆಯು ಮೊಬೈಲ್ (Mobile) ಫೋನ್ನಲ್ಲಿ ರಿಮೋಟ್ ಆಕ್ಸಸ್ ಸಾಫ್ಟ್ವೇರ್ ಇನ್ಸ್ಟಾಪ್ ಮಾಡಿಸುವ ನೆಪದಲ್ಲಿ ವಂಚಕರು ಬ್ಯಾಂಕ್ ಖಾತೆಗೆ ಕನ್ನ ಹಾಕಿ ಹಣದೋಚಿದ್ದಾರೆ. ಜುಲೈ 28

ಘಟನೆ ನಡೆದಿದ್ದು, ಚತುಶ್ರುಂಗಿ ಪೊಲೀಸ್‌ನ ಇನ್ಸ್‌ಪೆಕ್ಟರ್ ಅಂಕುಶ್ ಚಿಂತಾಮನ್ . ಶನಿವಾರ ಎಫ್ ಐ ಆರ್ (FIR) ದಾಖಲಿಸಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದ ಮಹಿಳೆ ಜುಲೈ 28 ರಂದು ಬ್ಯಾಂಕ್ ನ ವೆಬ್ಸೈಟ್ಗೆ (Bank Website) ಭೇಟಿ ನೀಡುವ ಮೂಲಕ ತನ್ನ ಬ್ಯಾಂಕ್ ಖಾತೆ ಆನ್ಲೈನ್

ಸ್ಟೇಟ್ಮೆಂಟ್ ಪಡೆಯಲು ಪ್ರಯತ್ನಿಸಿದ್ದಾಳೆ ಆದರೆ ಸ್ಟೇಟ್ಮೆಂಟ್ ತೆಗೆಯಲು ಆಗಿರಲಿಲ್ಲ ಹೀಗಾಗಿ ಸಹಾಯವಾಣಿ ಸಂಖ್ಯೆಗಾಗಿ ಆನ್ಲೈನಲ್ಲಿ ಹುಡುಕಾಟ ನಡೆಸಿದ್ದರು ಎಂದು ಪೋಲಿಸ್ ಇನ್ಸ್ಪೆಕ್ಟರ್

ಹೇಳಿದ್ದಾರೆ. ಆನ್ಲೈನ್ ಸಹಾಯವಾಣಿ ಸಂಖ್ಯೆ ಹುಡುಕಿದಾಗ ಇವರಿಗೆ ಒಂದು ಸಂಖ್ಯೆ ಸಿಗುತ್ತದೆ.

ಕರೆ ಸ್ವೀಕರಿಸಿದ ಉರು ಸಹಾಯ ಮಾಡುವ ಬರಹಸೆ ನೀಡಿ ಮೊಬೈಲ್ ಫೋನ್ ನಂಬರ್ ರಿಮೋಟ್ ಆಕ್ಸಸ್ ಸಾಫ್ಟ್ವೇರ್ ಡೌನ್ಲೋಡ್ ಮಾಡುವಂತೆ ಕೇಳಿಕೊಂಡಿದ್ದು ಅಪರಿಚಿತನ ಮಾತನ್ನು ನಂಬಿ

ಆ ಸಾಫ್ಟ್ವೇರ್ ಅನ್ನು ಡೌನ್ಲೋಡ್ (Download) ಮಾಡಿ ಬ್ಯಾಂಕ್ ಖಾತೆಯ ಮಾಹಿತಿಯನ್ನು ಹಂಚಿಕೊಳ್ಳುತ್ತಾಳೆ ಮತ್ತು ಇದನ್ನು ತಿಳಿದ ವಂಚಕರು ಮತ್ತೊಮ್ಮೆ ಬ್ಯಾಂಕ್ ನ ವೆಬ್ಸೈಟ್ ಬೆಳಸಿ ಬ್ಯಾಂಕ್

ಖಾತೆ ಸ್ಟೇಟ್ಮೆಂಟ್ ಪಡೆಯಲು ಪ್ರಯತ್ನಿಸುವಂತೆ ವಿನಂತಿಸಿದರು.

ಈ ವಂಚಕರು ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಲಪಟಾಯಿಸಿದ್ದರು. ನಾವು ಆಕೆಯ ಬ್ಯಾಂಕ್ ಖಾತೆಯ ವಿವರಗಳನ್ನು ಮತ್ತು ಹಣವನ್ನು ವರ್ಗಾಯಿಸಿದ ಬ್ಯಾಂಕ್ (Bank) ಖಾತೆಯ

ವಿವರಗಳನ್ನು ಪಡೆದುಕೊಂಡಿದ್ದೇವೆ,ಹೆಚ್ಚಿನ ತನಿಖೆ ನಡೆಯುತ್ತದೆ’ ಎಂದು ಚತುಸ್ರಂಗಿ ಪೊಲೀಸ್ ನ ಸಬ್ ಇನ್ಸ್ಪೆಕ್ಟರ್ ಅಂಡ್ ಪೋಸ್ಟ್ ಚಿಂತಾಮಣಿ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ

(Times Of India) ವರದಿ ಮಾಡಿದೆ.

ಸುರಕ್ಷಿತವಾಗಿ ಹೇಗೆ ಇರುವುದು?
ಇಂತಹ ಮೋಸ ಮತ್ತು ವಚನಗಳಿಂದ ಪಾರಾಗುವುದು ಹೇಗೆ? ಬ್ಯಾಂಕ್ ಖಾತೆಯ ವೈಶವಾಗಿ ಯಾವುದೇ ಅಪರಿಚಿತ ಕರೆ ಬಂದರೂ ಮತ್ತು ಸಂದೇಶಗಳು ಬಂದರೆ ಅದಕ್ಕೆ ಸ್ಪಂದಿಸದೆ ಇರಬೇಕು

ಮತ್ತು ಮಾಹಿತಿಯನ್ನು ಹಂಚಿಕೊಳ್ಳಬಾರದು. ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಫೋನ್ ಮಾಡುವವರಿಗೆ ನಾವು ಒಟಿಪಿಯನ್ನು ಕಳಿಸಬಾರದು. ಬ್ಯಾಂಕ್ ಖಾತೆಯ ವಿಷಯದಲ್ಲಿ

ಯಾವುದೇ ರೀತಿಯ ಸಹಾಯಕ್ಕಾಗಿ ಅಧಿಕೃತ ವೆಬ್ಸೈಟ್ ಮತ್ತು ನಿಮ್ಮ ಬ್ಯಾಂಕ್ ನ ಸಂಬಂಧ

ವ್ಯವಸ್ಥಾಪಕರನ್ನು ಮಾತ್ರ ನಂಬಿರಿ.
ಅಧಿಕೃತ ವೆಬ್ ಸೈಟಲ್ಲಿರುವ (Website) ಸಹಾಯವಾಣಿಯ ಬಿಟ್ಟು ಯಾವುದೇ ಆನ್ಲೈನಲ್ಲಿ ಸಿಗುವ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಬಾರದು.


ನೀವು ಆನ್ಲೈನ್ ಬ್ಯಾಂಕಿಂಗ್ ನಲ್ಲಿ ಸಮಸ್ಯೆಗಳನ್ನು ಕಂಡರೆ ದಯವಿಟ್ಟು ಬ್ಯಾಂಕ್ ನ ಹತ್ತಿರ ಶಾಖೆಗೆ ಹೋಗಿ ಭೇಟಿ ನೀಡಬೇಕು. ಅಪರಿಚಿತ ವ್ಯಕ್ತಿಗಳು ಸೂಚಿಸುವ ಯಾವುದೇ ರಿಮೋಟ್ ಆಕ್ಸಿಸ್

ಸಾಫ್ಟ್ವೇರ್ಗೆ ಮೊರೆ ಹೋಗಬಾರದು. ವಿಶ್ವಾಸ ಸಹಾಯವಾಣಿಗೆ ಕರೆ ಮಾಡಿ ಮತ್ತು ಇ-ಮೇಲ್ ಸಂದೇಶವನ್ನು ಕಳುಹಿಸುತ್ತೀರಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.

ಇದನ್ನು ಓದಿ: ಪಠಾಣ್ ಕೋಟ್ ದಾಳಿಯ ರೂವಾರಿ ಶಾಹಿದ್ ಲತೀಫ್ ಪಾಕಿಸ್ತಾನದಲ್ಲಿ ಹತ್ಯೆ

Exit mobile version