Karnataka: ಕ್ಷೇತ್ರದಲ್ಲಿ ಕೆಲಸ ಮಾಡದೆ ಸೋತ ಬಳಿಕ ಈಗ ಕ್ಷೇತ್ರದ ಜನ ದಲಿತ ನಾಯಕನನ್ನು ಸೋಲಿಸಿದರು ಎಂದು ಅಳಲು ತೋಡುವ ಮಲ್ಲಿಕಾರ್ಜುನ್ ಖರ್ಗೆ(Mallikarjun Kharge) ಅವರು ಕಲಬುರಗಿಯಲ್ಲಿ ದಲಿತ ನಾಯಕರು ಎಂದರೆ ಅದು ತಮ್ಮ (BJP about Mallikarjun Kharge) ಕುಟುಂಬದವರು ಮಾತ್ರ ಎಂದುಕೊಂಡಂತಿದೆ.
ಅವರ ಬದಲು ಕೆಲಸ ಮಾಡುವ ಮತ್ತೊಬ್ಬ ನಾಯಕ ಆರಿಸಿ ಬಂದಿದ್ದು ಅವರಿಗೆ ಕಾಣಿಸಲೇ ಇಲ್ಲ ಎಂದು ಬಿಜೆಪಿ(BJP) ಲೇವಡಿ ಮಾಡಿದೆ.
ಈ ಕುರಿತು ಸರಣಿ ಟ್ವೀಟ್(Tweet) ಮಾಡಿ ಮಲ್ಲಿಕಾರ್ಜುನ್‌ಖರ್ಗೆ ವಿರುದ್ದ ವಾಗ್ದಾಳಿ ನಡೆಸಿರುವ ಬಿಜೆಪಿ.
ಇಂದಿಗೂ ಕಾಂಗ್ರೆಸ್(Congress) ಪಕ್ಷದಲ್ಲಿ ಕುಟುಂಬ ನಿಷ್ಠರಿಗಷ್ಟೇ ಅವಕಾಶವಿದೆ ಹೊರತು ಸ್ವತಂತ್ರ ಆಲೋಚನೆಗಳಿಗೆ ಅಲ್ಲ ಎಂಬುದು ಕಳೆದ ಎಐಸಿಸಿ ಚುನಾವಣೆಯಲ್ಲೇ ಗೊತ್ತಾಗಿದೆ.
ಅದರ ಪರಿಣಾಮವೇ ಮಲ್ಲಿಕಾರ್ಜುನ್‌ಖರ್ಗೆ ಅಧ್ಯಕ್ಷರಾಗಿದ್ದು. ಹೀಗಿರುವಾಗ ಮೊಸರಲ್ಲೂ ಕಲ್ಲು ಹುಡುಕುವ ಕಾಂಗ್ರೆಸ್ ಪರಿವಾರ ರಾಜಕಾರಣದ ಜಾಯಮಾನ ಅವರನ್ನು ಹೇಗೆ ಬಿಡಲು ಸಾಧ್ಯ? ಎಂದು ಪ್ರಶ್ನಿಸಿದೆ.

ಇನ್ನೊಂದು ಟ್ವೀಟ್‌ನಲ್ಲಿ, ಎಷ್ಟಾದರೂ ಮಲ್ಲಿಕಾರ್ಜುನ್ ಖರ್ಗೆ ಸಾಹೇಬರ ಪರಿವಾರ ರಾಜಕಾರಣದ (BJP about Mallikarjun Kharge) ಆಲದ ಮರದ ಕೆಳಗೆ ಬೆಳೆದವರಲ್ಲವೇ?
ಆದರೆ, ಕಾಂಗ್ರೆಸ್ ಪಕ್ಷದ ಆಡಳಿತ ಕುಟುಂಬಕ್ಕೆ ಇಟ್ಟುಕೊಂಡ ಪಕ್ಷದ ಮಾರ್ಕೆಟಿಂಗ್ ತಂತ್ರ ಈಗ ಹಳೆಯದಾಗಿದೆ.
ನವಭಾರತದ ಜನ ತಮ್ಮ ಕಣ್ಮುಂದೆ ಕಾಣುವ ಅಭಿವೃದ್ಧಿ ಬಯಸುತ್ತಾರೆಯೇ ವಿನಃ ಕಾಂಗ್ರೆಸ್ ಹಾಕಿಕೊಟ್ಟ ಕೆಟ್ಟ ರಾಜಕೀಯ ಬುನಾದಿಯನ್ನಲ್ಲ.
ಇದೀಗ ಆ ಜಿಲ್ಲೆ ಸಂಪೂರ್ಣವಾಗಿ ತಮ್ಮ ಕುಟುಂಬದ ಹಿಡಿತದಿಂದ ತಪ್ಪಿಹೋಗುವ ಆತಂಕ ಮಲ್ಲಿಕಾರ್ಜುನ್‌ಖರ್ಗೆ ಸಾಹೇಬರಿಗೆ ಶುರುವಾಗಿದೆ ಎಂದು ವ್ಯಂಗ್ಯವಾಡಿದೆ.

ಮತ್ತೊಂದು ಟ್ವೀಟ್‌ನಲ್ಲಿ, ಅದಕ್ಕಾಗಿಯೇ ಕಲಬುರಗಿಗೆ(Kalburgi) ಪ್ರಧಾನಿ ಶ್ರೀ ನರೇಂದ್ರ ಮೋದಿ(Narendra Modi) ಹೋಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಸರಿಯಾಗಿಯೇ ಹೇಳಿದ್ದಾರೆ. ಡಬಲ್ ಎಂಜಿನ್ ಸರ್ಕಾರದಿಂದ ಕಲಬುರಗಿಯಲ್ಲಿ ಆದ ಅಭಿವೃದ್ಧಿ ಮಲ್ಲಿಕಾರ್ಜುನ್‌ಖರ್ಗೆ ಸಾಹೇಬರನ್ನು ಚಿಂತೆಗೀಡುಮಾಡಿದೆ.
8 ಲಕ್ಷ ಜನ್‌ಧನ್ ಖಾತೆ ತೆರೆಯಲಾಗಿರುವುದು ನಮ್ಮ ಸಾಧನೆ ಎಂಬುದು ಎಷ್ಟು ನಿಜವೋ, ಅದು ಅವರ ಸೋಲು ಎಂಬುದೂ ಅಷ್ಟೇ ನಿಜ.

ಇದೆಲ್ಲಾ ಆಗಿದ್ದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅವಧಿಯಲ್ಲಿ. ಅಧಿಕಾರ ಇದ್ದಾಗ ಕೆಲಸ ಮಾಡುವುದಿಲ್ಲ,
ಅಧಿಕಾರ ಕಳೆದುಕೊಂಡ ಮೇಲೆ ಬೇರೆಯವರು ಕೆಲಸ ಮಾಡಿದರೆ ಸಹಿಸಿಕೊಳ್ಳುವುದಿಲ್ಲ ಎಂಬ ಕಾಂಗ್ರೆಸ್ ಸಂಸ್ಕೃತಿಯನ್ನು ಸನ್ಮಾನ್ಯ ಮಲ್ಲಿಕಾರ್ಜುನ್‌ಖರ್ಗೆ ಅವರ ಮಾತುಗಳು ನೆನಪಿಸುತ್ತದೆ.
ಹಾಗಾಗಿ ನರೇಂದ್ರ ಮೋದಿ ಅವರ ಕಲಬುರಗಿಯ ಯಶಸ್ವಿ ಭೇಟಿ ಇವರಿಗೆ ಇರುವೆ ಬಿಟ್ಟಂತೆ ಆಗುತ್ತಿದೆ ಎಂದು ಲೇವಡಿ ಮಾಡಿದೆ.