ಸಿದ್ದರಾಮಯ್ಯನವರೇ, ನಿಮಗೆ ಖೆಡ್ಡಾ ತೋಡುತ್ತಿದ್ದಾರೆ : ರಾಜ್ಯ ಬಿಜೆಪಿ

Bengaluru : ಹೈಕಮಾಂಡ್ ಒತ್ತಡದಿಂದ ಸಿದ್ದರಾಮಯ್ಯ(Siddaramaiah) ಅವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದಂತೆ ‘ಒಬ್ಬರಿಗೆ ಒಂದೇ ಕ್ಷೇತ್ರ’ ಎಂಬ ಹೊಸ ನಿಯಮವನ್ನು  ಡಿ.ಕೆ.ಶಿವಕುಮಾರ್(DK Shivkumar) ಘೋಷಿಸಿದರು.

ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿ ಟಿಕೆಟ್ ಅರ್ಜಿ, ಒಂದೇ ಕ್ಷೇತ್ರದ ಷರತ್ತು ವಿಧಿಸಲಾಗುತ್ತಿದೆ. ಸಿದ್ದರಾಮಯ್ಯ ಅವರೇ, ನಿಮಗೆ ಖೆಡ್ಡಾ ತೋಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, 

ಸಿದ್ದರಾಮಯ್ಯ ಅವರು ಹೋದಲ್ಲೆಲ್ಲಾ ಕಾಂಗ್ರೆಸ್(Congress) ಅಭ್ಯರ್ಥಿ ಘೋಷಣೆ ಮಾಡುತ್ತಿದ್ದರು. ಇದನ್ನು ನಿಯಂತ್ರಿಸಲು “ಟಿಕೆಟ್ ಘೋಷಿಸುವ ಅಧಿಕಾರ ಸಿದ್ದರಾಮಯ್ಯ ಅವರಿಗಿಲ್ಲ” ಎನ್ನುವ ಹೇಳಿಕೆಯನ್ನು ಡಿಕೆಶಿ ಘಂಟಾಘೋಷವಾಗಿ ನೀಡಿದರು. ಸಿಎಂ ಕುರ್ಚಿಗಾಗಿ ಶೀತಲ ಸಮರವೇ? ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ : https://vijayatimes.com/central-govt-to-supremecourt/

ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವ ಅಂತಿಮ ದಿನವನ್ನು ಎರಡೆರಡು ಬಾರಿ ಮುಂದಕ್ಕೆ ಹಾಕಿದರೂ  ಡಿ.ಕೆ.ಶಿವಕುಮಾರ ಮಾತಿಗೆ  ಸಿದ್ದರಾಮಯ್ಯ ಕಿಮ್ಮತ್ತೇ ನೀಡಲಿಲ್ಲ.  ಸಿದ್ದರಾಮಯ್ಯ ಅರ್ಜಿ ಸಲ್ಲಿಸಬೇಕಾದರೆ ದೆಹಲಿಯಿಂದಲೇ ಅಪ್ಪಣೆ ಬರಬೇಕಾಯಿತು. ಡಿಕೆಶಿ ರಣತಂತ್ರಕ್ಕೆ ಸಿದ್ದರಾಮಯ್ಯ ನಿರ್ಲ್ಯಕ್ಷದ ಪ್ರತ್ಯುತ್ತರ ನೀಡಿದ್ದೇ?

ಸಿದ್ದರಾಮಯ್ಯರನ್ನು ಸೋಲಿಸಿದರೆ ಮಾತ್ರ ತಾನು ಸಿಎಂ ಆಗಬಹುದು ಎಂದು ಡಿ.ಕೆ.ಶಿವಕುಮಾರ ಬಲವಾಗಿ ನಂಬಿದ್ದಾರೆ. ಹೀಗಾಗಿ “ಸಿದ್ದು ಕ್ಷೇತ್ರ ನಾಡಿಮಿಡಿತ” ಪರೀಕ್ಷಿಸಲು ಡಿಕೆಶಿ ಅರ್ಜಿ ಸಲ್ಲಿಸುವ ನಿಯಮ ಜಾರಿಗೊಳಿಸಿದರು. ಚುನಾವಣಾ ಕಾಲದಲ್ಲಿ  ಕಾಂಗ್ರೆಸ್‌ ಪಕ್ಷದ ನಾಯಕರೊಳಗಿನ ಕಾದಾಟ ಮತ್ತೆ ತಾರಕಕ್ಕೇರಿದೆ.

https://fb.watch/h5mrL38_Hf/ ಬೆಂಗಳೂರು : ಕೋಣನಕುಂಟೆ ಕ್ರಾಸ್ ನಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಮನಬಂದಂತೆ ಅವಮಾನಿಸಿದ ವ್ಯಕ್ತಿ!

ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು  ಡಿ.ಕೆ.ಶಿವಕುಮಾರ ದಿನನಿತ್ಯ ಬೀದಿಕಾಳಗ ಮಾಡುತ್ತಿದ್ದಾರೆ. ಸಿದ್ದರಾಮಯ್ಯರನ್ನು ಹಣಿಯಲೆಂದೇ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಎಂಬ ಹೊಸ ನಿಯಮವನ್ನು ಡಿಕೆಶಿ ಜಾರಿಗೆ ತಂದರು ಎಂದು ಲೇವಡಿ ಮಾಡಿದೆ.

Exit mobile version