ಬಿಜೆಪಿ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ : ಡಿ.ಕೆ.ಶಿ!

bjp

ಬಿಜೆಪಿ(BJP) ಸೇರುವಂತೆ ನನ್ನ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ. ಇದಕ್ಕೆ ನಾನು ಒಪ್ಪದಿದ್ದಾಗ ನನ್ನ ವಿರುದ್ದ ಸರ್ಕಾರಿ ಸಂಸ್ಥೆಗಳನ್ನು ಬಳಸಿ ಸಂಚು ರೂಪಿಸಲಾಗಿದೆ ಎಂದು ರಾಜ್ಯ(State) ಕಾಂಗ್ರೆಸ್ ಅಧ್ಯಕ್ಷ(Congress President) ಡಿ.ಕೆ.ಶಿವಕುಮಾರ್(DK Shivkumar) ಆರೋಪಿಸಿದರು.

ಈ ಕುರಿತು ಸರಣಿ ಟ್ವೀಟ್‍ಗಳನ್ನು(Tweet) ಮಾಡಿರುವ ಅವರು, ಬಿಜೆಪಿ ಸೇರುವಂತೆ ನನಗೆ ಒತ್ತಡ ಹೇರಲಾಗುತ್ತಿದೆ. ನಾನು ನಿರಾಕರಿಸಿದ ಪರಿಣಾಮ ನನ್ನನ್ನು ರಾಜಕೀಯವಾಗಿ ಮುಗಿಸಲು ನನ್ನ ವಿರುದ್ದ ಸಂಚು ರೂಪಿಸಲಾಗಿದೆ. ಆದರೆ ಇದಕ್ಕೆಲ್ಲಾ ನಾನು ಹೆದರುವವನಲ್ಲ. ನನ್ನನ್ನು ಹೆದರಿಸುವುದು ಅಷ್ಟು ಸುಲಭವಲ್ಲ. ಬಿಜೆಪಿ ಸರ್ಕಾರದಿಂದ ರಾಜ್ಯದ ಜನರು ಬೇಸತ್ತಿದ್ದಾರೆ. ಈ ರಾಜಕೀಯ ಸೇಡಿಗೆ ರಾಜ್ಯದ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.

ಇನ್ನು ರಾಜ್ಯದ ಸಚಿವರೊಬ್ಬರು 40% ಕಮಿಷನ್ ಕೇಳಿದ ಪರಿಣಾಮ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ. ರಾಜ್ಯ ಸರ್ಕಾರ ಗುತ್ತಿಗೆದಾರರಿಂದ 40% ಕಮಿಷನ್ ಪಡೆಯುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘವೇ ಸಾರ್ವಜನಿಕವಾಗಿ ಆರೋಪಿಸಿದೆ. ಇನ್ನು ಬಿಜೆಪಿ ಪ್ರಾಯೋಜಿತ ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಭೀತಾ ಗಿದೆ. ಆದರು ಇದುವರೆಗೂ ಸೂಕ್ತ ಕ್ರಮ ಕೈಗೊಂಡಿಲ್ಲ. ಯಾರ ಮೇಲೂ ಚಾರ್ಚ್‍ಶೀಟ್ ಹಾಕಿಲ್ಲ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಬಿಜೆಪಿ ಸರ್ಕಾರ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ನನ್ನ ವಿರುದ್ದ ಪ್ರಕರಣಗಳನ್ನು ದಾಖಲಿಸುತ್ತಿದೆ. ತನಿಖಾ ಸಂಸ್ಥೆಗಳ ಮೂಲಕ ನನ್ನನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ. ಆದರೆ ನನ್ನನ್ನು ಹೆದರಿಸುವುದು ಅಷ್ಟು ಸುಲಭವಲ್ಲ. ನಾನು ಎಲ್ಲವನ್ನೂ ಎದುರಿಸುತ್ತೇನೆ. ಬಿಜೆಪಿಯ ಷಡ್ಯಂತ್ರಗಳನ್ನು ರಾಜ್ಯದ ಜನರ ಮುಂದೆ ತೆರೆದಿಡುತ್ತೇನೆ. ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

Exit mobile version