ಸ್ಮೃತಿ ಇರಾನಿಗೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಬಿಜೆಪಿ ಆರೋಪ

Delhi: ರಾಹುಲ್ (Rahul) ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ, ಮೋದಿ (bjp complaint on rahul) ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಸಮಯದಲ್ಲಿ ರಾಹುಲ್

ಗಾಂಧಿಯವರ ಭಾಷಣದ ಬಳಿಕ ಸ್ಮೃತಿ ಇರಾನಿ (Smriti Irani) ತಮ್ಮ ಭಾಷಣ ಮಾಡಲು ಎದ್ದು ನಿಂತ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಲೋಕಸಭೆಯಿಂದ ಹೊರ ನಡೆದ ಸ್ಮೃತಿ ಇರಾನಿ

ಅವರ ಕಡೆಗೆ ತಿರುಗಿ ಫ್ಲೈಯಿಂಗ್ ಕಿಸ್ (Flying Kiss) ಕೊಟ್ಟರು ಎಂದು ಬಿಜೆಪಿ ಆರೋಪಿಸಿದೆ.

ರಾಹುಲ್ ಗಾಂಧಿ (Rahul Gandhi) ಅವರ ವರ್ತನೆಯೊಂದು ಲೋಕಸಭಾ ಕಲಾಪದಲ್ಲಿ ಭಾಗವಹಿಸಿದ್ದ ಬಿಜೆಪಿ (BJP) ಸದಸ್ಯರನ್ನು ಕೆರಳಿಸಿದೆ. ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ

ಮಣಿಪುರ ವಿಚಾರವಾಗಿ ಎನ್‌ಡಿಎ (NDA) ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಚರ್ಚೆ ವೇಳೆ ಬುಧವಾರ ರಾಹುಲ್ ಗಾಂಧಿ ಅವರು ಭಾಷಣ ಮಾಡಿದರು.

ರಾಹುಲ್ ಗಾಂಧಿ ಅವರ ಭಾಷಣ ಮುಗಿದ ಬಳಿಕ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಅವರ ಭಾಷಣ ನಿಗದಿಯಾಗಿತ್ತು. ತಮ್ಮ ಭಾಷಣ ಮುಗಿಸಿ ಲೋಕಸಭೆಯಿಂದ ಹೊರ ನಡೆಯುವ

ಮುನ್ನ ರಾಹುಲ್ ಗಾಂಧಿಯವರು ಸ್ಮೃತಿ ಇರಾನಿ ಅವರ ಕಡೆಗೆ ನೋಡುತ್ತಾ (bjp complaint on rahul) ‘ಫ್ಲೈಯಿಂಗ್ ಕಿಸ್ ’ ಕೊಟ್ಟರು ಎನ್ನಲಾಗಿದೆ.

ರಾಹುಲ್ ಗಾಂಧಿ (Rahul Gandhi) ಅವರ ಈ ನಡವಳಿಕೆ ವಿರುದ್ಧ ಸ್ಮೃತಿ ಇರಾನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ತ್ರೀದ್ವೇಷಿಯಾದ ಪುರುಷನೊಬ್ಬ ಮಾತ್ರ ಈ ರೀತಿ ವರ್ತನೆ ಮಾಡಬಲ್ಲ. ನನಗಿಂತ

ಮೊದಲು ಈ ಸದನದಲ್ಲಿ ಮಾತನಾಡಿದ ವ್ಯಕ್ತಿಯು ಅಹಿತಕರ ವರ್ತನೆ ತೋರಿದ್ದಾರೆ. ಲೋಕಸಭೆಯಲ್ಲಿ ಮಹಿಳಾ ಸಂಸದೆಯೊಬ್ಬರ ಕಡೆಗೆ ನೋಡುತ್ತಾ ‘ಫ್ಲೈಯಿಂಗ್ ಕಿಸ್ (Flying Kiss)’ ಮಾಡುವ ಈ

ವರ್ತನೆಗೆ ಏನನ್ನಬೇಕು ಎಂದು ಅವರು ಪ್ರಶ್ನಿಸಿದರು.

ಅವರ ಈ ವರ್ತನೆಯನ್ನು ನೋಡಿದರೆ ಅವರು ಯಾವ ವಂಶದಿಂದ ಬಂದವರು ಅನ್ನೋದು ಗೊತ್ತಾಗುತ್ತದೆ. ಅವರ ಕುಟುಂಬ ಹಾಗೂ ಅವರ ಪಕ್ಷ ಮಹಿಳೆಯರನ್ನು ಯಾವ ರೀತಿ ನೋಡುತ್ತದೆ ಅನ್ನೋದು ರಾಹುಲ್

ಗಾಂಧಿ (Rahul Gandhi) ಅವರ ವರ್ತನೆಯಿಂದಲೇ ಸಾಬೀತಾಗುತ್ತೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. ಈ ರೀತಿಯ ಘನತೆ ಇಲ್ಲದ ನಡವಳಿಕೆಯನ್ನು ನಾನು ಎಂದಿಗೂ ಕೂಡಾ ಈ ದೇಶದ ಸಂಸತ್‌ನಲ್ಲಿ

ನೋಡಿರಲಿಲ್ಲ ಎಂದು ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಭಾರತ ಸರ್ಕಾರವು ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದು ಹಾಕಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನೂ

ಸ್ಮೃತಿ ಇರಾನಿ (Smriti Irani) ಖಂಡಿಸಿದ್ದಾರೆ.

ಈ ದೇಶದ ಸಂಸತ್‌ನಲ್ಲಿ ಈ ರೀತಿಯ ಘನತೆ ಇಲ್ಲದ ನಡವಳಿಕೆಯನ್ನು ನಾನು ಎಂದಿಗೂ ಕೂಡಾ ನೋಡಿರಲಿಲ್ಲ ಎಂದು ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದ್ದು, ಅಷ್ಟೇ ಅಲ್ಲ ಭಾರತ ಸರ್ಕಾರವು ಮಣಿಪುರದಲ್ಲಿ

(Manipura) ಭಾರತ ಮಾತೆಯನ್ನು ಕೊಂದು ಹಾಕಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನೂ ಸ್ಮೃತಿ ಇರಾನಿ ಖಂಡಿಸಿದ್ದಾರೆ. ಇದೇ ಮೊದಲ ಬಾರಿಗೆ ಸಂಸತ್ ಭವನದಲ್ಲಿ ಸದಸ್ಯರೊಬ್ಬರು ಭಾರತದ

ಕೊಲೆಯ ಬಗ್ಗೆ ಮಾತನಾಡಿರೋದನ್ನು ಕೇಳುತ್ತಿದ್ದೇನೆ, ಈ ರೀತಿಯ ಹೇಳಿಕೆ ನೀಡುವಾಗ ಕಾಂಗ್ರೆಸ್ (Congress) ಸದಸ್ಯರು ಮೇಜು ಕುಟ್ಟುತ್ತಿದ್ದರು ಎಂದು ಸ್ಮೃತಿ ಇರಾನಿ ಕೆಂಡಕಾರಿದರು.

ಭವ್ಯಶ್ರೀ ಆರ್.ಜೆ

Exit mobile version