ಮೆಹಂದಿ ನೆಪದಲ್ಲಿ ‘ಲವ್ ಜಿಹಾದ್’ ನಡೆಸುತ್ತಾರೆ : ಬಿಜೆಪಿ ಶಾಸಕ ಆರೋಪ

Love Jihad

Lucknow : ಕೆಲ ಮುಸ್ಲಿಂ ಯುವಕರು ಮೆಹಂದಿ (Mehandi) ನೆಪದಲ್ಲಿ ಲವ್‌ ಜಿಹಾದ್‌ (Love Jihad) ನಡೆಸುತ್ತಾರೆ.

ಇಂತಹ ಹಲವು ಪ್ರಕರಣಗಳು ಉತ್ತರಪ್ರದೇಶ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ನಡೆದಿವೆ ಎಂದು ಉತ್ತರಪ್ರದೇಶದ ಖತೌಲಿಯ ಬಿಜೆಪಿ ಶಾಸಕ (BJP MLA Warns about Love Jihad) ವಿಕ್ರಮ್ ಸೈನಿ ಆರೋಪಿಸಿದ್ದಾರೆ.

ಕರ್ವಾ ಚೌತ್ ಹಬ್ಬದ ಮುನ್ನ ಉತ್ತರ ಪ್ರದೇಶದ ಮುಜಾಫರ್ನ ನಗರದಲ್ಲಿ ಮೆಹಂದಿ ಅಂಗಡಿಗಳನ್ನು ತೆರೆದಿರುವ ಮುಸ್ಲಿಂ ಯುವಕರ ಉದ್ದೇಶಗಳು ದುರುದ್ದೇಶದಿಂದ ಕೂಡಿದ್ದು, ಅವರ ಮನಸ್ಸಿನಲ್ಲಿ ಲವ್ ಜಿಹಾದ್ ಇದೆ.

ಹೀಗಾಗಿ ಮೆಹಂದಿ ನೆಪದಲ್ಲಿ ಮುಸ್ಲಿಂ ಯುವಕರು ಲವ್‌ಜಿಹಾದ್‌ ನಡೆಸುತ್ತಾರೆ.

ಹೀಗಾಗಿ ಹಿಂದೂ ಸಮುದಾಯದವರು ಮುಸ್ಲಿಂ ಮೆಹಂದಿ ಕಲಾವಿದರನ್ನು ಬಹಿಷ್ಕರಿಸಬೇಕು(BJP MLA Warns about Love Jihad) ಎಂದು ಬಿಜೆಪಿ ಶಾಸಕ ವಿಕ್ರಮ್ ಸೈನಿ ಕರೆ ನೀಡಿದ್ದಾರೆ.

ಇದೇ ವೇಳೆ, ಕರ್ವಾ ಚೌತ್ ಹಬ್ಬದಲ್ಲಿ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಹಿಂದೂ ಮಹಿಳೆಯರ ಕೈಗೆ ಇತರ ಸಮುದಾಯಕ್ಕೆ ಸೇರಿದ ಮೆಹಂದಿ ಕಲಾವಿದರು ಗೋರಂಟಿ ಹಚ್ಚಿದರೆ ಪರಿಣಾಮ ಎದುರಿಸಬೇಕಾಗುತ್ತದೆ.

ಹಿಂದೂ ಮಹಿಳೆಯರು ಹಿಂದೂ ಸಮುದಾಯದವರು ತೆರೆದಿರುವ ಅಂಗಡಿಗಳು ಮತ್ತು ಬ್ಯೂಟಿ ಪಾರ್ಲರ್ಗಳಲ್ಲಿ ಮೆಹಂದಿಯನ್ನು ಹಚ್ಚಿಸಿಕೊಳ್ಳಬೇಕು ಎಂದು ಹಿಂದೂ ಮಹಾಸಭಾದ ಸದಸ್ಯರು ಎಚ್ಚರಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ 13 ಮೆಹಂದಿ ಸ್ಟಾಲ್ಗಳನ್ನು ತೆರೆದಿದೆ.

https://youtu.be/B17BlX9yaF8

ಮುಸ್ಲಿಂ ಪುರುಷ ಮೇಕಪ್ ಕಲಾವಿದರು ಹಿಂದೂ ಮಹಿಳೆಯರಿಗೆ ಮೆಹಂದಿ ಅಥವಾ ಗೋರಂಟಿ ಹಾಕುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ವಿಶ್ವ ಹಿಂದೂ ಪರಿಷತ್ ತನ್ನ ಸದಸ್ಯರಿಗೆ ಜವಾಬ್ದಾರಿ ವಹಿಸಿದೆ.

ಅವರು ಮೆಹಂದಿ ಕಲಾವಿದರ ಆಧಾರ್ ಕಾರ್ಡ್ಗಳನ್ನು ಪರಿಶೀಲಿಸುವ ಮೂಲಕ ಅವರ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ : https://vijayatimes.com/hijab-verdict-from-sc/

ಲವ್ ಜಿಹಾದ್ಗೆ ಬಲಿಯಾಗದಂತೆ ನಮ್ಮ ಸಹೋದರಿಯರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿಂದೂ ಮಹಾಸಭಾ ಸದಸ್ಯ ಲೋಕೇಶ್ ಸೈನಿ ಹೇಳಿದ್ದಾರೆ.

ಇನ್ನು ಕರ್ವಾ ಚೌತ್ ಜನಪ್ರಿಯ ಹಿಂದೂ ಹಬ್ಬವಾಗಿದ್ದು, ವಿವಾಹಿತ ಮಹಿಳೆಯರು ತಮ್ಮ ಗಂಡನ ಸುರಕ್ಷತೆ ಮತ್ತು ದೀರ್ಘಾಯುಷ್ಯಕ್ಕಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ವಿವಾಹಿತ ಮಹಿಳೆಯರು ಕರ್ವಾ ಚೌತ್ ಆಚರಣೆಗಳ ಭಾಗವಾಗಿ ವರ್ಣರಂಜಿತ ವಿನ್ಯಾಸಗಳಲ್ಲಿ ಮೆಹಂದಿಯನ್ನು ಹಚ್ಚಿಕೊಳ್ಳುತ್ತಾರೆ.

Exit mobile version