ಇಂದು ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ: ವಿಪಕ್ಷ ನಾಯಕನ ರೇಸ್​ನಲ್ಲಿ ಮೂವರು ಕೇಸರಿ ಕಲಿಗಳು.. ಯಾರಿಗೆ ಒಲಿಯುತ್ತೆ ಪಟ್ಟ??

Bengaluru : ವಿಧಾನಮಂಡಲ ಅಧಿವೇಶನ ಈಗಾಗಲೇ ಆರಂಭವಾಗಿದ್ದು, ನಿನ್ನೆ(ಜುಲೈ 03) ರಾಜ್ಯ ಪಾಲರು ಜಂಟಿ ಅಧಿವೇಶನ ಉದ್ದೇಶಿಸಿ (BJP opposition leader slection) ಭಾಷಣ ಮಾಡಿದ್ದಾರೆ.

ಆದರೆ ಅಧಿವೇಶನ ಆರಂಭವಾದರೂ ಕೂಡ ಬಿಜೆಪಿಯಲ್ಲಿ (BJP) ವಿಪಕ್ಷ ನಾಯಕ ( Opposition leader) ಯಾರು ಎಂಬುವುದೇ ಇನ್ನೂ ಕೂಡ ನಿಗೂಢವಾಗಿದೆ. ಆಡಳಿತ ಪಕ್ಷ ಕಾಂಗ್ರಸ್

(Congress) ಅನ್ನು ಅಧಿವೇಶದನದಲ್ಲಿ ಇಕ್ಕಟ್ಟಿನಲ್ಲಿ ಸಿಲುಕಿಸಬೇಕಾದ ಬಿಜೆಪಿಯೇ ಈಗ ಸಂಕಷ್ಟಕ್ಕೆ ಸಿಲುಕಿದ್ದು ಬಿಜೆಪಿಗೆ ಇದು ತೀವ್ರ ಇರಿಸುಮುರಿಸು ಉಂಟುಮಾಡಿದೆ ಆದ್ದರಿಂದ ಇಂದು

(ಜುಲೈ 04) ವಿರೋಧ ಪಕ್ಷದ ನಾಯಕನ ಆಯ್ಕೆಯಾಗುವ ಸಾಧ್ಯತೆಗಳಿವೆ. ಆದ್ರೆ, ವಿಪಕ್ಷ ನಾಯಕನ ಪಟ್ಟ ಯಾರಿಗೆ ಎನ್ನುವುದು ಇನ್ನೂ ನಿಗೂಢವಾಗಿದೆ.

ಇಂದು ವಿಪಕ್ಷ ನಾಯಕನ ಆಯ್ಕೆ ಸಾಧ್ಯತೆ

ಇನ್ನು ​ ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಲು ಹೈಕಮಾಂಡ್ ವೀಕ್ಷಕರನ್ನು ನೇಮಿಸಿದೆ. ಇನ್ನು ವಿಪಕ್ಷ ನಾಯಕನ ಆಯ್ಕೆ ಮಾಡಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ

(Mansukh L Mandaviya) ಮತ್ತು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ (Vinod tawde) ಅವರನ್ನು ಕೇಂದ್ರೀಯ ವೀಕ್ಷಕರಾಗಿ ಬಿಜೆಪಿ ರಾಷ್ಟ್ರೀಯ

ಅಧ್ಯಕ್ಷ ಜೆಪಿ ನಡ್ಡಾ (J.P Nadda) ಅವರು ನೇಮಿಸಿದ್ದಾರೆ. ಈಗಾಗಲೇ ಅವರು ಬೆಂಗಳೂರಿಗೆ ಬಂದಿದ್ದು, ಇಂದು(ಜುಲೈ 04) ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ಇಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ (Bengaluru) ಮಲ್ಲೇಶ್ವರಂನ (Malleshwaram) ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆಯಲಿದ್ದು, ಎಲ್ಲರ ಅಭಿಪ್ರಾಯಗಳನ್ನು ಸಭೆಯಲ್ಲಿ ಸಂಗ್ರಹಿಸಿ

ಹೈಕಮಾಂಡ್​ಗೆ ಮಾಹಿತಿ ನೀಡಲಿದ್ದಾರೆ. ವಿರೋಧ ಪಕ್ಷ ನಾಯಕನ ಘೋಷಣೆ ಬಳಿಕ ಅಧಿಕೃತವಾಗಿ ನಡೆಯಲಿದೆ (BJP opposition leader slection) ಎಂದು ತಿಳಿದುಬಂದಿದೆ.

ಮೂವರು ಕೇಸರಿ ಕಲಿಗಳು ವಿಪಕ್ಷ ನಾಯಕನ ರೇಸ್​ನಲ್ಲಿ

ವಿಪಕ್ಷ ನಾಯಕನ ಸ್ಥಾನಕ್ಕೆ ಮೂಲಗಳ ಪ್ರಕಾರ ಲಿಂಗಾಯತ (Lingaytha), ಲಿಂಗಾಯತೇತರ ನಾಯಕರನ್ನು ನೇಮಿಸಿದ್ರೆ ಹೇಗೆ ಎನ್ನುವ ಲೆಕ್ಕಾಚಾರಗಳನ್ನು ಬಿಜೆಪಿ ಹೈಕಮಾಂಡ್, ಹಾಕಿದೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai), ಬಸನಗೌಡ ಪಾಟೀಲ್ ಯತ್ನಾಳ್ (Basavana Gowda Patil Yatnal) ಲಿಂಗಾಯತ ಸಮುದಾಯದಿಂದ ರೇಸ್​ನಲ್ಲಿದ್ದಾರೆ.

ಅಲ್ಲದೇ ವಿಪಕ್ಷ ನಾಯಕನ ರೇಸ್‌ನಲ್ಲಿ ಶಾಸಕ ಸುನಿಕ್ ಕುಮಾರ್ (V.Sunil Kumar) ಕೂಡ ಮುಂಚೂಣಿಯಲ್ಲಿದ್ದಾರೆ. ಆದ್ರೆ ಯಾರಿಗೆ ವಿಪಕ್ಷ ನಾಯಕನ ಪಟ್ಟ ಎನ್ನುವುದು ಇನ್ನೂ ನಿಗೂಢವಾಗಿದೆ.

ಕಾಂಗ್ರೆಸ್​ ಬಿಜೆಪಿ ವಿರುದ್ಧ ಟೀಕಾ ಪ್ರಹಾರ!

ಅಸಲಿಗೆ ವಿಪಕ್ಷ ನಾಯಕನ ಯಾರು ಎಂದು ಮೊನ್ನೆ ದೆಹಲಿಯಲ್ಲೇ (New Delhi) ಫೈನಲ್ ಆಗಬೇಕಿತ್ತು.ವಿಪಕ್ಷ ನಾಯಕನ ಹೆಸರು ಕಲಾಪ ಆರಂಭ ಆಗುವ ಮುನ್ನವೇ ಅಂತಿಮ ಆಗಲಿದೆ ಎಂದು ಬಿಜೆಪಿ ಟ್ವೀಟ್

(Tweet) ಮಾಡಿತ್ತು. ಇತ್ತ ದೆಹಲಿಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (BS Yediyurappa) ಪ್ರಯಾಣ ಹೋಗಿ ಬಂದಿದ್ದರೂ ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಜೊತೆಗೆ ನಿಗದಿಯಾಗಿದ್ದ ಸಭೆ

ನಡೆಯಲೇ ಇಲ್ಲ. ವಿಪಕ್ಷ ನಾಯಕ ಯಾರು ಅನ್ನೋದು ಹೀಗಾಗಿ ಸಸ್ಪೆನ್ಸ್​ ಆಗೇ ಉಳಿದಿದೆ. ಇಷ್ಟೇ ಅಲ್ಲದೆ ಕಾಂಗ್ರೆಸ್, ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಅಟ್ಯಾಕ್ ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಮಾಡಿದೆ.

ವಿಪಕ್ಷ ನಾಯಕನಾಗುವ ಅರ್ಹತೆ ಬಿಜೆಪಿಯ 66 ಶಾಸಕರಲ್ಲಿ ಇರುವ ಒಬ್ಬೇ ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನಾಚಿಕೆಗೇಡು. ವಿಪಕ್ಷ ನಾಯಕನಿಲ್ಲದೆ ಕರ್ನಾಟಕದ ಇತಿಹಾಸದಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನವಿದು.

ಪ್ರಜಾಪ್ರಭುತ್ವವನ್ನ ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೂ ಗೌರವಿಸಲಿಲ್ಲ. ಈಗ ವಿಪಕ್ಷ ಸ್ಥಾನದಲ್ಲಿದ್ದಾಗಲೂ ಗೌರವಿಸುತ್ತಿಲ್ಲ.ಸಿಎಂ ಹುದ್ದೆಗೆ 2,500 ಕೋಟಿ ರೂ. ಫಿಕ್ಸ್ ಮಾಡಲಾಗಿತ್ತು.. ಇದೀಗ ವಿರೋಧ ಪಕ್ಷದ ನಾಯಕನ

ಹುದ್ದೆಯನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಎಷ್ಟಕ್ಕೆ ವಿರೋಧ ಪಕ್ಷದ ನಾಯಕನ ಹುದ್ದೆ ಬಿಕರಿಯಾಗುತ್ತಿದೆ? ಆಯ್ಕೆ ಪ್ರಕ್ರಿಯೆ ಆ ಚೌಕಾಶಿ ವ್ಯವಹಾರಕ್ಕಾಗಿಯೇ ವಿಳಂಬವಾಗುತ್ತಿದೆಯೇ?

ಎಂದು ಕಾಂಗ್ರೆಸ್ ಬಿಜೆಪಿ ಉತ್ತರಿಸಬೇಕು ಎಂದು ಟ್ವೀಟ್ ಬಾಣ ಬಿಟ್ಟಿದೆ.

ರಶ್ಮಿತಾ ಅನೀಶ್

Exit mobile version