ನನ್ನನ್ನು ಬಯ್ಯುವ ಮತ್ತು ಹೊಗಳುವ ಹಕ್ಕು ಎಲ್ಲರಿಗೂ ಇದೆ : ಪ್ರಮೋದ್ ಮಧ್ವರಾಜ್!

bjp

ಒಂದು ಪಕ್ಷವನ್ನು ಬಿಟ್ಟು ಬಂದ ಮೇಲೆ ಆ ಪಕ್ಷದ ಕಾರ್ಯಕರ್ತರಿಗೆ ನೋವು, ದುಃಖ ಎಲ್ಲವೂ ಆಗುತ್ತದೆ. ಹೀಗಾಗಿ ನನ್ನನ್ನು ಬಯ್ಯುವ ಮತ್ತು ಹೊಗಳುವ ಹಕ್ಕು ಎಲ್ಲರಿಗೂ ಇದೆ. ನನ್ನನ್ನು ಬಯ್ಯುವಾಗ ನಾನು ಕುಗ್ಗುವುದಿಲ್ಲ, ಹೊಗಳಿದಾಗ ಹಿಗ್ಗುವುದಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್(Pramod Madhwaraj) ಹೇಳಿದ್ದಾರೆ.

ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi) ಅವರ ಕಾರ್ಯವೈಖರಿಯನ್ನು ಮೆಚ್ಚಿ ಬಿಜೆಪಿ ಸೇರಿದ್ದೇನೆ. ಕೋವಿಡ್(Covid 19) ಸಂದರ್ಭದಲ್ಲಿ 130 ಕೋಟಿ ಜನಸಂಖ್ಯೆ ಇರುವ ಭಾರತದಂತ ದೊಡ್ಡ ದೇಶವನ್ನು ಅವರು ನಿರ್ವಹಿಸಿದ ರೀತಿಯನ್ನು ಇಡೀ ಜಗತ್ತು ಮೆಚ್ಚಿಕೊಂಡಿದೆ. ಹೀಗಾಗಿ ಮೋದಿ ನಾಯಕತ್ವದಿಂದ ಪ್ರಭಾವಿತನಾಗಿ ಯಾವುದೇ ಷರತ್ತುಗಳಿಲ್ಲದೇ ಬಿಜೆಪಿ ಸೇರಿದ್ದೇನೆ. ಅದೇ ರೀತಿ ರಾಜ್ಯದಲ್ಲಿಯೂ ಬಸವರಾಜ್ ಬೊಮ್ಮಾಯಿ(Basavaraj Bommai) ಅವರ ಅತ್ಯಂತ ಸರಳ ಮತ್ತು ಸಭ್ಯ ರಾಜಕೀಯ ನಿಲುವುಗಳು ಮತ್ತು ಉತ್ತಮ ಆಡಳಿತವನ್ನು ಮೆಚ್ಚಿಕೊಂಡು ಬಿಜೆಪಿ ಸೇರಿದ್ದೇನೆ.

ಇನ್ನು ನಾನು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ(JP Nadda), ರಾಜ್ಯಾಧ್ಯಕ್ಷ ನಳಿನ್ ಕುಮಾರ್‍ಕಟೀಲ್(Nalin Kumar Kateel), ಬಿ.ಎಲ್ ಸಂತೋಷ ಅವರ ಮೇಲೆ ವಿಶ್ವಾಸವನ್ನಿಟ್ಟು ಬಿಜೆಪಿ ಸೇರಿದ್ದೇನೆ ಎಂದರು. ಇನ್ನು ನಾನು ಬಿಜೆಪಿ ಸೇರಲು ಯಾವುದೇ ಬೇಡಿಕೆ ಇಟ್ಟಿಲ್ಲ. ನನಗೆ ರಾಜ್ಯ ರಾಜಕಾರಣವೂ ಬೇಡ, ರಾಷ್ಟ್ರ ರಾಜಕಾರಣವೂ ಬೇಡ. ನನಗೆ ಹಳ್ಳಿ ರಾಜಕಾರಣ ಇಷ್ಟ. ಮುಂದಿನ ದಿನಗಳಲ್ಲಿ ನಾನು ಹಳ್ಳಿ ರಾಜಕಾರಣದಲ್ಲಿ ಹೆಚ್ಚು ತೊಡಗಿಕೊಳ್ಳುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಯಾವುದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ.

ಪಕ್ಷ ಸೂಚಿಸಿದ ಅಭ್ಯರ್ಥಿಯ ಪರವಾಗಿ ನಾನು ಕೆಲಸ ಮಾಡುತ್ತೇನೆ. ಮೀನುಗಾರರು ಇರುವ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟರೆ ಇನ್ನು ಒಳ್ಳೆಯದು. ರಾಜ್ಯದ ಯಾವುದೇ ಭಾಗದಲ್ಲಿ ಪಕ್ಷ ಕೆಲಸ ಮಾಡಲು ಹೇಳಿದರೆ ಹೋಗಿ ಕೆಲಸ ಮಾಡುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನಗಳನ್ನು ಗೆಲ್ಲಿಸಿ ಕೊಡಲು ನನ್ನದೊಂದು ಅಳಿಲು ಸೇವೆ ಮಾಡಲು ನಿರ್ಧರಿಸಿದ್ದೇನೆ ಎಂದರು.

Exit mobile version