ರಾಹುಲ್‌ ಗಾಂಧಿಗೆ ಮನೆ ಇಲ್ಲ, ಮನೆ ಕೊಡಿ ! ʻಪ್ರಧಾನ ಮಂತ್ರಿ ಆವಾಸ್ʼ ಯೋಜನೆ ಅಡಿ ಅರ್ಜಿ ಸಲ್ಲಿಸಿದ ಬಿಜೆಪಿ!

Waynad : ಇತ್ತೀಚಿಗೆ ನವ ರಾಯಪುರದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಾತನಾಡುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ನನಗೆ ಸ್ವಂತ ಮನೆ ಇಲ್ಲ ಎಂದು ನೀಡಿದ ಹೇಳಿಕೆಯನ್ನು ಗುರಿಯಾಗಿಸಿಕೊಂಡ ವಯನಾಡ್(Waynad) ಬಿಜೆಪಿ, ರಾಹುಲ್‌ ಗಾಂಧಿ ಹೆಸರಿನಲ್ಲಿ ಪ್ರಧಾನ ಮಂತ್ರಿ (bjp slam rahul gandhi) ಆವಾಸ್‌ ಯೋಜನೆ ಅಡಿ ಮನೆಯೊಂದಕ್ಕೆ ಅರ್ಜಿ ಸಲ್ಲಿಸಿದೆ!

ಕಾಂಗ್ರೆಸ್ ನಾಯಕ ಮತ್ತು ವಯನಾಡ್ ಸಂಸದರಾದ ರಾಹುಲ್ ಗಾಂಧಿ ಅವರಿಗೆ ಸ್ವಂತ ಮನೆ ಇಲ್ಲ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಬುಧವಾರ ತೀವ್ರ ಟೀಕೆ ಮಾಡಿದೆ.

ವಯನಾಡ್‌ನ ಬಿಜೆಪಿ ನಾಯಕತ್ವವು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಅವರಿಗೆ ಸ್ವಂತ ಮನೆ ಇಲ್ಲ ಎಂಬ ಹೇಳಿಕೆಯನ್ನು ಮುಂದಿಟ್ಟುಕೊಂಡು,

ಮನೆಯೊಂದಕ್ಕೆ ಅವರ ಪರವಾಗಿ ಅರ್ಜಿ ಸಲ್ಲಿಸಿದೆ. ಅರ್ಜಿಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸೇರಿಸಿ,

ಅವರಿಗೆ ಮನೆ ಮತ್ತು ನಿವೇಶನ ನೀಡುವಂತೆ ಬಿಜೆಪಿ ಮನವಿ ಮಾಡಿದೆ.

ಇನ್ನು ಈ ಬಗ್ಗೆ ಬಿಜೆಪಿ ವಯನಾಡು ಜಿಲ್ಲಾಧ್ಯಕ್ಷ ಕೆ.ಪಿ.ಮಧು(K.P.Madhu) ಮಾತನಾಡಿದ್ದು, ಜಿಲ್ಲೆಯ ಹೃದಯ ಭಾಗದಲ್ಲಿರುವ ಕಲ್ಪೆಟ್ಟಾದಲ್ಲಿ ರಾಹುಲ್ ಗಾಂಧಿಗೆ ಮನೆ, ಜಮೀನು ಕೊಡಿಸಲು ಪ್ರಯತ್ನಿಸುತ್ತಿದ್ದೇವೆ.

https://youtu.be/uVgY7puLBWg

ರಾಹುಲ್ ಗಾಂಧಿ ಅವರು ಸ್ವಂತ ಮನೆ ಹೊಂದಲು ವಯನಾಡ್ ಸೂಕ್ತ ಸ್ಥಳವಾಗಿದೆ. ಏಕೆಂದರೆ ಅವರು ತಮ್ಮ ರಜೆಯನ್ನು ಕಳೆಯಲು (bjp slam rahul gandhi) ಇಲ್ಲಿಗೆ ಬರುತ್ತಿದ್ದಾರೆ ಎಂದು ಕೆ.ಪಿ ಮಧು ಹೇಳಿದ್ದಾರೆ.

ಈ ಮೂಲಕ ವಯನಾಡ್‌ ಬಿಜೆಪಿ ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಗುರಿಯಾಗಿಸಿ, ತೀವ್ರ ವ್ಯಂಗ್ಯವಾಡಿದೆ.

ಇತ್ತೀಚೆಗಷ್ಟೇ ಕಾಂಗ್ರೆಸ್‌ನ ಸರ್ವಸದಸ್ಯರ ಅಧಿವೇಶನದಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ(Rahul Gandhi), ನನಗೆ ಸ್ವಂತ ಮನೆ ಇಲ್ಲ,

ನನಗೆ ಈಗ 52 ವರ್ಷ. ಮನೆಯಲ್ಲಿ ವಿಚಿತ್ರ ವಾತಾವರಣವಿತ್ತು. ನಾನು ಮಮ್ಮಿಯ(ಸೋನಿಯಾ ಗಾಂಧಿ) ಬಳಿಗೆ ಹೋಗಿ ಏನಾಯಿತು ಎಂದು ಕೇಳಿದೆ.

ನಾವು ಮನೆಯಿಂದ ಹೋಗುತ್ತಿದ್ದೇವೆ ಎಂದು ಮಾ ನನಗೆ ಹೇಳಿದರು. ಅದು ನಮ್ಮ ಮನೆ ಅಂತ ಅಂದುಕೊಂಡಿದ್ದೆ.

ಹಾಗಾಗಿ ನಾವು ನಮ್ಮ ಮನೆಯನ್ನು ಏಕೆ ಬಿಟ್ಟು ಹೋಗುತ್ತಿದ್ದೇವೆ ಎಂದು ನಾನು ನನ್ನ ತಾಯಿಯನ್ನು ಕೇಳಿದೆ,

ಆಗ ನನ್ನ ತಾಯಿ ನನಗೆ ಮೊದಲ ಬಾರಿಗೆ ಇದು ನಮ್ಮ ಮನೆ ಅಲ್ಲ,

ನಾವು ಅದನ್ನು ಬಿಟ್ಟು ಹೋಗಬೇಕು ಎಂದು ಹೇಳಿದರು ಎಂದು ರಾಹುಲ್‌ ಗಾಂಧಿ ವೇದಿಕೆಯ ಮೇಲೆ ನಿಂತು ಮಾತನಾಡುವಾಗ ಈ ಸಂಗತಿ ಹಂಚಿಕೊಂಡಿದ್ದಾರೆ.

ತಮಗೆ ಸ್ವಂತ ಮನೆ ಯಾಕೆ ಇಲ್ಲ ಎಂಬ ಹೇಳಿಕೆಗೆ ಅವರು ನೀಡಿದ ಕಾರಣ ಈ ರೀತಿ ಇದೆ. ರಾಹುಲ್‌ ಗಾಂಧಿ ಅವರು ನೀಡಿದ ಈ ಹೇಳಿಕೆಯನ್ನು ಬಿಜೆಪಿ ತೀವ್ರ ವ್ಯಂಗ್ಯಮಾಡಿದೆ.

Exit mobile version