ರಾಜ್ಯ ಕಂಡ ಪ್ರಪ್ರಥಮ ಏಕಪಕ್ಷದ ಸಮ್ಮಿಶ್ರ ಸರ್ಕಾರವಿದು : ಬಿಜೆಪಿ ವ್ಯಂಗ್ಯ

Karnataka: ರಾಜ್ಯ ಕಂಡ ಪ್ರಪ್ರಥಮ ಏಕಪಕ್ಷದ ಸಮ್ಮಿಶ್ರ ಸರ್ಕಾರವಿದು. ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶುರುವಾದ ಕಲೆಕ್ಷನ್ ದಂಧೆ ಈಗ ಕಾಂಗ್ರೆಸ್ ಪಕ್ಷದಲ್ಲೇ ಕದನ ಶುರು ಮಾಡಿದೆ ಎಂದು ರಾಜ್ಯ ಬಿಜೆಪಿ (BJP) ಕಾಂಗ್ರೆಸ್ ಸರ್ಕಾರವನ್ನು ವ್ಯಂಗ್ಯ ಮಾಡಿದೆ

ಈ ಕುರಿತು ಸರಣಿ ಟ್ವೀಟ್ (Tweet) ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶುರುವಾದ ಕಲೆಕ್ಷನ್ ದಂಧೆ ಈಗ ಕಾಂಗ್ರೆಸ್ ಪಕ್ಷದಲ್ಲೇ ಕದನ ಶುರು ಮಾಡಿದೆ. ಪರಿಣಾಮವಾಗಿ, ಡಿ. ಕೆ. ಶಿವಕುಮಾರ್ (D.K.Shivakumar) ಅವರು ಸದ್ಯದಲ್ಲೇ ಸಿದ್ದರಾಮಯ್ಯರವರನ್ನು ಇಳಿಸಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕರಿಂದಲೇ ಮಾಹಿತಿ. ತಮ್ಮ ತಂದೆಯವರ ಪ್ರಭಾವ ಬಳಿಸಿ ಎಲ್ಲೆಲ್ಲೂ ತನ್ನದೇ ನಡೆಯಲಿ ಎನ್ನುತ್ತಿರುವ ಪ್ರಿಯಾಂಕ್ ಖರ್ಗೆಯವರು. ಮೈಸೂರು ಪ್ರವಾಸದ ಪುಕಾರು ಹಬ್ಬಿಸಿ ಕೆಪಿಸಿಸಿ ಅಧ್ಯಕ್ಷರನ್ನೇ ಅಲುಗಾಡಿಸಿದ ಸತೀಶ್ ಜಾರಕಿಹೊಳಿಯವರು. ಈಗ ಕೆಲಸ ಬಿಟ್ಟು ವಿದೇಶಕ್ಕೆ ಹಾರಲು ಸಜ್ಜಾದ ಇತರ ಸನ್ಮಿತ್ರರು. ಕತ್ತಲಾದ ಮೇಲಷ್ಟೇ ಚರ್ಚಿಸಬಹುದಾದ ವಿಚಾರ ಮತ್ತು ಲೆಕ್ಕಾಚಾರಗಳ ಮಾತುಕತೆಗೆ “ಆಯ್ದ ಆಮಂತ್ರಿತರ ಡಿನ್ನರ್.” ಹಣಕಾಸಿನ ಲೆಕ್ಕಾಚಾರಗಳಿರುವಾಗ ಭಿನ್ನಾಭಿಪ್ರಾಯ ಸಹಜ. ಕಲೆಕ್ಷನ್ (Colletion) ವ್ಯವಹಾರ ಬದಿಗಿಟ್ಟು ಹೊರರಾಜ್ಯ ಚುನಾವಣೆಗಳಿಗೆ ಫಂಡ್ ಕಳಿಸಲು ಅಸಾಧ್ಯ ಎಂಬುದನ್ನು ಹೈ ಕಮಾಂಡ್ಗೆ ತಿಳಿಸಿ. ರಾಜ್ಯ ಸರ್ಕಾರ ಸುಲಲಿತವಾಗಿ ನಡೆಯುತ್ತದೆ ಎಂದು ಟೀಕಿಸಿದೆ.

ಇನ್ನೊಂದು ಟ್ವೀಟ್ನಲ್ಲಿ ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಠಾನಕ್ಕಾಗಿ ರಾಜ್ಯದ ಜನತೆಯಿಂದ ಛೀಮಾರಿ ಹಾಕಿಸಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ವಾರಂಟಿಯೇ ಇಲ್ಲ. ಶಾಸಕರು ಸ್ಪರ್ಧೆಗೆ ಬಿದ್ದವರಂತೆ ದಿನಕ್ಕೊಬ್ಬರು ಸಿಎಂ ಸಿದ್ದರಾಮಯ್ಯ (Siddaramaiah) ಅವರ ನಾಯಕತ್ವವನ್ನು ಹಾದಿ ಬೀದಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಇದೆಲ್ಲವನ್ನೂ ಗಮನಿಸಿದರೆ, ಸಿಎಂ ಸಿದ್ದರಾಮಯ್ಯರವರ ಕುರ್ಚಿಯ ವ್ಯಾಲಿಡಿಟಿ, ದೀಪಾವಳಿ ನಂತರ ಮುಗಿದರೂ ಅಚ್ಚರಿಯಿಲ್ಲ ಎಂದು ಲೇವಡಿ ಮಾಡಿದೆ.

Exit mobile version