Manipur: ಮೇ 3 ರಿಂದ ಮಣಿಪುರದಲ್ಲಿ ಶುರುವಾದ ಜನಾಂಗೀಯ ಹಿಂಸಾಚಾರವನ್ನು ಕೂಡಲೇ ತಡೆಹಿಡಿಯಬಹುದಿತ್ತು. ಆದರೆ (BJP vs Biren Singh) ರಾಜ್ಯ ಸರ್ಕಾರದ ಸಹಭಾಗಿತ್ವವಿದ್ದ
ಕಾರಣದಿಂದಲೇ ಈ ಹಿಂಸಾಚಾರದಲ್ಲಿ ಅದು ಇಲ್ಲಿಯವರೆಗೂ ಬೆಳೆದು ದೊಡ್ಡದಾಯಿತು ಎಂದು ಸ್ವತಃ ಮಣಿಪುರದ ಬಿಜೆಪಿ (BJP) ಶಾಸಕ ಪೋಲಿಯೆನ್ಲಾಲ್ ಹಾಕಿಪ್ (Polienlal Hokip) ಆರೋಪಿಸಿದ್ದಾರೆ.

ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಾಗ ಅದನ್ನು ಜನಾಂಗೀಯ ಕೋಮು ಹಿಂಸಾಚಾರ ಎಂದು ಮರೆಮಾಚಲು ಖುದ್ದಾಗಿ ಮುಖ್ಯಮಂತ್ರಿಗಳೆ ಡ್ರಗ್ಸ್ (Drugs) ವಿರುದ್ಧದ ಸಮರ ಎಂಬಂತೆ ತಪ್ಪಾಗಿ ಬಿಂಬಿಸಿದರು.
ಇಲ್ಲಿಂದಲೇ ರಾಜ್ಯದಲ್ಲಿ ಜಟಿಲತೆ ಆರಂಭವಾಗಿದ್ದು, ಈ ಕುರಿತು ಇಂಡಿಯಾ ಟುಡೆ ಪತ್ರಿಕೆಗೆ ವಿವರವಾದ ಲೇಖನ ಬರೆದಿರುವ ಅವರು, ತದ ನಂತರ ರಾಜ್ಯ ಸರ್ಕಾರದ ಪಡೆಗಳನ್ನು ಕುಕಿ ಸಮುದಾಯದ ವಿರುದ್ಧ,
ಮೈತೇಯಿ ಸಮುದಾಯ ದಾಳಿ ಮಾಡಲು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಇಂಡಿಯಾ ಟುಡೆ (India Today) ಪತ್ರಿಕೆಗೆ ವಿವರವಾದ ಲೇಖನ ಬರೆದಿರುವ ಅವರು ಗಂಭೀರ ಆರೋಪ ವ್ಯಕ್ತ ಪಡಿಸಿದ್ದಾರೆ.
ಮೇ ತಿಂಗಳಿನಲ್ಲಿಯೇ ಬಿಜೆಪಿ ಶಾಸಕ ಪೋಲಿಯೆನ್ಲಾಲ್ ಹಾಕಿಪ್ (Polienlal Hokip) ಸೇರಿದಂತೆ 10 ಶಾಸಕರು ಹಿಂಸಾಚಾರವನ್ನು ತಡೆಯುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ರವರಿಗೆ
(N. Biren Singh) ಪತ್ರ ಬರೆದಿದ್ದರು. ಆದರೆ ಈ ಪತ್ರದಲ್ಲಿ ಕುಕಿ ಸಮುದಾಯದ ಮೇಲೆ ಬಹುಸಂಖ್ಯಾತ ಮೈತೇಯಿ ಸಮುದಾಯದವರು ಹಿಂಸಾಚಾರ ನಡೆಸುತ್ತಿದ್ದು ಅದನ್ನು ಬಿಜೆಪಿ ಆಡಳಿತ ಸರ್ಕಾರ ಮೌನವಾಗಿ
ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದರು. ರಾಜ್ಯದಲ್ಲಿ ಕುಕಿ ಪ್ರಾಬಲ್ಯವಿರುವ ಜಿಲ್ಲೆಗಳಿಗೆ ಪ್ರತ್ಯೇಕ ಆಡಳಿತದ ಬೇಡಿಕೆ ಇಟ್ಟಿದ್ದರು. ಆದ್ರೆ ರಾಜ್ಯದ ಸಮಗ್ರತೆಯ ವಿಚಾರ ಮುಂದಿಟ್ಟು ಆ ಬೇಡಿಕೆಯನ್ನು ಮುಖ್ಯಮಂತ್ರಿಗಳು ತಿರಸ್ಕರಿಸಿದ್ದರು.
ಕುಕಿಗಳ ಮೇಲಿನ ದಾಳಿಯನ್ನು ಪ್ರಾರಂಭದಲ್ಲಿ ಡ್ರಗ್ಸ್ (Drugs) ವಿರುದ್ಧದ ಯುದ್ಧ ಎಂಬರ್ಥದಲ್ಲಿ ರಾಜ್ಯದ ಯಂತ್ರಾಂಗವನ್ನು ದುರಪಯೋಗಪಡಿಸಕೊಳ್ಳಲಾಯಿತು. ಇದು ಮುಂದುವರೆದಿದ್ದರಿಂದ ಮೈತೇಯಿಗಳು
ರಕ್ತಪಾತಕ್ಕೆ ಕಾರಣರಾದರು. ಅಲ್ಲದೇ ರಾಜ್ಯದ ಸಂಪತ್ತಿನ ಮೇಲಿನ ಹೆಚ್ಚಿನ ಹಿಡಿತ ಮೈತೇಯಿಗಳ ಕೈಯಲ್ಲಿದೆ. ಸಂವಿಧಾನದ ಅಡಿಯಲ್ಲಿ ಹಕ್ಕುಗಳ ಮೇಲಿನ ದೀರ್ಘಕಾಲದ ಸಂಘರ್ಷವು ರಾಜ್ಯ ರಚನೆಯ
ಪೂರ್ವದ ದಿನಗಳಿಂದಲೂ (BJP vs Biren Singh) ಅಸ್ತಿತ್ವದಲ್ಲಿದೆ.

ಗುಡ್ಡಗಾಡು ಪ್ರದೇಶಗಳ ಸಮಿತಿಯ ಅಧಿಕಾರವನ್ನು ಶಾಸನ ಸಭೆಗಳಲ್ಲಿಯೂ ಸಹ ಕಿತ್ತುಕೊಳ್ಳಲಾಗಿದೆ. ಕಾಯ್ದಿರಿಸಿದ ಅರಣ್ಯಗಳು ಮತ್ತು ಸಂರಕ್ಷಿತ ಅರಣ್ಯಗಳಾಗಿ ಕುಕಿ ಸಮುದಾಯದ ಹಿಡಿತ ಹೊಂದಿರುವ
ಬುಡಕಟ್ಟು ಭೂಮಿಗಳನ್ನು ಬದಲಾಯಿಸಲಾಗಿದೆ. ಅಲ್ಲದೇ ಜನಸಂಖ್ಯಾವಾರು ಮೀಸಲಾತಿ ಪರಿಚಯಿಸಲು ಮುಂದಾಗುತ್ತಿರುವುದು ಕುಕಿಗಳಿಗೆ ತಮ್ಮ ಅಸ್ತಿತ್ವದ ಪ್ರಶ್ನೆಯಾಗಿ ಮಾರ್ಪಟ್ಟರೆ, ಮೈತೇಯಿಗಳಿಗೆ ಕಣಿವೆ
ಪ್ರದೇಶದ ಭೂಮಿಯ ಆಸೆಯಾಗಿ ಕಂಡಿದೆ ಎಂದು ಪೋಲಿಯೆನ್ಲಾಲ್ ಹಾಕಿಪ್ ಲೇಖನದಲ್ಲಿ ವಿವರಿಸಿದ್ದಾರೆ.
ಮುಖ್ಯಮಂತ್ರಿ ಬಿರೇನ್ ಸಿಂಗ್ ಕುಕಿಗಳ ವಿರುದ್ಧದ ಹಿಂಸಾಚಾರದಲ್ಲಿ ಮೈತೆ ಲೀಪುನ್ (Maite Leipun) ಮತ್ತು ಅರಾಂಬೈ ತೆಂಗೋಲ್ನಂತಹ (Arambai Tengol) ಮೂಲಭೂತ ಗುಂಪಿನೊಂದಿಗೆ
ಕೈಜೋಡಿಸಿದ್ದರಿಂದ ಹಿಂಸಾಚಾರ ಹೆಚ್ಚಾಯಿತು ಎಂದು ಅವರು ತಿಳಿಸಿದ್ದಾರೆ. ಇನ್ನು ಭ್ರಷ್ಟಾಚಾರವು ರಾಜ್ಯದಲ್ಲಿ ನಿರ್ವಹಿಸಲಾಗದ ಮಟ್ಟ ತಲುಪಿದೆ. ಇದರಿಂದ ಕುಕಿಗಳು ಅವಕಾಶ ವಂಚಿತರಾಗುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಆಳುವವರು ಪಕ್ಷಪಾತ ಮತ್ತು ತಾರತಮ್ಯ ಮಾಡಿದರು.
ಪ್ರಧಾನಿಗಳು ತಮ್ಮ ಆದ್ಯತೆಗಳನ್ನು ಪರಿಗಣಿಸುವುದರಲ್ಲಿ ಎಡವಿದ್ದಾರೆ. ನಾವು ಪ್ರಧಾನಿಯವರನ್ನು ಭೇಟಿಮಾಡಿ ಮಣಿಪುರದ ಸಮಸ್ಯೆಗಳನ್ನು ಎತ್ತಿಡಲು ಪ್ರಯತ್ನಿಸುತ್ತಿದ್ದರು ಅವರು ಅದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.
ಹಾಗಾಗಿ ಈಗಲೂ ಮಣಿಪುರದ ಹಿಂಸಾಚಾರದ ನಿಯಂತ್ರಣಕ್ಕೆ ಪ್ರಧಾನಿಗಳ ಮಧ್ಯಪ್ರವೇಶ ಅನಿವಾರ್ಯ ಎಂದು ನ್ಯೂಸ್ ಲಾಂಡ್ರಿಗೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಭವ್ಯಶ್ರೀ ಆರ್.ಜೆ