ಬಜೆಟ್ನಿಂದ ಸಿಕ್ಕಿರುವುದು ಎರಡೇ, “ಸಾಲದ ಹೊರೆ – ತೆರಿಗೆಯ ಬರೆ”- ಬಿಜೆಪಿ ಟೀಕೆ

Karnataka: ರಾಜ್ಯದಲ್ಲಿ ಸಿದ್ದರಾಮಯ್ಯರವರು ಮಂಡಿಸಿರುವ 2023-24ರ ಸಾಲಿನ ಬಜೆಟ್ನಿಂದ (bjp vs congress budget) ಸಿಕ್ಕಿರುವುದು ಎರಡೇ, “ಸಾಲದ ಹೊರೆ – ತೆರಿಗೆಯ ಬರೆ”

ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನದ ಹೆಸರಿನಲ್ಲಿ ಕರ್ನಾಟಕಕ್ಕೆ ಅನಿಯಮಿತ ಸಾಲದ ಹೊರೆ. ಗ್ಯಾರಂಟಿಗಳನ್ನು ನಂಬಿ ಮೋಸ ಹೋದ ಕನ್ನಡಿಗರಿಗೆ ತೆರಿಗೆಯ ಬರೆ ಎಂದು ರಾಜ್ಯ ಬಿಜೆಪಿ

ಸಿದ್ದರಾಮಯ್ಯನವರು (Siddaramaiah) ಮಂಡಿಸಿರುವ ಬಜೆಟ್ ಅನ್ನು ಟೀಕಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ (BJP). ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಾಲ ಮಾಡಿರುವ ಆರ್ಥಿಕ ವರ್ಷ. ಸರ್ಕಾರ ಮಾಡಿರುವ ಸಾಲ ಉತ್ಪಾದಕ ವಲಯಕ್ಕೆ ಪೂರಕವಾಗಿರದೇ,

ಅನುತ್ಪಾದಕ ವಲಯಕ್ಕೆ ಮೀಸಲು. ಆದಾಯವನ್ನು ಹೆಚ್ಚಿಸಲು ಯಾವುದೇ ಉಪಕ್ರಮಗಳನ್ನು ಘೋಷಿಸದೇ, ಕೇವಲ ಸಾಲದ ಹೊರೆಯ ಹೇರಿಕೆ. ಕಾಂಗ್ರೆಸ್ ಗ್ಯಾರಂಟಿಗಳಿಗೆ (Guarantee) ಒದಗಿಸಬೇಕಾದ

ಹಣಕಾಸಿನ ಗೊಂದಲ ಇನ್ನೂ ಮುಂದುವರೆದಿದೆ. ಶಿಕ್ಷಣ, ಆರೋಗ್ಯ, ಕೃಷಿ, ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಮೀಸಲಿರಿಸಲಾದ ಹಣಕಾಸಿನಲ್ಲಿ ನಮ್ಮ

ಇದನ್ನು ಓದಿ: ಸಿದ್ದರಾಮಯ್ಯ ಬಜೆಟ್‌ ಟಾಪ್ ಆರು ಹೈಲೈಟ್ಸ್

ಬಜೆಟ್ಗೆ ಹೋಲಿಸಿದರೆ ಕಡಿತವಾಗಿದೆ ಎಂದು (bjp vs congress budget) ಟೀಕಿಸಿದೆ.

ಇನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು, ಇದೊಂದು ನಿರಾಶದಾಯಕ ಬಜೆಟ್, ಆಯವ್ಯಯ ಮಂಡನೆಯಲ್ಲೂ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡಿದೆ.

ದ್ವೇಷದ ಬಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆದ್ದಿದ್ದೇವೆಂದು ಬೊಗಳೆ ಬಿಟ್ಟಿದ್ದ ಈ ಕಾಂಗ್ರೆಸ್ (Congress) ಸರ್ಕಾರದ ಬಜೆಟ್ ನಲ್ಲಿಯೂ ತನ್ನ ರಾಜಕೀಯ ಪ್ರೇರಿತ ದ್ವೇಷವನ್ನು ವ್ಯಕ್ತ ಪಡಿಸಿ,

ಆಯವ್ಯಯದ ಘನತೆಗೆ ಮಸಿ ಬಳೆದಿದೆ. ವಾಸ್ತವ ಹಾಗೂ ಭವಿಷ್ಯದ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟತೆ ನೀಡದೇ, ಭೂತಕಾಲದ ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಕಾಲಹರಣ ಮಾಡಿದೆ ಎಂದು ಟೀಕಿಸಿದ್ದಾರೆ.

ಅದೇ ರೀತಿ ಮಾಜಿ ಸಿಎಂ ಯಡಿಯೂರಪ್ಪನವರು (Yediyurappa), ಆಸ್ತಿ ನೋಂದಣಿ ಶುಲ್ಕ ಹೆಚ್ಚು ಮಾಡಿ ಜನಸಾಮಾನ್ಯರ ಮನೆ ಕೊಳ್ಳುವ ಕನಸಿಗೆ ಕೊಳ್ಳಿ ಇಡಲಾಗಿದೆ. ಮಧ್ಯಮ ವರ್ಗದವರು ಬಳಸುವ

ಸ್ಕೂಟರು, ಬೈಕು ಹಾಗೂ ಐಷಾರಾಮಿಯಲ್ಲದ ಕಾರುಗಳ ಮೇಲೆಯೂ ತೆರಿಗೆಯ ಹೊರೆ ಏರಿಸಿ, ಕಾಂಗ್ರೆಸ್ (Congress) ಸರ್ಕಾರ ಜನಸಾಮಾನ್ಯರ ಬದುಕನ್ನೇ ವ್ಯಂಗ್ಯವಾಡುತ್ತಿದೆ. ಗ್ಯಾರಂಟಿ ಯೋಜನೆಗಳ

ಜಾರಿಗೆ ಹಲವು ಷರತ್ತುಗಳನ್ನು ವಿಧಿಸಿ ಜನರಿಗೆ ಈಗಾಗಲೇ ಮೋಸ ಮಾಡಿರುವ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ತೆರಿಗೆ ಹೆಚ್ಚಳದ ಮೂಲಕ ಜನರಿಗೆ ಬರೆ ಎಳೆಯುವುದು ಖಚಿತ.

ರಾಜ್ಯದ ಸಮಗ್ರ ಅಭಿವೃದ್ಧಿ ಕಲ್ಪನೆ ಇಲ್ಲದ, ತೆರಿಗೆ ಹೊರೆ ಇರುವ ನಿರಾಶದಾಯಕ ಬಜೆಟ್ ಎಂದಿದ್ದಾರೆ.

Exit mobile version